HOME » NEWS » Sports » CRICKET ICC CRICKET WORLD CUP 2019 SHAI HOPE CATCH VS PAKISTAN WATCH HOPE GRABS EXCEPTIONAL DIVING CATCH TO DISMISS BABAR AZAM

ICC Cricket World Cup 2019: ಶಾಯ್ ಹೋಪ್ ಸೂಪರ್ ಕ್ಯಾಚ್: ವಿಡಿಯೋ ಭಾರೀ ವೈರಲ್

ಇನ್ನು ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್​ ಆಲ್​ರೌಂಡರ್ ಬೆನ್​ ಸ್ಟೋಕ್ಸ್ ಅತ್ಯಾದ್ಭುತ ಕ್ಯಾಚ್​ವೊಂದನ್ನು ಹಿಡಿಯುವ ಮೂಲಕ ಮೈದಾನದಲ್ಲಿ ಸಂಚಲನ ಸೃಷ್ಟಿಸಿದ್ದರು. 

zahir | news18
Updated:June 1, 2019, 4:15 PM IST
ICC Cricket World Cup 2019: ಶಾಯ್ ಹೋಪ್ ಸೂಪರ್ ಕ್ಯಾಚ್: ವಿಡಿಯೋ ಭಾರೀ ವೈರಲ್
ಶಾಯ್ ಹೋಪ್
  • News18
  • Last Updated: June 1, 2019, 4:15 PM IST
  • Share this:
ನಾಟಿಂಗ್​ಹ್ಯಾಮ್​​ನಲ್ಲಿ ನಡೆದ ವಿಶ್ವಕಪ್​ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ವೆಸ್ಟ್​ ಇಂಡೀಸ್ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಕೆರಿಬಿಯನ್ ಬೌಲರ್​ಗಳ ಮಾರಕ ದಾಳಿಗೆ ಪಾಕ್ ದಾಂಡಿಗರು ತರಗೆಲೆಗಳಂತೆ ಉದುರಿ ಮೊದಲ ಪಂದ್ಯದಲ್ಲೇ ಭಾರೀ ಮುಖಭಂಗ ಅನುಭವಿಸಿತು.

ವಿಂಡೀಸ್​ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ನೆಲೆಯೂರಲು ಪರದಾಡಿದ ಪಾಕ್ ತಂಡದ ಇಬ್ಬರು ಆಟಗಾರರು ಮಾತ್ರ 20 ರನ್​ಗಳ ಗಡಿದಾಟಿದ್ದರು. ಅದರೊಲ್ಲಬ್ಬರು ಆರಂಭಿಕ ಆಟಗಾರ ಫಖರ್ ಜಮಾನ್ ಮತ್ತೊಬ್ಬರು ಬಾಬರ್ ಆಜಂ. ಇವರಿಬ್ಬರೂ 22 ರನ್​ಗಳನ್ನು ಬಾರಿಸಿರುವುದೇ ನಿನ್ನೆಯ ಪಂದ್ಯದಲ್ಲಿ ಪಾಕಿಸ್ತಾನದ ವೈಯುಕ್ತಿಕ ಶ್ರೇಷ್ಠ ಮೊತ್ತವಾಗಿತ್ತು.

ಅದರಲ್ಲೂ ತಂಡದ ಆಪತ್ಬಾಂಧವ ಎಂದೇ ಕರೆಸಿಕೊಂಡಿರುವ ಬಾಬರ್ ಆಜಂ ವಿಂಡೀಸ್ ವೇಗಿಗಳ ವಿರುದ್ಧ ಒಂದಷ್ಟು ಪ್ರತಿರೋಧ ತೋರಿದ್ದರು. 33 ಎಸೆತಗಳನ್ನು ಎದುರಿಸಿದ ಆಜಂ 22 ರನ್​ಗಳಿಸಿ ಕ್ರೀಸ್​ನಲ್ಲಿ ನೆಲೆಯೂರುವ ಸೂಚನೆ ನೀಡಿದ್ದರು. ಆದರೆ ಒಶಾನೆ ಥೋಮಸ್​ ಅವರ ನಿಖರ ದಾಳಿ ಮುಂದೆ ಕೀಪರ್​ಗೆ ಕ್ಯಾಚಿತ್ತು ಬಾಬರ್ ಹೊರ ನಡೆಯಬೇಕಾಯಿತು.  140 ಕಿ.ಮೀ ವೇಗದಲ್ಲಿ ಬಂದಿದ್ದ ಚೆಂಡು ಬಾಬರ್ ಬ್ಯಾಟ್ ತಗುಲಿ ಇನ್ನೇನು ಫಸ್ಟ್​ ಸ್ಲಿಪ್ ಮೂಲಕ ಬೌಂಡರಿ ದಾಟಲಿದೆ ಎಂದುಕೊಳ್ಳುವಷ್ಟರಲ್ಲಿ, ವಿಕೆಟ್ ಕೀಪರ್ ಶಾಯ್ ಹೋಪ್ ಅದ್ಭುತ ಡೈವಿಂಗ್ ಮೂಲಕ ತಮ್ಮ ಕೈಚಳಕ ತೋರಿಸಿದ್ದರು.ಸ್ಲಿಪ್​ನಲ್ಲಿದ್ದ ಗೇಲ್​ ಚೆಂಡನ್ನು ಗುರುತಿಸುವ ಮುನ್ನವೇ  ಶಾಯ್ ಹೋಪ್ ಚೆಂಡನ್ನು ಹಾರಿ ಹಿಡಿದು ಬಾಬರ್​ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಈ ಅದ್ಭುತ ಕ್ಯಾಚ್ ವಿಡಿಯೋ ಭಾರೀ ವೈರಲ್ ಆಗಿದ್ದು, ವಿಶ್ವಕಪ್​ನಲ್ಲಿ ಮೂಡಿದ ಎರಡನೇ ಉತ್ತಮ ಕ್ಯಾಚ್​ ಎಂಬ ಪ್ರಶಂಸೆಗೆ ಒಳಗಾಗಿದೆ.


ಇನ್ನು ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್​ ಆಲ್​ರೌಂಡರ್ ಬೆನ್​ ಸ್ಟೋಕ್ಸ್ ಅತ್ಯಾದ್ಭುತ ಕ್ಯಾಚ್​ವೊಂದನ್ನು ಹಿಡಿಯುವ ಮೂಲಕ ಮೈದಾನದಲ್ಲಿ ಸಂಚಲನ ಸೃಷ್ಟಿಸಿದ್ದರು. ಆದಿಲ್ ರಶೀದ್ ಬೌಲಿಂಗ್​​ನಲ್ಲಿ ಆ್ಯಂಡಿಲ್ ಫೆಹ್ಲುಕ್ವಾಯೊ ಅವರು ಹೊಡೆದ ಚೆಂಡನ್ನು ಬೌಂಡರಿ ಗೆರೆ ಬಳಿ ಡೈವ್ ಹೊಡೆದು ಏಕಕೈಯಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದಿದ್ದರು.ಇದನ್ನೂ ಓದಿ:  ನೀವು ನಾಲಿಗೆ ಕ್ಲೀನ್ ಮಾಡುತ್ತಿಲ್ಲವೇ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ..!
First published: June 1, 2019, 4:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories