ಕೊಹ್ಲಿ ಎದುರಾಳಿಗರನ್ನು ನಿಂದಿಸುತ್ತಾರೆ, ಅದನ್ನೆ ನಾವು ಮಾಡಿದರೆ ಸಹಿಸುವುದಿಲ್ಲ: ರಬಾಡ

ICC Cricket World Cup 2019, India vs South Africa ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದ ರಬಾಡ ರಾಯಲ್ ಚಾಲೆಂಜರ್ಸ್​ ವಿರುದ್ಧದ ಪಂದ್ಯದ ವೇಳೆ ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ.

Vinay Bhat | news18
Updated:June 1, 2019, 6:28 PM IST
ಕೊಹ್ಲಿ ಎದುರಾಳಿಗರನ್ನು ನಿಂದಿಸುತ್ತಾರೆ, ಅದನ್ನೆ ನಾವು ಮಾಡಿದರೆ ಸಹಿಸುವುದಿಲ್ಲ: ರಬಾಡ
ವಿರಾಟ್ ಕೊಹ್ಲಿ ಮತ್ತು ಕಗಿಸೊ ರಬಾಡ
  • News18
  • Last Updated: June 1, 2019, 6:28 PM IST
  • Share this:
ಬೆಂಗಳೂರು (ಜೂ. 01): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಹೆಚ್ಚು ಕೋಪದಿಂದ, ಅಗ್ರೆಷನ್​ನಿಂದಲೇ ಕಾಣಿಸಿಕೊಳ್ಳುತ್ತಾರೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ತಂಡದ ವೇಗಿ ಕಗಿಸೊ ರಬಾಡ ಮಾತನಾಡಿದ್ದು, ಕೊಹ್ಲಿ ಪಂದ್ಯದ ಮಧ್ಯೆ ಹೆಚ್ಚು ಕೋಪಗೊಳ್ಳುತ್ತಾರೆ, ಎದುರಾಳಿ ಆಟಗಾರ ವಿರುದ್ಧ ತುಂಬಾನೇ ಅಗ್ರೆಷನ್ ತೋರಿತ್ತಾರೆ ಎಂದಿದ್ದಾರೆ.

ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದ ರಬಾಡ ರಾಯಲ್ ಚಾಲೆಂಜರ್ಸ್​ ವಿರುದ್ಧದ ಪಂದ್ಯದ ವೇಳೆ ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ.

'ಎದುರಾಳಿ ಆಟಗಾರನನ್ನು ನಿಂದಿಸಲು ಕೊಹ್ಲಿ ಹಿಂಜರಿಯುವುದಿಲ್ಲ. ಅದನ್ನೆ ನಾವು ಕೊಹ್ಲಿಗೆ ಮಾಡಿದರೆ ಸಿಡಿಮಿಡಿಗೊಳ್ಳುತ್ತಾರೆ ಸಹಿಸುವುದಿಲ್ಲ. ಐಪಿಎಲ್​ನಲ್ಲಿ ನಾನು ಕೊಹ್ಲಿಗೆ ಬೌಲಿಂಗ್ ಮಾಡುವಾಗ ಒಮ್ಮೆ ಬೌಂಡರಿ ಬಾರಿಸಿ ನನ್ನನ್ನು ನಿಂದಿಸಿದ್ದರು. ಇದೇವೇಳೆ ನಾನು ಕೂಡ ಹಾಗೆನೆ ರಿಯಾಕ್ಟ್​ ಮಾಡಿದ್ದೆ. ಆದರೆ ಆಗ ಅವರು ನನ್ನ ಮೇಲೆ ತುಂಬಾನೆ ಕೋಪಗೊಂಡರು' ಎಂದಿದ್ದಾರೆ.

ಇದನ್ನೂ ಓದಿ: IND vs SA: ಹರಿಣಗಳ ಬೇಟೆಗೆ ಸಜ್ಜಾದ ವಿರಾಟ್​ ಸೈನ್ಯ; ಮೋಜು ಮಸ್ತಿ ಜೊತೆ ಕಠಿಣ ಅಭ್ಯಾಸ

ಕೊಹ್ಲಿ ಒಬ್ಬ ಅತ್ಯುತ್ತಮ ಆಟಗಾರ. ಅಗ್ರೆಷನ್ ಮೂಲಕವೇ ಕೊಹ್ಲಿ ಅದ್ಭುತ ಆಟ ಪ್ರದರ್ಶಿಸುತ್ತಾರೆ. ಆದರೆ, ಅವರು ನಿಂದನೆಯನ್ನು ಸ್ವೀಕರಿಸಲು ತಯಾರಿಲ್ಲ. ಕೊಹ್ಲಿ ಒಬ್ಬ ಪರಿಪಕ್ವವಲ್ಲದ ಆಟಗಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜೂನ್ 5 ರಂದು ಭಾರತ ತಂಡ ದ. ಆಫ್ರಿಕಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿರುವ ಆಫ್ರಿಕಾಗೂ ಟೀಂ ಇಂಡಿಯಾ ವಿರುದ್ಧದ ಪಂದ್ಯ ಬಹುಮುಖ್ಯ.

First published:June 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ