ಪಾಕ್ ನಾಯಕನ ಜೊತೆ ಕೈ ಕುಲುಕಿಸಿದ ವಿರಾಟ್; ಅಭಿಮಾನಿಗಳಿಂದ ಎಂಥಹ ಪ್ರತಿಕ್ರಿಯೆ ನೋಡಿ!

India vs Pakistan: ಐಸಿಸಿ ತನ್ನ ಟ್ವಿಟ್ಟರ್​​ ಖಾತೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಅಹ್ಮದ್ ಪರಸ್ಪರ ಕೈ ಮಿಲಾಯಿಸುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದೆ.

ಕೈ ಮಿಲಾಯಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಅಹ್ಮದ್

ಕೈ ಮಿಲಾಯಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಅಹ್ಮದ್

  • News18
  • Last Updated :
  • Share this:
ಬೆಂಗಳೂರು (ಮೇ. 25): ಪುಲ್ವಾಮ ದಾಳಿ ಬಳಿಕ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ವಿಶ್ವಕಪ್​ನಲ್ಲಿ ಕ್ರಿಕೆಟ್ ಆಡಬೇಕೋ ಬೇಡವೋ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅನೇಕ ಅಭಿಮಾನಿಗಳು ಸೇರಿದಂತೆ ಭಾರತದ ಕೆಲ ಕ್ರಿಕೆಟ್ ದಿಗ್ಗಜರೇ ಭಾರತ ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಆಡ ಬಾರದು ಎಂಬ ಮಾತುಗಳನ್ನು ಹೇಳಿದ್ದರು.

ಈ ಮಧ್ಯೆ ವಿಶ್ವಕಪ್​​ನಲ್ಲಿ ಭಾಗವಹಿಸುತ್ತಿರುವ ಎಲ್ಲ 10 ತಂಡದ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ನಿನ್ನೆ ಫೋಟೋಕ್ಕೆ ಪೋಸ್ ಕೊಟ್ಟಿದ್ದರು. ಸದ್ಯ ಐಸಿಸಿ ತನ್ನ ಅಧಿಕೃತ ಕ್ರಿಕೆಟ್ ವರ್ಲ್ಡ್​​​ ಕಪ್ ಟ್ವಿಟ್ಟರ್​​ ಖಾತೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಪರಸ್ಪರ ಕೈ ಕುಲುಕಿಸುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದು, ಸ್ಪಿರಿಟ್ ಅಫ್ ಕ್ರಿಕೆಟ್ ಎಂದು ಬರೆದುಕೊಂಡಿದೆ.

 ಇದನ್ನೂ ಓದಿ: India vs New Zealand: ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದ ಭಾರತ; 179ಕ್ಕೆ ಆಲೌಟ್

ಐಸಿಸಿ ಹಂಚಿಕೊಂಡಿರುವ ಈ ಫೋಟೋಕ್ಕೆ ಸಾಕಷ್ಟು ಕಮೆಂಟ್​ಗಳು ಬರುತ್ತಿದೆ. ಕೆಲವರು ಪ್ರೀತಿ ಮತ್ತು ಗೌರವವನ್ನು ಈರೀತಿ ಪರಸ್ಪರ ಹಂಚಿಕೊಳ್ಳೋಣ ಎಂದರೆ, ಎರಡೂ ತಂಡಗಳಿಗೆ ಶುಭವಾಗಲಿ ಎಂದು ಹರಸಿದ್ದಾರೆ. ಇನ್ನೂ ಕೆಲವರು ಇದುವೇ ನಿಜವಾದ ಕ್ರಿಕೆಟ್, ಕೆಲವರು ಜೂನ್ 16 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯದಕ್ಕೆ ಕಾಯುತ್ತದ್ದೇವೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ನಾವು ಇಂಥಹ ಸನ್ನಿವೇಶವನ್ನು ನೋಡಲು ಬಯಸುತ್ತೇವೆ ಎಂಬ ಕಮೆಂಟ್​ಗಳು ಬಂದಿವೆ. ಈ ಮೂಲಕ ಭಾರತದ ಸಾಂಪ್ರಾದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ವಿಶ್ವಕಪ್​ನಲ್ಲಿ ಆಡಬೇಕೆಂಬ ಇರಾದೆ ಹೊಂದಿದ್ದಾರೆ.

ಫೆ. 14ರಂದು ನಡೆದ ಪುಲ್ವಾಮ ಉಗ್ರ ದಾಳಿಯ ಹೊಣೆಯನ್ನು ಪಾಕ್ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯು ಹೊತ್ತುಕೊಂಡಿತ್ತು. 40-42 ಸಿಆರ್​ಪಿಎಫ್ ಯೋಧರು ಈ ಆತ್ಮಾಹುತಿ ದಾಳಿಗೆ ಬಲಿಯಾಗಿದ್ದರು. ಇದಾದ ಬಳಿಕ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಸೌರವ್ ಗಂಗೂಲಿ, ಹರ್ಭಜನ್ ಸಿಂಗ್ ಸೇರಿದಂತೆ ಪ್ರಮುಖರು ಭಾರತ-ಪಾಕಿಸ್ತಾನ ನಡುವೆ ಮುಂದೆ ಯಾವತ್ತೂ ಕ್ರಿಕೆಟ್ ಆಟ ನಡೆಯಬಾರದು ಎಂಬ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Jasprit Bumrah: ಎದುರಾಳಿಯನ್ನು ಕಟ್ಟಿಹಾಕಲು ಟೀಂ ಇಂಡಿಯಾದ ಈ ಬೌಲರ್​​​ ಅಬ್ಬರಿಸಲೇಬೇಕು!

 First published: