ಈ ಬಾರಿಯ ವಿಶ್ವಕಪ್​ನಲ್ಲಿ ಮಳೆಯದ್ದೇ ಆಟ; ಭಾರತ-ಪಾಕ್ ಪಂದ್ಯಕ್ಕೂ ವರುಣನ ಅಡ್ಡಿ ಸಾಧ್ಯತೆ!

ICC Cricket World Cup 2019: ಇಂಗ್ಲೆಂಡ್​​ನಲ್ಲಿ ಮೇ-ಜೂನ್ ತಿಂಗಳು ಹೆಚ್ಚು ಮಳೆ ಸುರಿಯುವ ಕಾಲ ಎಂದು ತಿಳಿದಿದ್ದರು ವಿಶ್ವಕಪ್ ಆಯೋಜಿಸಿರುವುದು ಸದ್ಯ ಅನೇಕ ಕೆಂಗಣ್ಣಿಗೆ ಕಾರಣವಾಗಿದೆ.

Vinay Bhat | news18
Updated:June 12, 2019, 8:39 AM IST
ಈ ಬಾರಿಯ ವಿಶ್ವಕಪ್​ನಲ್ಲಿ ಮಳೆಯದ್ದೇ ಆಟ; ಭಾರತ-ಪಾಕ್ ಪಂದ್ಯಕ್ಕೂ ವರುಣನ ಅಡ್ಡಿ ಸಾಧ್ಯತೆ!
ಸಾಂದರ್ಭಿಕ ಚಿತ್ರ
  • News18
  • Last Updated: June 12, 2019, 8:39 AM IST
  • Share this:
ಬೆಂಗಳೂರು (ಜೂ. 11): ಈ ಬಾರಿಯ ವಿಶ್ವಕಪ್​ನಲ್ಲಿ ಮಳೆರಾಯನದ್ದೇ ಆಟ ಎಂಬಂತಾಗಿದೆ. ಈಗಾಗಲೇ ಮೂರು ಪಂದ್ಯಗಳು ವರುಣನ ಆರ್ಭಟದಿಂದ ಮೊಟಕುಗೊಳಿಸಲಾಗಿದೆ. ಇಂಗ್ಲೆಂಡ್​​ನಲ್ಲಿ ಈಗಷ್ಟೆ ಮಳೆಗಾಲ ಆರಂಭವಾಗಿದ್ದು, ಹೀಗಾಗಿ ವಿಶ್ವಕಪ್ ಅಂತ್ಯವಾಗುವ ವರೆಗೂ ಮಳೆರಾಯನ ಕಾಟ ಮುಂದುವರಿಯಲಿದೆ.

ಈ ಹಿಂದೆ ಪಾಕಿಸ್ತಾನ-ಶ್ರೀಲಂಕಾ ಮತ್ತು ಬಾಂಗ್ಲಾದೇಶ-ಶ್ರೀಲಂಕಾ ನಡುವಣ ಪಂದ್ಯ ಟಾಸ್ ಪ್ರಕ್ರಿಯೆಯೂ ಕಾಣದೆ ಮಳೆಗೆ ಆಹುತಿಯಾಗಿತ್ತು. ನಿನ್ನೆ ವೆಸ್ಟ್​ ಇಂಡೀಸ್ ಹಾಗೂ ದ. ಆಫ್ರಿಕಾ ಪಂದ್ಯ ಕೂಡ ಆರಂಭವಾಗಿ ಕೆಲ ಹೊತ್ತಿನಲ್ಲಿ ಮಳೆ ಆರಂಭವಾಗಿ, ಬಿಡದ ಕಾರಣ ಫಲಿತಾಂಶ ಇಲ್ಲದೆ ರದ್ದು ಮಾಡಲಾಯಿತು. ಅಲ್ಲದೆ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಣ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತ್ತು. ಬಳಿಕ ಡಕ್ವರ್ತ್​ ನಿಮಯದ ಪ್ರಕಾರ ಪಂದ್ಯವನ್ನು ಅಂತ್ಯಗೊಳಿಸಲಾಯಿತು.

ಹೀಗೆ ಸದ್ಯ ನಡೆದಿರುವ 16 ಪಂದ್ಯಗಳ ಪೈಕಿ ನಾಲ್ಕು ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿದ್ದಾನೆ. ಲಂಡನ್​ನಲ್ಲಿ ಇನ್ನೂಕೂಡ ಹೆಚ್ಚು ಮಳೆ ಬರುವ ಸಂಭವವಿದೆಯಂತೆ. ನಾಳೆ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಪಂದ್ಯ ಟೌನ್ಟನ್​ನಲ್ಲಿ ನಡೆಯಲಿದ್ದು ನಿನ್ನೆಯಿಂದಲೇ ಜೋರಾಗಿ ಮಳೆ ಸುರಿಯಿತ್ತದೆ.

Rain may pours in the time of India Pakistan cricket match; this world cup 2019 season also with heavy rain?
ಇಂಗ್ಲೆಂಡ್​ನ ಬ್ರಿಸ್ಟಾಲ್ ಕ್ರಿಕೆಟ್ ಕ್ರೀಡಾಂಗಣ


ಇನ್ನು ಜೂನ್ 16 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯಕ್ಕೂ ಮಳೆರಾಯನ ಆಗಮನವಾಗಲಿದೆಯಂತೆ. ಈ ಪಂದ್ಯ ಮ್ಯಾಂಚೆಸ್ಟರ್​​ನಲ್ಲಿ ನಡೆಯಲಿದ್ದು, ವರುಣ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಇಂಗ್ಲೆಂಡ್ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಧವನ್ ಸ್ಥಾನಕ್ಕೆ ಪಂತ್-ಕಾರ್ತಿಕ್-ಶಂಕರ್ ಅಲ್ಲ; ಲಂಡನ್ ಫ್ಲೈಟ್ ಏರಲಿದ್ದಾನೆ ಈ ಆಟಗಾರ?

ಇದರ ಜೊತೆಗೆ ಜೂ. 13 ರಂದು ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ನ್ಯಾಥಿಂಗ್​​ಹ್ಯಾಮ್​​ನಲ್ಲಿ ಕಾದಾಟ ನಡೆಸಲಿದೆ. ಆದರೆ ಇಲ್ಲಿ ಈಗಾಗಲೇ ಮಳೆ ಸುರಿಯುತ್ತಿರುವ ಕಾರಣ, ಟೀಂ ಇಂಡಿಯಾ ಅಭ್ಯಾಸವನ್ನು ಕೂಡ ಮೊಟಕುಗೊಳಿಸಿದೆ.ಇಂಗ್ಲೆಂಡ್​​ನಲ್ಲಿ ಮೇ-ಜೂನ್ ತಿಂಗಳು ಹೆಚ್ಚು ಮಳೆ ಸುರಿಯುವ ಕಾಲ ಎಂದು ತಿಳಿದಿದ್ದರು ವಿಶ್ವಕಪ್ ಆಯೋಜಿಸಿರುವುದು ಸದ್ಯ ಅನೇಕ ಕೆಂಗಣ್ಣಿಗೆ ಕಾರಣವಾಗಿದೆ.

ವಿಶ್ವಕಪ್ ಎಂಬ ಮಹಾಸಮರಕ್ಕೆ ಮಳೆಯ ಕಾಟ ಇರಬಾರದೆಂದು ಸಾಮಾನ್ಯವಾಗಿ ಫೆಬ್ರವರಿಯಿಂದ ಪ್ರಾರಂಭಿಸಿದರೆ ಏಪ್ರಿಲ್ ಅಂತ್ಯವಾಗುವ ಮುನ್ನ ಕೊನೆಗೊಳಿಸಲಾಗುತ್ತದೆ. 2003ರ ವಿಶ್ವಕಪ್ ಫೆಬ್ರವರಿಯಲ್ಲಿ ಆರಂಭವಾಗಿ ಮಾರ್ಚ್​​ನಲ್ಲಿ ಅಂತ್ಯಕಂಡಿತ್ತು. ಇನ್ನು 2007ರ ವಿಶ್ವಕಪ್ ಮಾರ್ಚ್​​ನಿಂದ ಏಪ್ರಿಲ್​ವರೆಗೆ ನಡೆದಿತ್ತು. ಅಂತೆಯೆ ಫೆಬ್ರವರಿಯಲ್ಲಿ ಆರಂಭವಾದ 2011ರ ವಿಶ್ವಕಪ್ ಮಾರ್ಚ್​ 2ನೇ ತಾರೀಕಿಗೆ ಕೊನೆಗೊಂಡಿದೆ. ಕಳೆದ 2015ರ ವಿಶ್ವಕಪ್ ಕೂಡ ಫೆಬ್ರವರಿಯಿಂದ ಮಾರ್ಚ್​​ವರೆಗೆ ನಡೆದಿತ್ತು.

ಆದರೆ, ಈ ಬಾರಿಯ ವಿಶ್ವಕಪ್ ಮಾತ್ರ ಆರಂಭವಾಗಿದ್ದೇ ಮೇ ಅಂತ್ಯದಲ್ಲಿ. ಇದಕ್ಕೆ ಪ್ರಮುಖ ಕಾರಣ ಐಪಿಎಲ್. ಐಪಿಎಲ್ ಮುಗಿದ ನಂತರವೆ ವಿಶ್ವಕಪ್ ಆರಂಭಿಸಬೇಕಾಗಿ ಬಂದಿದ್ದು ಐಸಿಸಿ ಹಾಗೂ ಇಂಗ್ಲೆಂಡ್​ಗೆ ದೊಡ್ಡ ಹೊಡೆತ ಬಿದ್ದಂತಾಯಿತು. ಹೀಗಾಗಿ ಬೇರೆ ದಾರಿಗಳಿಲ್ಲದೆ ಮಳೆಗಾಲದಲ್ಲೇ ಈ ಬಾರಿಯ ವಿಶ್ವಕಪ್ ಮುಂದುವರಿಯುತ್ತಿದೆ.

ಒಟ್ಟಾರೆ ಈ ಬಾರಿಯ ವಿಶ್ವಕಪ್​ನಲ್ಲಿ ಮಳೆಯಿಂದಾಗಿ ಈಗಾಗಲೇ ಕೆಲವು ಪಂದ್ಯಗಳು ರದ್ದಾಗಿದೆ. ಇದು ತಂಡಗಳ ಅಂಕದ ಮೇಲೆ ಸಾಕಷ್ಟು ಪರಿಣಾಮ ಕೂಡ ಬೀಳುತ್ತಿದೆ.

First published: June 11, 2019, 9:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading