2023 ವಿಶ್ವಕಪ್​ಗೂ ಮುನ್ನ ವರ್ಲ್ಡ್​ಕಪ್ ಲೀಗ್: ಅರ್ಹತೆಗಾಗಿ ಹೊಸ ತಂಡಗಳ ಹಣಾಹಣಿ

world cup league 2: ಏಳು ತಂಡಗಳು ಒಟ್ಟು 21 ತ್ರಿಕೋನ ಸರಣಿಗಳ ಮಾದರಿಯಲ್ಲಿ ಒಟ್ಟು 126 ಪಂದ್ಯಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ತಂಡಗಳು ಮುಂದಿನ 2 ವರ್ಷಗಳಲ್ಲಿ ಪ್ರತಿ ತಂಡಗಳು 36 ಏಕದಿನ ಪಂದ್ಯಗಳನ್ನು ಆಡಲಿದೆ.

zahir | news18-kannada
Updated:August 14, 2019, 3:33 PM IST
2023 ವಿಶ್ವಕಪ್​ಗೂ ಮುನ್ನ ವರ್ಲ್ಡ್​ಕಪ್ ಲೀಗ್: ಅರ್ಹತೆಗಾಗಿ ಹೊಸ ತಂಡಗಳ ಹಣಾಹಣಿ
wc
  • Share this:
ವಿಶ್ವ ಕ್ರಿಕೆಟ್​ನ ನೂತನ ವಿಶ್ವ ಚಾಂಪಿಯನ್ ಆಗಿ ಇಂಗ್ಲೆಂಡ್ ತಂಡ ಹೊರಹೊಮ್ಮಿ ತಿಂಗಳುಗಳು ಕಳೆಯುವ ಮುನ್ನವೇ 2023 ರ ವರ್ಲ್ಡ್​ಕಪ್​ಗಾಗಿ ಭರ್ಜರಿ ತಯಾರಿಗಳು ಆರಂಭವಾಗಿವೆ. ಭಾರತದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್​ಗೆ ಮತ್ತಷ್ಟು ರಂಗೇರಿಸಲು ನಿರ್ಧರಿಸಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇದೀಗ ವಿಶ್ವಕಪ್ ಲೀಗ್​ 2ಗೆ ಚಾಲನೆ ನೀಡಿದೆ.

ಈ ಲೀಗ್​ನಲ್ಲಿ ಒಟ್ಟು ಏಳು ತಂಡಗಳು ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡವು ಮುಂದಿನ ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ. ಇದೇ ಮೊದಲ ಬಾರಿ ಐಸಿಸಿ ಏಕದಿನ ಪಂದ್ಯಗಳ ಲೀಗ್​ನ್ನು ಕ್ವಾಲಿಫೈಯರ್​ ಆಗಿ ಪರಿಚಯಿಸುತ್ತಿದ್ದು, ಇಲ್ಲಿ ನಬೀಬಿಯಾ, ನೇಪಾಳ, ಪಪ್ಪುವಾ ನ್ಯೂ ಗಾನಿಯಾ, ಸ್ಕಾಟ್ಲೆಂಡ್, ಒಮಾನ್, ಅಮೆರಿಕ ಹಾಗೂ ಯುಎಇ ತಂಡಗಳು ಪರಸ್ಪರ ವಿಶ್ವಕಪ್ ಅರ್ಹತೆಗಾಗಿ ಸೆಣಸಲಿವೆ.

ಏಳು ತಂಡಗಳು ಒಟ್ಟು 21 ತ್ರಿಕೋನ ಸರಣಿಗಳ ಮಾದರಿಯಲ್ಲಿ ಒಟ್ಟು 126 ಪಂದ್ಯಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ತಂಡಗಳು ಮುಂದಿನ 2 ವರ್ಷಗಳಲ್ಲಿ ಪ್ರತಿ ತಂಡಗಳು 36 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಅರ್ಹತಾ ಸರಣಿಯು 2019 ರಿಂದ 2022 ಜನವರಿವೆರೆಗೆ ನಡೆಯಲಿದೆ. ಇಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಮೂರು ತಂಡಗಳು 2023 ವಿಶ್ವಕಪ್​ ಅರ್ಹತಾ ಪಂದ್ಯ ಆಡುವ ಅವಕಾಶ ಪಡೆಯಲಿದೆ.

ಈಗಾಗಲೇ ಕ್ರಿಕೆಟ್​ ವರ್ಲ್ಡ್​ಕಪ್ ಲೀಗ್​ಗೆ ಚಾಲನೆ ನೀಡಲಾಗಿದ್ದು, ಮೊದಲ ತ್ರಿಕೋನ ಸರಣಿಯು ಆತಿಥೇಯ ಸ್ಕಾಟ್ಲೆಂಡ್, ಪಪ್ಪುವಾ ನ್ಯೂ ಗಾನಿಯಾ ಮತ್ತು ಒಮಾನ್ ತಂಡಗಳ  ನಡುವೆ ನಡೆಯುತ್ತಿದೆ.

 ಕ್ರಿಕೆಟ್ ವಿಶ್ವಕಪ್ ಲೀಗ್ 2 ಸರಣಿ ಒಂದು ವೇಳಾಪಟ್ಟಿ:

ಆಗಸ್ಟ್ 14 : ಒಮಾನ್ vs ಪಿಎನ್‌ಜಿ (ಪಪ್ಪುವಾ ನ್ಯೂ ಗಾನಿಯಾ).

ಆಗಸ್ಟ್ 15 : ಸ್ಕಾಟ್ಲೆಂಡ್ vs ಒಮಾನ್.ಆಗಸ್ಟ್ 17 : ಸ್ಕಾಟ್ಲೆಂಡ್ vs ಪಿಎನ್‌ಜಿ.

ಆಗಸ್ಟ್ 18 : ಸ್ಕಾಟ್ಲೆಂಡ್ vs ಒಮಾನ್.

ಆಗಸ್ಟ್ 20: ಸ್ಕಾಟ್ಲೆಂಡ್ vs ಪಿಎನ್‌ಜಿ 

ಆಗಸ್ಟ್ 21 : ಒಮಾನ್ vs ಪಿಎನ್‌ಜಿ.

 

 
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ