ಶೆಲ್ಡನ್ ಕಾಟ್ರೆಲ್ ಸೆಲ್ಯೂಟ್‌ ಹಿಂದಿನ ಸೀಕ್ರೆಟ್‌ಗೆ ನಮ್ಮದೊಂದು ಸೆಲ್ಯೂಟ್

Sheldon Cottrell: ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಶೆಲ್ಡನ್ ಕಾಟ್ರೆಲ್ ವಿಕೆಟ್ ಪಡೆದಾಗ ವಿಶೇಷವಾಗಿ ಸಂಭ್ರಮಿಸುತ್ತಾರೆ. ಇದರ ಹಿಂದೆ ರೋಚಕ ಕಹಾನಿ ಇದೆ.

Vinay Bhat | news18
Updated:June 30, 2019, 4:27 PM IST
ಶೆಲ್ಡನ್ ಕಾಟ್ರೆಲ್ ಸೆಲ್ಯೂಟ್‌ ಹಿಂದಿನ ಸೀಕ್ರೆಟ್‌ಗೆ ನಮ್ಮದೊಂದು ಸೆಲ್ಯೂಟ್
ಶೆಲ್ಡನ್ ಕಾಟ್ರೆಲ್
  • News18
  • Last Updated: June 30, 2019, 4:27 PM IST
  • Share this:
ಬೆಂಗಳೂರು (ಜೂ. 30): ಶೆಲ್ಡನ್ ಕಾಟ್ರೆಲ್ ವೆಸ್ಟ್​ ಇಂಡೀಸ್‌ ತಂಡದ ವೇಗದ ಬೌಲರ್, ಇವರು ವಿಕೆಟ್ ಪಡೆದಾಗ ಹೊಡೆಯುವ ಸೆಲ್ಯೂಟ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟಕ್ಕೂ ಶೆಲ್ಡನ್ ವಿಕೆಟ್ ಪಡೆದಾಗ ಸೆಲ್ಯೂಟ್ ಯಾಕೆ ಮಾಡುತ್ತಾರೆ ಎಂಬುದರ ಹಿಂದೆ ರೋಚಕ ಕಥೆಯಿದೆ.

ಬೌಲರ್‌ಗಳು ವಿಕೆಟ್ ಪಡೆದಾಗ ಸಂಭ್ರಮಿಸುವ ರೀತಿಯೇ ಒಂದು ರೀತಿ ವಿಚಿತ್ರವಾಗಿರುತ್ತದೆ. ಟೀಂ ಇಂಡಿಯಾ ಆಟಗಾರನಾಗಿದ್ದ ಶ್ರೀಶಾಂತ್ ವಿಕೆಟ್ ಪಡೆದ ತಕ್ಷಣ ಫೀಲ್ಡ್‌ನಲ್ಲಿ ಡ್ಯಾನ್ಸ್ ಮಾಡಿ ಸಂಭ್ರಮಿಸುತ್ತಿದ್ದರು. ಇನ್ನು ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಕೂಡ ವಿಕೆಟ್ ಪಡೆದರೆ ಸಾಕು ಮೈದಾನ ಪೂರ್ತಿ ರೌಂಡ್ಸ್ ಹಾಕಿ ಸಂಭ್ರಮಿಸುತ್ತಾರೆ.

ಆದರೆ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಶೆಲ್ಡನ್ ಕಾಟ್ರೆಲ್ ವಿಶೇಷವಾಗಿ ಸಂಭ್ರಮಿಸುತ್ತಾರೆ. ಇದರ ಹಿಂದೆ ರೋಚಕ ಕಹಾನಿ ಇದೆ. ಶೆಲ್ಡನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಬರುವ ಮುನ್ನ ಜಮೈಕಾ ರಕ್ಷಣಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು. 2010ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ಡ್ರಗ್ಸ್ ಮಾಫಿಯಾ ಜಾಲ ತುಂಬಾ ಇತ್ತು. ಇದರ ವಿರುದ್ಧ ಶೆಲ್ಡನ್ ಹೋರಾಟವನ್ನೂ ಮಾಡಿದ್ದರು. ಈ ಹೋರಾಟದ ವೇಳೆ ತನ್ನ ಆರ್ಮಿಯ ಇಬ್ಬರು ಸ್ನೇಹಿತರನ್ನ ಕಳೆದುಕೊಂಡಿದ್ದರು.

Cricket World Cup 2019, Ind vs ENG: ಬೈರ್​ಸ್ಟೋ ಫಿಫ್ಟಿ; ಇಂಗ್ಲೆಂಡ್ ಭರ್ಜರಿ ಆಟ; ವಿಕೆಟ್​ಗಾಗಿ ಭಾರತೀಯರ ಪರದಾಟ

Sheldon Cottrell celebration: Reason behind his salute explained
ಶೆಲ್ಡನ್ ಕಾಟ್ರೆಲ್


ನಂತರ ಆರ್ಮಿ ಬಿಟ್ಟು ಕ್ರಿಕೆಟ್‌ನತ್ತ ಮುಖ ಮಾಡಿದರು. ಹೀಗಾಗಿ ವಿಕೆಟ್ ಪಡೆದ ತಕ್ಷಣ ಜಮೈಕಾ ರಕ್ಷಣೆ ಪಡೆಯ ಮೇಲಿನ ಅಭಿಮಾನದ ಜೊತೆ ಅದಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ರೀತಿ ಸೆಲ್ಯೂಟ್ ಮಾಡುತ್ತಾರಂತೆ. ಜೊತೆಗೆ ಬಿಡುವಿನ ಸಮಯದಲ್ಲೂ ಕಾಟ್ರೆಲ್ ಮಕ್ಕಳಿಗೆ ಆರ್ಮಿ ರೀತಿಯಲ್ಲಿ ಟ್ರೈನಿಂಗ್ ಕೊಡುತ್ತಾರೆ.
First published:June 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...