Shikhar Dhawan: ಧವನ್​ಗೆ ಮುಚ್ಚಿದ ವಿಶ್ವಕಪ್ ಹಾದಿ; ತಂಡ ಸೇರಿದ ರಿಷಭ್ ಪಂತ್!

Shikhar Dhawan Ruled Out: ನಿಗದಿತ ಅವಧಿಯೊಳಗೆ ಶಿಖರ್ ಧವನ್ ಚೇತರಿಸಿಕೊಳ್ಳುವುದು ಅನುಮಾನ ಆಗಿರುವುದರಿಂದ ವಿಶ್ವಕಪ್​ನಿಂದ ಹೊರಗುಳಿಯಲು ಸೂಚಿಸಿದ್ದಾರೆ.

ಇಂಜುರಿಗೆ ತುತ್ತಾದ ಶಿಖರ್ ಧವನ್

ಇಂಜುರಿಗೆ ತುತ್ತಾದ ಶಿಖರ್ ಧವನ್

  • News18
  • Last Updated :
  • Share this:
ಬೆಂಗಳೂರು (ಜೂ. 19): ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್ ವಿಶ್ವಕಪ್​ನಿಂದಲೇ ಹೊರಗುಳಿಯ ಬೇಕಾಗಿ ಬಂದಿದೆ. ಈ ಮೂಲಕ ಧವನ್​ಗೆ ವಿಶ್ವಕಪ್ ಹಾದಿ ಕೊನೆಗೊಂಡಿದೆ.

ಧವನ್ ಬದಲು ಭಾರತದ ವಿಶ್ವಕಪ್ ತಂಡದ 15 ಆಟಗಾರರ ಜಾಗದಲ್ಲಿ ರಿಷಭ್ ಪಂತ್ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಗ್ಗೆ ಟೀಂ ಇಂಡಿಯಾ ಮ್ಯಾನೇಜರ್ ಸುನಿಲ್ ಸುಭ್ರಮಣಿಯಂ ಸ್ಪಷ್ಟ ಪಡಿಸಿದ್ದಾರೆ.

India vs Pakistan, World Cup 2019: Rishabh Pant arrives in Manchester
ರಿಷಭ್ ಪಂತ್


ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ವೇಗಿ ಪ್ಯಾಟ್ ಕಮಿನ್ಸ್​ ಬೌಲಿಂಗ್ ಮಾಡುವಾಗ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು. ಬಳಿಕ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿ ಮೂರು ವಾರಗಳ ಕಾಲ ವಿಶ್ರಾಂತಿ ಅಗ್ಯವಿದೆ ಎಂದು ಹೇಳಿದ್ದರು. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಕೂಡ ಮಾಡಲಾಗಿತ್ತು. ಇದಾದ ಬಳಿಕ ಬಂದ ವರದಿ ಪರಿಶೀಲಿಸಿದ ವೈದ್ಯರು, ಧವನ್​ಗೆ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು.

Shikhar Dhawan: ಶಿಖರ್ ಧವನ್ ವಿಶ್ವಕಪ್​ನಿಂದ ಹೊರಕ್ಕೆ; ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತ!

ಹೀಗಾಗಿ ಬಿಸಿಸಿಐ ವೈದ್ಯಕೀಯ ತಂಡ ಒಂದು ವಾರದ ವರೆಗೆ ಧವನ್ ಮೇಲೆ ನಿಗಾ ಇಟ್ಟು, ಇಂಗ್ಲೆಂಡ್​ನಲ್ಲೇ ತಂಡದ ಜೊತೆ ಉಳಿದುಕೊಳ್ಳಲು ಸೂಚಿಸಿತ್ತು. ಆದರೆ ನಿಗದಿತ ಅವಧಿಯೊಳಗೆ ಧವನ್ ಚೇತರಿಸಿಕೊಳ್ಳುವುದು ಅನುಮಾನ ಆಗಿರುವುದರಿಂದ ವಿಶ್ವಕಪ್​ನಿಂದ ಹೊರಗುಳಿಯಲು ಸೂಚಿಸಿದ್ದಾರೆ.

 ಇತ್ತೀಚೆಗಷ್ಟೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ವೇಗಿ ಪ್ಯಾಟ್ ಕಮಿನ್ಸ್​ ಬೌಲಿಂಗ್ ಮಾಡುವಾಗ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು. ನೋವಿನಲ್ಲೂ 109 ಎಸೆತಗಳಲ್ಲಿ 117 ರನ್ ಸಿಡಿಸಿ ಔಟಾಗಿದ್ದ ಧವನ್, ನಂತರ ಫೀಲ್ಡಿಂಗ್​​ಗೆ ಬಂದಿರಲಿಲ್ಲ.

First published: