ವಿಶ್ವಕಪ್​​​ ಗೆಲ್ಲುವ ಫೇವರಿಟ್​ ಟೀಂಗೆ ಭಾರೀ ಮುಖಭಂಗ; ಸೋಲಿನ ಹಾದಿಯಲ್ಲಿ ಕ್ರಿಕೆಟ್ ಜನಕರು!

ವಿಶ್ವಕಪ್​​ಗೂ ಮುನ್ನ ಭಾರೀ ಫೇವರಿಟ್ ಎನಿಸಿಕೊಂಡಿದ್ದ ಕ್ರಿಕೆಟ್​ ಜನಕರು.. ಇದೀಗ ಸೆಮಿಫೈನಲ್​ ತಲುಪಲು ಒದ್ದಾಡುತ್ತಿರುವುದು ನಿಜಕ್ಕೂ ಪರ್ಯಾಸವೇ ಸರಿ!

Vinay Bhat | news18
Updated:June 28, 2019, 7:31 AM IST
ವಿಶ್ವಕಪ್​​​ ಗೆಲ್ಲುವ ಫೇವರಿಟ್​ ಟೀಂಗೆ ಭಾರೀ ಮುಖಭಂಗ; ಸೋಲಿನ ಹಾದಿಯಲ್ಲಿ ಕ್ರಿಕೆಟ್ ಜನಕರು!
ಇಯಾನ್ ಮಾರ್ಗನ್ (ಇಂಗ್ಲೆಂಡ್ ತಂಡದ ನಾಯಕ)
  • News18
  • Last Updated: June 28, 2019, 7:31 AM IST
  • Share this:
ಏಕದಿನ ಕ್ರಿಕೆಟ್​ನಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಇಂಗ್ಲೆಂಡ್ ತಂಡ ವಿಶ್ವಕಪ್​​ನಲ್ಲಿ ಫೇವರಿಟ್ ಎನಿಸಿಕೊಂಡಿತ್ತು. ಆದರೆ​ ಅದೇಕೋ ವಿಶ್ವಕಪ್​​ನಲ್ಲಿ ಸೋಲಿನ ಹಾದಿ ಹಿಡಿಯತೊಡಗಿದೆ. ಈ ಬಾರಿಯಾದರೂ ಕಪ್​ ಗೆಲ್ಲಬಹುದು ಎಂದುಕೊಂಡಿದ್ದ ಆಂಗ್ಲರ ಮುಂದಿನ ದಾರಿ ಕಠಿಣವಾಗತೊಡಗಿದೆ. ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸೋತಿದ್ದೇ ಸೋತಿದ್ದು, ಉಳಿದ ತಂಡಗಳಿಗೆ ಸೆಮಿಫೈನಲ್ ಆಸೆ ಜೀವಂತವಾಗಿರಿಸಿದೆ.

ಮೊದಲ ಪಂದ್ಯದ ಗೆಲುವಿನ ಖುಷಿಯಲ್ಲಿದ್ದ ಇಂಗ್ಲೆಂಡ್​​ಗೆ​ ಈ ಬಾರಿ ವಿಶ್ವಕಪ್​ನಲ್ಲಿ ಮೊದಲು ಸೋಲಿನ ರುಚಿ ತೋರಿಸಿದ್ದು ಪಾಕಿಸ್ತಾನ. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಆತಿಥೇಯರಿಗೆ 349ರನ್​ಗಳ ಗುರಿ ನೀಡಿತು. ಆದರೆ ಇಂಗ್ಲೆಂಡ್ ಪರ ಜೋ ರೂಟ್​, ಬಟ್ಲರ್ ಸೆಂಚುರಿ ಸಿಡಿಸಿದರೂ ತಂಡವನ್ನ ಗೆಲ್ಲಿಸಲಾಗಲಿಲ್ಲ.

ಪಾಕ್ ವಿರುದ್ಧ ಸೋಲಿನಿಂದ ಹೊರಬಂದ ಇಂಗ್ಲೆಂಡ್, ನಂತರದ 3 ಪಂದ್ಯಗಳಲ್ಲಿ ಪಂದ್ಯ ಗೆದ್ದು ಬೀಗಿತು. ಬಾಂಗ್ಲಾ, ವೆಸ್ಟ್​ ಇಂಡೀಸ್, ಅಫ್ಘಾನಿಸ್ತಾನ ವಿರುದ್ಧ ಜಯಭೇರಿ ಬಾರಿಸಿತು.

ಸೆಮೀಸ್​​ ತಲುಪಲು ಉಳಿದ 2 ಪಂದ್ಯ ಗೆಲ್ಲಲೇಬೇಕು!

ಕಳೆದ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ್ದ ಇಂಗ್ಲೆಂಡ್​ ಸತತ 2 ಪಂದ್ಯವನ್ನ ಸೋತಿದೆ. ಶ್ರೀಲಂಕಾ ವಿರುದ್ಧ ಸೋಲಿನ ಆಘಾತದ ಬೆನ್ನಲ್ಲೇ ಆಸೀಸ್ ವಿರುದ್ಧದ ಸೋಲು ಆಂಗ್ಲರಿಗೆ ನುಂಗಲಾರದ ತುತ್ತಾಗಿದೆ. ಯಾಕಂದರೆ ಆಡಿರುವ 7 ಪಂದ್ಯಗಳಲ್ಲಿ 4 ಪಂದ್ಯ ಗೆದ್ದಿರುವ ಇಂಗ್ಲೆಂಡ್​ 8 ಅಂಕಗಳನ್ನ ಕಲೆಹಾಕಿದ್ದು, ಉಳಿದ 2 ಪಂದ್ಯಗಳನ್ನ ಗೆದ್ದರಷ್ಟೇ ಸೆಮಿಫೈನಲ್​ಗೆ ಲಗ್ಗೆಯಿಡಬಹುದು. ಆದರೆ ಇಂಗ್ಲೆಂಡ್​​ಗೆ ಉಳಿದ 2 ಪಂದ್ಯಗಳಿರುವುದು ಸೋಲನ್ನೇ ಕಾಣದ ಭಾರತ ಹಾಗೂ ಕೇವಲ ಒಂದು ಪಂದ್ಯ ಸೋತಿರುವ ನ್ಯೂಜಿಲೆಂಡ್ ವಿರುದ್ಧ.

Ind vs WI: ಕೊಹ್ಲಿ ಪಡೆಯ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ವಿಂಡೀಸ್; ಭಾರತದ ಸೆಮೀಸ್ ಹಾದಿ ಸುಗಮ

ವಿಶ್ವಕಪ್​ನ 2 ಬಲಿಷ್ಠ ತಂಡಗಳ ಎದುರೇ ಇಂಗ್ಲೆಂಡ್​​ಗೆ ಮುಂದಿನ 2 ಪಂದ್ಯಗಳಿರುವುದು ಮಾರ್ಗನ್ ಪಡೆಗೆ ಬಹುದೊಡ್ಡ ಸವಾಲಾಗಿ ಬಿಟ್ಟಿದೆ. ಇದರ ಜೊತೆಗೆ ಉಳಿದ ತಂಡಗಳಿಗೂ ಆಸೆ ಚಿಗುರಿಸಿದೆ. ಯಾಕಂದರೆ ಇಂಗ್ಲೆಂಡ್​ ಟೀಂ ಒಂದುವೇಳೆ ಎರಡಕ್ಕೆ ಎರಡೂ ಪಂದ್ಯ ಸೋತರೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ. ಒಂದು ಪಂದ್ಯ ಗೆದ್ದು ಮತ್ತೊಂದು ಪಂದ್ಯ ಸೋತರೆ, ಉಳಿದ ತಂಡಗಳ ಸೋಲಿಗೆ ಇಂಗ್ಲೆಂಡ್  ಎದುರು ನೋಡಬೇಕಾಗುತ್ತದೆ.ವಿಶ್ವಕಪ್​​ಗೂ ಮುನ್ನ ಇಂಗ್ಲೆಂಡ್ ತಂಡ ಚೇಸಿಂಗ್​ನಲ್ಲಿ ಬಲಾಢ್ಯವಾಗಿ ಗುರುತಿಸಿಕೊಂಡಿತ್ತು. 2016ರಿಂದ ವಿಶ್ವಕಪ್​​ವರೆಗೂ ಇಂಗ್ಲೆಂಡ್ 20 ಏಕದಿನ ಪಂದ್ಯಗಳಲ್ಲಿ ಚೇಸಿಂಗ್ ಮಾಡಿದೆ. ಇದರಲ್ಲಿ 17 ಪಂದ್ಯ ಗೆದ್ದಿದ್ದು 1 ಪಂದ್ಯ ಟೈ ಆಗಿದ್ದರೆ 2 ರಲ್ಲಿ ಫಲಿತಾಂಶವಿಲ್ಲ.

James Vince
ಕ್ಲೀನ್ ಬೌಲ್ಡ್​ ಆದ ಇಂಗ್ಲೆಂಡ್ ತಂಡದ ಆಟಗಾರ ಜೇಮ್ಸ್​ ವಿನ್ಸ್​


ಹೀಗೆ ವಿಶ್ವಕಪ್​ವರೆಗೂ ಚೇಸಿಂಗ್​ನಲ್ಲಿ ಸೋಲನ್ನ ಕಾಣದ ಇಂಗ್ಲೆಂಡ್​​ ಶಕ್ತಿಯೇ ಬ್ಯಾಟಿಂಗ್ ವಿಭಾಗವಾಗಿತ್ತು. ಆದರೆ ವಿಶ್ವಕಪ್​​ನಲ್ಲಿ ಇದೆಲ್ಲಾ ಉಲ್ಟಾ ಆಗಿ ಹೋಗಿದೆ. 4 ಬಾರಿ ಚೇಸಿಂಗ್ ಮಾಡಲು ಹೋಗಿ ಕೇವಲ 1 ಬಾರಿ ಮಾತ್ರ ಗೆಲುವು​​ ಕಂಡಿದೆ. ಉಳಿದ ಮೂರು ಪಂದ್ಯದಲ್ಲೂ ಇಂಗ್ಲೆಂಡ್​​ಗೆ ಗುರಿ ತಲುಪಲು ಸಾಧ್ಯವಾಗಿಲ್ಲ.

ಹೀಗೆ ತನ್ನ ಬ್ಯಾಟಿಂಗ್​ ಶಕ್ತಿಯನ್ನೇ ಹೆಚ್ಚಾಗಿ ನಂಬಿಕೊಂಡಿದ್ದ ಇಂಗ್ಲೆಂಡ್ ವಿಶ್ವಕಪ್​ನಲ್ಲಿ ಸೋಲಿನ ಹಾದಿ ತುಳಿಯಲು ಪ್ರಮುಖ ಕಾರಣ ಬ್ಯಾಟಿಂಗ್ ವಿಭಾಗದ ವೈಫಲ್ಯ. ಇದೀಗ ಮಹಾಟೂರ್ನಿ ಅಂತಿಮ ಹಂತಕ್ಕೆ ತಲುಪಿದ್ದು ಮುಂದಿನ ಪಂದ್ಯಗಳನ್ನ ಗೆಲ್ಲಲೇಬೇಕಾದ ಒತ್ತಡಕ್ಕೆ ಇಂಗ್ಲೆಂಡ್​​ ಸಿಲುಕಿದೆ. ವಿಶ್ವಕಪ್​​ಗೂ ಮುನ್ನ ಭಾರೀ ಫೇವರಿಟ್ ಎನಿಸಿಕೊಂಡಿದ್ದ ಕ್ರಿಕೆಟ್​ ಜನಕರು.. ಇದೀಗ ಸೆಮಿಫೈನಲ್​ ತಲುಪಲು ಒದ್ದಾಡುತ್ತಿರುವುದು ನಿಜಕ್ಕೂ ಪರ್ಯಾಸವೇ ಸರಿ!

First published:June 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ