ಭುವಿ ಸ್ಥಾನಕ್ಕೆ ಆರ್​ಸಿಬಿ ಆಟಗಾರ​; ಮ್ಯಾಂಚೆಸ್ಟರ್ ಬಂದಿಳಿದ ಸ್ಟಾರ್ ಬೌಲರ್!

ICC Cricket World Cup 2019: ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಭಾರತ ಬೌಲಿಂಗ್​​ ಮಾಡುವಾಗ ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಗಾಯಕ್ಕೊಳಗಾದರು.

Vinay Bhat | news18
Updated:June 25, 2019, 3:44 PM IST
ಭುವಿ ಸ್ಥಾನಕ್ಕೆ ಆರ್​ಸಿಬಿ ಆಟಗಾರ​; ಮ್ಯಾಂಚೆಸ್ಟರ್ ಬಂದಿಳಿದ ಸ್ಟಾರ್ ಬೌಲರ್!
ಹೀಗಾಗಿ ತಂಡವು ಮತ್ತೊಬ್ಬ ಬೌಲರ್​ನನ್ನೇ ಅವಲಂಭಿಸುವ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಮೂಲಗಳ ಪ್ರಕಾರ ಇಶಾಂತ್ ಶರ್ಮಾ ಅವರ ಸ್ಥಾನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ನವದೀಪ್ ಸೈನಿ ತುಂಬಲಿದ್ದಾರೆ ಎನ್ನಲಾಗಿದೆ.
  • News18
  • Last Updated: June 25, 2019, 3:44 PM IST
  • Share this:
ಬೆಂಗಳೂರು (ಜೂ. 24): ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ಟೀಂ ಇಂಡಿಯಾದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಮುಂದಿನ ಪಂದ್ಯಕ್ಕೂ ಭುವಿ ಫಿಟ್ ಆಗುವುದು ಅನುಮಾನ ಎನ್ನಲಾಗಿತ್ತಿದ್ದು ಇವರ ಬದಲಾಗಿ ಮತ್ತೊಬ್ಬ ಸ್ಟಾರ್ ಬೌಲರ್ ಆಯ್ಕೆಯಾಗಿದ್ದಾರೆ.

ಭವಿ ಇಂಜುರಿಯಲ್ಲಿರುವ ಕಾರಣ ಭಾರತ ಎ ತಂಡದ ಹಾಗೂ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಸ್ಟಾರ್ ಬೌಲರ್ ಆಗಿರುವ ನವ್​ದೀಪ್ ಸೈನಿ ಟೀಂ ಇಂಡಿಯಾದ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನು ವೆಸ್ಟ್​ ಇಂಡೀಸ್ ವಿರುದ್ಧ ಜೂನ್ 27 ರಂದು ಆಡಲಿದೆ. ಹೀಗಾಗಿ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು ಪ್ರ್ಯಾಕ್ಟೀಸ್ ಮಾಡುವ ವೇಳೆ ನೆಟ್​​ನಲ್ಲಿ ಬೌಲಿಂಗ್ ಮಾಡಲು ಭುವಿ ಬದಲು ಸೈನಿಯನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ ಮ್ಯಾಂಚೆಸ್ಟರ್​ ತಲುಪಿದ್ದಾರೆ.

ICC World Cup 2019: Saini Joins Indian Squad as Net Bowler in Light of Bhuvneshwar Injury
ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಇಣಜುರಿಗೆ ತುತ್ತಾದ ಭುವನೇಶ್ವರ್


ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿದ್ದು, 'ನವ್​ದೀಪ್ ಸೈನಿ ಮ್ಯಾಂಚೆಸ್ಟರ್​ಗೆ ಬಂದಿದ್ದಾರೆ. ಅವರು ಭಾರತೀಯ ಬ್ಯಾಟ್ಸ್​ಮನ್​​ಗಳಿಗೆ ನೆಟ್ ಬೌಲರ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ನೆಟ್​ ಬೌಲರ್ ಆಗಿ ಸೈನಿ ಒಬ್ಬರೇ ಆಯ್ಕೆಯಾಗಿದ್ದಾರೆ' ಎಂದು ಹೇಳಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಭಾರತ ಬೌಲಿಂಗ್​​ ಮಾಡುವಾಗ ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಗಾಯಕ್ಕೊಳಗಾದರು. ಸ್ನಾಯು ಸೆಳೆತಕ್ಕೊಳಗಾದ ಪರಿಣಾಮ ತಕ್ಷಣವೆ ಅರ್ಧದಲ್ಲೇ ಬೌಲಿಂಗ್ ಮಾಡುವುದು ಬಿಟ್ಟು ಮೈದಾನ ಮೈದಾನ ತೊರೆಯಬೇಕಾಯಿತು. ಭುವಿ ಮುಂದಿನ ಎರಡು ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.

First published: June 24, 2019, 6:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading