ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್​ನಲ್ಲಿ ಏನೆಲ್ಲಾ ನಡೆಯುತ್ತೆ?; ರಹಸ್ಯ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ

Hardhik Pandya: ನಿನ್ನೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಟೀಂ ಡ್ರೆಸ್ಸಿಂಗ್ ರೂಮ್​ನಲ್ಲೇ ಕಾಲ ಕಳೆಯಿತು. ಈ ವೇಳೆ ಹಾರ್ದಿಕ್ ಪಾಂಡ್ಯ ಡ್ರೆಸ್ಸಿಂಗ್ ರೂಮ್​ನ ಇನ್​ ಸೈಡ್​ ಪರಿಚಯ ಮಾಡಿಕೊಟ್ಟಿದ್ದಾರೆ.

Vinay Bhat | news18
Updated:June 14, 2019, 8:29 PM IST
ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್​ನಲ್ಲಿ ಏನೆಲ್ಲಾ ನಡೆಯುತ್ತೆ?; ರಹಸ್ಯ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ
  • News18
  • Last Updated: June 14, 2019, 8:29 PM IST
  • Share this:
ಬೆಂಗಳೂರು (ಜೂ. 14): ವಿಶ್ವಕಪ್​ ಆತಿಥ್ಯ ವಹಿಸಿರುವ ಇಂಗ್ಲೆಂಡ್​ನಲ್ಲಿ ಸದ್ಯ ಪಂದ್ಯಕ್ಕಿಂತ ಹೆಚ್ಚಾಗಿ ಮಳೆಯದ್ದೇ ಮಾತು. 8ಕ್ಕೂ ಹೆಚ್ಚು ಸ್ಟೇಡಿಯಂಗಳು ವಿಶ್ವಕಪ್ ಆತಿಥ್ಯ ವಹಿಸಿದರೂ ಈಗಾಗಲೇ 4 ಪಂದ್ಯಗಳು ಮಳೆಗೆ ಆಹುತಿ ಆಗಿವೆ. ಪ್ರತಿ ಪಂದ್ಯವೂ ವಿಭಿನ್ನವಾದ ಸ್ಟೇಡಿಯಂನಲ್ಲಿ ನಡೆಯುತ್ತವೆ. ಇಷ್ಟಾದರೂ 4 ಪಂದ್ಯ ಫಲಿತಾಂಶ ಇಲ್ಲದೆ ಮುಗಿದಿವೆ. ಹೀಗಾಗಿ ಮುಂದಿನ ಪಂದ್ಯದ ಕಡೆ ಟೀಂ ಇಂಡಿಯಾದ ಪ್ರಯಾಣ ಬೆಳೆಸಿದೆ.

ಇಂಗ್ಲೆಂಡ್​​ನಲ್ಲಿ ಒಂದು ಸ್ಟೇಡಿಯಂನಿಂದ ಮತ್ತೊಂದು ಕಡೆಗೆ ಬಹುತೇಕ ಬಸ್ ಇಲ್ಲವೇ ರೈಲಿನಲ್ಲೇ ಟೀಂ ಇಂಡಿಯಾ ಸದಸ್ಯರು ಪ್ರಯಾಣ ಮಾಡುತ್ತಾರೆ. ಲಕ್ಸುರಿ ಬಸ್​​ ಒಳಗೂ ಪ್ರಯಾಣವನ್ನ ಎಂಜಾಯ್​ ಮಾಡುವ ಕೊಹ್ಲಿ ಪಡೆ, ಬಿಂದಾಸ್​​ ಆಗಿ ಟೈಮ್ ಪಾಸ್​ ಮಾಡುತ್ತೆ. ಇತ್ತೀಚೆಗಷ್ಟೇ ಸ್ಪಿನ್ನರ್ ಯುಜವೇಂದ್ರ ಚಹಾಲ್​​ ಬಿಸಿಸಿಐ ಟಿವಿಯಲ್ಲಿ ಬಸ್​​​​ನ ಇನ್​ಸೈಡ್​ ಜರ್ನಿ ಬಿಚ್ಚಿಟ್ಟಿದ್ದರು.

ಹೀಗೆ ಬಸ್​ ಟ್ರಾವೆಲ್​​ನಲ್ಲೂ ಮಜಾ ಮಾಡುವ ಟೀಂ ಇಂಡಿಯಾ, ಕಳೆದ ನ್ಯೂಜಿಲೆಂಡ್​ ಪಂದ್ಯಕ್ಕೆ ಸೌತಾಂಪ್ಟನ್​ಗೆ ಬಂದಿಳಿದಿತ್ತು. ಚೆನ್ನಾಗೇ ಅಭ್ಯಾಸ ಮಾಡಿ ಇನ್ನೇನು ಅಖಾಡಕ್ಕಿಳಿಯಬೇಕು ಅನ್ನುವಷ್ಟರಲ್ಲಿ ಮಳೆರಾಯನ ಆಗಮನವಾಯಿತು. ಹೀಗಾಗಿ ಇಡೀ ಟೀಂ ಡ್ರೆಸ್ಸಿಂಗ್ ರೂಮ್​ನಲ್ಲೇ ಕಾಲ ಕಳೆಯಿತು. ಈ ವೇಳೆ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಡ್ರೆಸ್ಸಿಂಗ್ ರೂಮ್​ನ ಇನ್​ ಸೈಡ್​ ಪರಿಚಯ ಮಾಡಿಕೊಟ್ಟಿದ್ದಾರೆ.

ಪ್ರತಿಯೊಬ್ಬ ಆಟಗಾರನಿಗೂ ಅವರದ್ದೇ ಆದ ಪ್ರತ್ಯೇಕ ಕೂರುವ ಸ್ಥಳವಿರುತ್ತೆ ಈ ಕುರಿತು ಪರಿಚಯಿಸುವ ಪಾಂಡ್ಯ, ತನ್ನ ಬಗ್ಗೆಯೂ ಹೊಗಳಿಕೊಂಡಿದ್ದು ಇದೆ.ಪಾಂಡ್ಯ ಮಾತು ಮುಗಿದಿದ್ದೇ ತಡ, ಫಿಸಿಯೋ ಪ್ಯಾಟ್ರಿಕ್ ಕೂಡ ಆಟಗಾರರು ಇಂಜ್ಯುರಿ ಆದರೆ, ಇಲ್ಲವೇ ಮಸಾಜ್ ಮಾಡಬೇಕಾದರೆ ಯಾವ ರೂಮ್ ಬಳಸತ್ತೀವಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಎಲ್ಲರೂ ಸಮಯ ಸಿಕ್ಕಾಗ ಟಿವಿ ನೋಡುತ್ತಿದ್ದರೆ, ಧೋನಿ ಮಾತ್ರ ಯಾವಾಗಲೂ ಕೂಲ್ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಿದ್ದಾರೆ. ತಮ್ಮ ಪಾಡಿಗೆ ತಾವು ಆರಾಮಾಗಿ ನಿದ್ರೆಯಲ್ಲಿ ಮುಳುಗಿದ್ದರು. ಹೀಗೆ ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್ ಅಷ್ಟೇ ಅಲ್ಲದೆ ಪ್ರತಿಯೊಂದು ತಂಡದ ಡ್ರೆಸ್ಸಿಂಗ್ ರೂಮ್ ಕೂಡ ತುಂಬಾ ಚೆನ್ನಾಗೆ ಇರುತ್ತೆ. ವಿಶ್ವಕಪ್ ಆತಿಥೇಯ ರಾಷ್ಟ್ರ ಇಂಗ್ಲೆಂಡ್​ ಡ್ರೆಸ್ಸಿಂಗ್ ರೂಮ್ ಕೂಡ ತುಂಬಾ ರಿಚ್​ ಆಗೇ ಇದೆ.
ಡ್ರೆಸ್ಸಿಂಗ್ ರೂಮ್​ನಲ್ಲಿ ಎಂ ಎಸ್ ಧೋನಿ ನಿದ್ರೆ ಮಾಡುತ್ತಿರುವುದು
First published:June 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ