ಐಸಿಸಿಯಿಂದ ಹೊಸ ಮಾದರಿಯ ಕ್ರಿಕೆಟ್ ವರ್ಲ್ಡ್​ ಕಪ್ ಸೂಪರ್ ಲೀಗ್; ಯಾವಾಗ?, ಎಲ್ಲಿ?

ಈ ಲೀಗ್​ನಲ್ಲಿ ಒಂದು ತಂಡ 8 ಸರಣಿಗಳನ್ನು ಆಡಬೇಕಿದೆ. ಒಂದು ತಂಡವು ತನ್ನ ತವರಲ್ಲಿ ಒಟ್ಟು ನಾಲ್ಕು ಸರಣಿಗಳನ್ನು ಆಡಿದರೆ, ಉಳಿದ ನಾಲ್ಕು ಸರಣಿಗಳನ್ನು ವಿದೇಶದಲ್ಲಿ ಆಡಬೇಕು.

ಟೀಂ ಇಂಡಿಯಾ ಆಟಗಾರರು.

ಟೀಂ ಇಂಡಿಯಾ ಆಟಗಾರರು.

 • Share this:
  ಜುಲೈ 27ರ ಸೋಮವಾರ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಅನ್ನು ಅಧಿಕೃತವಾಗಿ ಆರಂಭಿಸಿದೆ. ಈ ಲೀಗ್‌ನ ಪಂದ್ಯಗಳು ಜುಲೈ 30ರಿಂದ ನಡೆಯಲಿರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಏಕದಿನ ಸರಣಿಯೊಂದಿಗೆ ಆರಂಭಗೊಳ್ಳಲಿದೆ. ಈ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧಿಕೃತ ಮಾಹಿತಿ ಹೊರಹಾಕಿದೆ. ಈ ಮೂಲಕ ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ ಕೂಟಕ್ಕೆ ಐಸಿಸಿ ಈಗಲೇ ಸಿದ್ಧತೆ ಶುರು ಮಾಡಿಕೊಂಡಿದೆ.

  2023ರಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗಾಗಿ ತಂಡಗಳನ್ನು ಆರಿಸುವುದಕ್ಕಾಗಿ ಐಸಿಸಿಯು ಈ ಕ್ರಿಕೆಟ್ ವರ್ಲ್ಡ್ ಕಪ್ ಸೂಪರ್ ಲೀಗ್ ಆರಂಭಿಸುತ್ತಿದೆ. ಇದರಲ್ಲಿ ಅಗ್ರ ಸ್ಥಾನದಲ್ಲಿರುವ 7 ತಂಡಗಳು ಸ್ವಯಂಚಾಲಿತವಾಗಿ ಭಾರತದಲ್ಲಿ ನಡೆಯುವ ಪ್ರತಿಷ್ಠಿತ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.

  400ಕ್ಕೂ ಅಧಿಕ T20 ಪಂದ್ಯಗಳನ್ನಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಈ ಆಟಗಾರರು..!

  12 ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳು ಮತ್ತು ಸಹ ಸದಸ್ಯರಾಷ್ಟ್ರ ನೆದರ್ಲೆಂಡ್‌ ಸೂಪರ್‌ ಲೀಗ್‌ನಲ್ಲಿ ಪಾಲ್ಗೊಳ್ಳಲಿವೆ. ಅರ್ಹತೆ ಪಡೆಯಲು ವಿಫ‌ಲವಾದ ಬಾಕಿ 5 ತಂಡಗಳು ಮತ್ತು ಇತರ 5 ಸಹ ಸದಸ್ಯ ರಾಷ್ಟ್ರಗಳು 2023ರಂದು ಇನ್ನೊಂದು ಸುತ್ತಿನ ಅರ್ಹತಾ ಕೂಟದಲ್ಲಿ ಭಾಗವಹಿಸಲಿವೆ.

  ಈ ಲೀಗ್​ನಲ್ಲಿ ಒಂದು ತಂಡ 8 ಸರಣಿಗಳನ್ನು ಆಡಬೇಕಿದೆ. ಒಂದು ತಂಡವು ತನ್ನ ತವರಲ್ಲಿ ಒಟ್ಟು ನಾಲ್ಕು ಸರಣಿಗಳನ್ನು ಆಡಿದರೆ, ಉಳಿದ ನಾಲ್ಕು ಸರಣಿಗಳನ್ನು ವಿದೇಶದಲ್ಲಿ ಆಡಬೇಕು. ಒಂದು ಪಂದ್ಯ ಗೆದ್ದರೆ 10 ಅಂಕಗಳು ಸಿಗಲಿವೆ. ಒಂದು ವೇಳೆ ಪಂದ್ಯದ ಫಲಿತಾಂಶ ಬರದಿದ್ದರೆ ಅಥವಾ ಪಂದ್ಯ ಟೈ ಆದರೆ, ಎರಡೂ ತಂಡಗಳಿಗೆ ತಲಾ ಐದು ಅಂಕಗಳನ್ನು ನೀಡಲಾಗುವುದು.

  ಇನ್ನೂ ಒಂದು ವೇಳೆ ಯಾವುದೇ ತಂಡವು ಸರಣಿಯಲ್ಲಿ ಮೂರು ಪಂದ್ಯಗಳಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದರೆ, ಆ ಪಂದ್ಯದ ಫಲಿತಾಂಶಗಳನ್ನು ಲೀಗ್‌ಗೆ ಸೇರಿಸಲಾಗುವುದಿಲ್ಲ.

  ಟೀಮ್ ಇಂಡಿಯಾ ವಿರುದ್ಧ ಅತ್ಯಂತ ಯಶಸ್ವಿ ಬ್ಯಾಟ್ಸ್​ಮನ್​ ಯಾರು ಗೊತ್ತಾ?

  ಅಂತರಾಷ್ಟ್ರೀಯ ಕ್ರಿಕೆಟ್‌ ಆಡುವ ತಂಡಗಳ ನಡುವೆ ನಡೆಯುವ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ಮಹತ್ವ ಕಳೆದುಕೊಳ್ಳುತ್ತಿದ್ದು, ಅದರಿಂದ ಬರುವ ಆದಾಯ ಕೂಡ ಕಡಿಮೆಯಾಗುತ್ತಿದೆ. ಹೀಗಾಗಿ ದ್ವಿಪಕ್ಷೀಯ ಏಕದಿನ ಕ್ರಿಕೆಟ್‌ ಸರಣಿಗಳಿಗೆ ರೋಚಕತೆ ತುಂಬುವ ಉದ್ದೇಶದಿಂದ ವಿಶ್ವ ಸೂಪರ್‌ ಲೀಗ್ ಹೆಸರಿನ ಹೊಸ ಮಾದರಿಯ ಸ್ಪರ್ಧೆಯನ್ನು ಪರಿಚಯಿಸಲಾಗಿದೆ.

  ಟೆಸ್ಟ್‌ ಕ್ರಿಕೆಟ್‌ ಸರಣಿಗಳಿಗೂ ಜೀವ ತುಂಬಲು ಐಸಿಸಿ ಇದೇ ರೀತಿಯ ಮಾರ್ಗ ಅನುಸರಿಸಿ ಕಳೆದ ವರ್ಷ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಸ್ಪರ್ಧೆಯ ಪರಿಚಯ ಮಾಡಿತ್ತು. ಇದೇ ಮಾದರಿಯಲ್ಲಿ ಈಗ ವಿಶ್ವ ಸೂಪರ್‌ ಲೀಗ್‌ ಕೂಡ ಜರುಗಲಿದೆ.

  'ಈ ಲೀಗ್ ಮುಂದಿನ ಮೂರು ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ಗೆ ಪ್ರಸ್ತುತತೆ ಮತ್ತು ಸಂದರ್ಭವನ್ನು ತರಲಿದೆ. ಇದು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ 2023ಕ್ಕೆ ಅರ್ಹತೆ ನಿರ್ಧರಿಸಲಿದೆ. ಈ ಸೂಪರ್ ಲೀಗ್ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಲೀಗ್ ಕ್ರಿಕೆಟ್‌ನ ಹೆಚ್ಚಿನ ಮನರಂಜನೆ ನೀಡಲಿದೆ,' ಎಂದು ಐಸಿಸಿ ಕಾರ್ಯಾಚರಣೆಯ ಪ್ರಧಾನ ವ್ಯವಸ್ಥಾಪಕ ಜೆಫ್ ಅಲ್ಲಾರ್ಡೈಸ್ ಹೇಳಿದ್ದಾರೆ.
  Published by:Vinay Bhat
  First published: