ಭಾರತ ಗೆಲ್ಲಲು, ಆಫ್ರಿಕಾ ಸೋಲಲು ಕಾರಣವಾಗಿದ್ದು ಆ ಒಂದು ಘಟನೆ!

India vs South Africa: ದ. ಆಫ್ರಿಕಾ ಸೋಲಿಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಕೆಟ್ಟ ಫೀಲ್ಡಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

Vinay Bhat | news18
Updated:June 6, 2019, 5:18 PM IST
ಭಾರತ ಗೆಲ್ಲಲು, ಆಫ್ರಿಕಾ ಸೋಲಲು ಕಾರಣವಾಗಿದ್ದು ಆ ಒಂದು ಘಟನೆ!
India vs South Africa: ದ. ಆಫ್ರಿಕಾ ಸೋಲಿಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಕೆಟ್ಟ ಫೀಲ್ಡಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
  • News18
  • Last Updated: June 6, 2019, 5:18 PM IST
  • Share this:
ಬೆಂಗಳೂರು (ಜೂ. 06): ಐಸಿಸಿ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಶುಭಾರಂಭ ಮಾಡಿದೆ. ಹರಿಣಗಳನ್ನ ಬೇಟೆಯಾಡಿದ ಕೊಹ್ಲಿ ಹುಡುಗರು ಗೆಲುವಿನ ಆರಂಭ​ ಪಡೆದಿವೆ. ಇತ್ತ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಸತತ 3 ಪಂದ್ಯಗಳನ್ನ ಸೋತ ದಕ್ಷಿಣ ಆಫ್ರಿಕಾದ ವಿಶ್ವಕಪ್​​ ಕನಸು ಮರೀಚಿಕೆಯಾಗತೊಡಗಿದೆ.

ನಿನ್ನೆ ಸೌತಾಂಪ್ಟನ್​​​ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಇಳಿದ ದಕ್ಷಿಣ ಆಫ್ರಿಕಾಕ್ಕೆ ಟೀಂ ಇಂಡಿಯಾ ಬೌಲರ್​ಗಳು ಇನ್ನಿಲ್ಲದಂತೆ ಕಾಡಿದರು. ಮೊದಲಿಗೆ ಬುಮ್ರಾ ದಾಳಿಗೆ ನಡುಗಿದ ಆರಂಭಿಕರು ಬಳಿಕ ಯುಜವೇಂದ್ರ ಚಹಾಲ್ ತಮ್ಮ ಸ್ಪಿನ್ ಜಾದು ಮೂಲಕ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಅಟ್ಟಿದರು. ಕೊನೆಯಲ್ಲಿ ದಕ್ಷಿಣ ಆಫ್ರಿಕಾ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 227 ರನ್​​ ಕಲೆಹಾಕಿತು.

228 ರನ್​​ ಬೆನ್ನತ್ತಿದ್ದ ಭಾರತ, ರಬಾಡ ಸ್ವಿಂಗ್​​ ದಾಳಿಯಲ್ಲಿ ಶಿಖರ್ ಧವನ್​ ವಿಕೆಟ್ ಕಳೆದುಕೊಳ್ಳುವ ಮೂಲಕ ಮೊದಲ ಆಘಾತ ಅನುಭವಿಸಿತು. ಈ ಸಂದರ್ಭ ರೋಹಿತ್ ಶರ್ಮಾ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್​ ಕಟ್ಟಲು ಹೋರಾಟ ನಡೆಸಿದರು. ಆದರೆ ಕೊಹ್ಲಿ 18 ರನ್ ಗಳಿಸಿರುವಾಗ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದು ತಂಡವನ್ನ ಸ್ವಲ್ಪ ಮಟ್ಟಿಗೆ ಒತ್ತಡಕ್ಕೆ ಸಿಲುಕಿಸಿತು.

ನಿವೃತ್ತಿ ತ್ಯಜಿಸಿ ವಿಶ್ವಕಪ್​ನಲ್ಲಿ ಆಡುತ್ತೇನೆ ಎಂದರೂ 'ಎಬಿಡಿ'ಯನ್ನು ದೂರವಿಟ್ಟ ದಕ್ಷಿಣ ಆಫ್ರಿಕಾ!

ಹೀಗೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಆಸರೆಯಾಗಿ ನಿಂತರು. ಬಳಿಕ ರೋಹಿತ್ ಶರ್ಮಾ, ಎಂ ಎಸ್ ಧೋನಿ ಜೊತೆಗೂಡಿ ಅತ್ಯುತ್ತಮ ಆಟವಾಡಿದರು. ಏಕದಿನ ಕ್ರಿಕೆಟ್​ನಲ್ಲಿ 23ನೇ ಶತಕ ಸಿಡಿಸಿದ ರೋಹಿತ್ ತಂಡಕ್ಕೆ ಗೆಲುವು ತಂದಿಟ್ಟರು. ಹೀಗೆ 47.3 ಓವರ್​ನಲ್ಲೇ 4 ವಿಕೆಟ್ ಕಳೆದುಕೊಂಡ ಭಾರತ 230 ರನ್ ಕಲೆಹಾಕಿ ಜಯ ಸಾಧಿಸಿತು. 144 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸೇರಿ ಅಜೇಯ 122 ರನ್ ಕಲೆಹಾಕಿದ ರೋಹಿತ್ ಶರ್ಮಾಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಒಲಿಯಿತು.

ಈ ಮಧ್ಯೆ ದ. ಆಫ್ರಿಕಾ ಸೋಲಿಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಕೆಟ್ಟ ಫೀಲ್ಡಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದು ನಿಜವೂ ಹೌದು. ಎಬಿ ಡಿವಿಲಿಯರ್ಸ್​​, ಹರ್ಷೆಲ್ ಗಿಬ್ಸ್​​ ರಂತಹ ಶ್ರೇಷ್ಠ ಕ್ಷೇತ್ರ ರಕ್ಷಕರನ್ನು ಹೊಂದಿದ್ದ ಆಫ್ರಿಕಾ ಬರಬರುತ್ತಾ ಎಲ್ಲಾ ವಿಭಾಗಗಳಲ್ಲಿ ಮಂಕಾಗ ತೊಡಗಿದೆ.

ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ರೂವಾರಿ ರೋಹಿತ್ ಶರ್ಮಾ ಆರಂಭದಲ್ಲೇ ಕೇವಲ 1 ರನ್ ಗಳಿಸಿರುವಾಗ ಔಟ್ ಆಗಲಿದ್ದರು. ರಬಾಡ ಬೌಲಿಂಗ್​ನಲ್ಲಿ ರೋಹಿತ್ ಅವರ ಕ್ಯಾಚ್ ಅನ್ನು ಸ್ಪಿಪ್​​ನಲ್ಲಿ ಡುಪ್ಲೆಸಿಸ್ ಕೈಚೆಲ್ಲಿದ್ದರು. ಮತ್ತೊಮ್ಮ ಡೇವಿಡ್ ಮಿಲ್ಲರ್ ಅವರು ರೋಹಿತ್ ಅವರ ಸುಲಭ ಕ್ಯಾಚ್ ಕಳೆದುಕೊಂಡಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು.Cricket World Cup 2019, AUS vs WI: ವಿಂಡೀಸ್ ಮಾರಕ ಬೌಲಿಂಗ್ ದಾಳಿ; ಆಸೀಸ್​ನ 5 ವಿಕೆಟ್ ಪತನ

ಕೇವಲ ರೋಹಿತ್ ಕ್ಯಾಚ್ ಮಾತ್ರವಲ್ಲದೆ ವಿರಾಟ್ ಕೊಹ್ಲಿ, ಎಂ ಎಸ್ ಧೋನಿ ಅವರ ಕ್ಯಾಚ್ ಅನ್ನೂ ಕೈ ಚೆಲ್ಲಿದ ಆಫ್ರಿಕನ್ನರು, ಅನೇಕ ಕಳಪೆ ಫೀಲ್ಡಿಂಗ್ ಮಾಡಿದರು. ಒಂದು ಲೆಕ್ಕದಲ್ಲಿ ಆಫ್ರಿಕಾ ಸೋಲಿಗೆ ಇದುವೇ ದೊಡ್ಡ ಕಾರಣವಾಯಿತು. ದ. ಆಫ್ರಿಕಾದ ಕೆಟ್ಟ ಫೀಲ್ಡಿಂಗ್​ಗೆ ಕೋಪಗೊಂಡ ಅಭಿಮಾನಿಗಳು ಟ್ವಟ್ಟರ್​​ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 First published:June 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading