ಅಬ್ಬಾ.. ವಿಶ್ವಕಪ್​ನಲ್ಲಿ ಒಂದು ಪಂದ್ಯ ಗೆದ್ದರೆ ಸಾಕು, ಸಿಗುತ್ತೆ ___ ಹಣ!

ಈ ಹಿಂದಿನ ವಿಶ್ವಕಪ್​ಗೆ​ ಹೋಲಿಸಿದರೆ ಈ ಬಾರಿ ವಿಜೇತರಿಗೆ ನೀಡುವ ಬಹುಮಾನದ ಮೊತ್ತವನ್ನು ಏರಿಸಲಾಗಿದೆ.

Vinay Bhat | news18
Updated:June 28, 2019, 9:35 PM IST
ಅಬ್ಬಾ.. ವಿಶ್ವಕಪ್​ನಲ್ಲಿ ಒಂದು ಪಂದ್ಯ ಗೆದ್ದರೆ ಸಾಕು, ಸಿಗುತ್ತೆ ___ ಹಣ!
ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಟ್ರೋಫಿ
  • News18
  • Last Updated: June 28, 2019, 9:35 PM IST
  • Share this:
ಬೆಂಗಳೂರು (ಜೂ. 28): ಇಂಗ್ಲೆಂಡ್​​ನಲ್ಲಿ ವಿಶ್ವಕಪ್​ ಕದನ ಆರಂಭವಾಗಿ ಆಗಲೇ ಅರ್ಧದಷ್ಟು ಪಂದ್ಯಗಳು ಮುಗಿದಿವೆ. ಕೆಲವು ತಂಡಗಳ ನಿರ್ಧಾರ ಹೊರಬಿದ್ದಿದ್ದು, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಹಾಗೂ ವೆಸ್ಟ್​ ಇಂಡೀಸ್ ತಂಡದ ವಿಶ್ವಕಪ್ ಯಾನ ಅಂತ್ಯಗೊಂಡಿದೆ.

ಹೀಗಿರುವಾಗ ಇಂಟರ್​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್ (ಐಸಿಸಿ) ಈ ಬಾರಿಯ ವಿಶ್ವಕಪ್ ವಿಜೇತರಿಗೆ ನೀಡುವ ಬಹುಮಾನದ ಮೊತ್ತ ಎಷ್ಟು ಎಂಬುದು ತಿಳಿದರೆ ಅಚ್ಚರಿ ಪಡುತ್ತೀರಿ. ಈ ಪಂದ್ಯಾವಳಿಯಲ್ಲಿ ಸುಮಾರು 70 ಕೋಟಿ 20 ಲಕ್ಷ 40 ಸಾವಿರವನ್ನು ಬಹುಮಾನವಾಗಿ ನೀಡುವುದಾಗಿ ಐಸಿಸಿ ಘೋಷಿಸಿದೆ. ಈ ಹಿಂದಿನ ವಿಶ್ವಕಪ್​ಗೆ​ ಹೋಲಿಸಿದರೆ ಈ ಬಾರಿ ವಿಜೇತರಿಗೆ ನೀಡುವ ಬಹುಮಾನದ ಮೊತ್ತವನ್ನು ಏರಿಸಲಾಗಿದೆ.

ಸೆಮಿಫೈನಲ್​ ಪ್ರವೇಶಿಸುವ ತಂಡಗಳಿಗೆ ತಲಾ 5 ಕೋಟಿ, 61 ಲಕ್ಷ, 46 ಸಾವಿರ ರೂ ಬಹುಮಾನ ನಿಗದಿಪಡಿಸಲಾಗಿದ್ದು, ಲೀಗ್ ಸ್ಟೇಜ್​ನ ಪ್ರತಿ ಪಂದ್ಯಗನ್ನು ಗೆಲ್ಲುವ ತಂಡಗಳಿಗೆ ಸುಮಾರು 28 ಲಕ್ಷ ರೂ. ದೊರೆಯಲಿದೆ. ಅಂತೆಯೆ ಮುಂದಿನ ಹಂತ ಪ್ರವೇಶಿಸುವ ತಂಡಗಳಿಗೆ ಸುಮಾರು 70 ಲಕ್ಷ ರೂ. ಬಹುಮಾನ ನಿಗದಿಪಡಿಸಲಾಗಿದೆ.

ಪಾಕ್ ಸೆಮೀಸ್ ತಲುಪದಂತೆ ಮಾಡಲು ಭಾರತ ಮುಂದಿನ ಪಂದ್ಯ ಸೋಲಲೂ ತಯಾರಿದೆ

ICC Cricket World Cup 2019: Prize Money: Winner to get a purse of 4 million
ಕ್ರಿಕೆಟ್ ವಿಶ್ವಕಪ್ 2019 ಟ್ರೋಫಿ


ಇನ್ನು ಜುಲೈ 14 ರಂದು ನಡೆಯುವ ಫೈನಲ್​ನಲ್ಲಿ ರನ್ನರ್ ಅಪ್ ಆಗುವ ತಂಡವು ಸುಮಾರು 14 ಕೋಟಿ ರೂ. ಮೊತ್ತದ ಪ್ರಶಸ್ತಿ ಬಾಜಿಕೊಳ್ಳಲಿದೆ. ಹಾಗೆಯೇ ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ ಟ್ರೋಫಿಯನ್ನು ಎತ್ತಿ ಹಿಡಿಯುವ ತಂಡಕ್ಕೆ ಸುಮಾರು 28 ಕೋಟಿ, 8 ಲಕ್ಷ ರೂ. ದೊರೆಯಲಿದೆ. ಈ ಮೊತ್ತವು ಇಂಡಿಯನ್ ಪ್ರೀಮಿಯರ್ ಲೀಗ್​ನ ಚಾಂಪಿಯನ್ ತಂಡಕ್ಕೆ ನೀಡಲಾದ ಪ್ರಶಸ್ತಿಗಿಂತ ಅಧಿಕ.

World Cup 2019: ಲಂಕಾ-ಆಫ್ರಿಕಾ ಪಂದ್ಯದ ಮಧ್ಯೆ ಮೈದಾನಕ್ಕೆ ಜೇನು ನೊಣಗಳ ದಾಳಿ
Loading...

ಐಸಿಸಿ ವಿಶ್ವಕಪ್ 2019 - ಪ್ರಶಸ್ತಿ ಮೊತ್ತ

ವಿಜೇತರಿಗೆ - 4,000,000 ಡಾಲರ್ ( ಸುಮಾರು 28 ಕೋಟಿ ರೂ)

ರನ್ನರ್-ಅಪ್ - 2,000,000 ಡಾಲರ್ ( ಸುಮಾರು 14 ಕೋಟಿ ರೂ.)

ಸೆಮಿ ಫೈನಲಿಸ್ಟ್ (2 ತಂಡ) - 800,000 ಡಾಲರ್ ( ತಲಾ ಸುಮಾರು 5 ಕೋಟಿ)

ಪ್ರತಿ ಲೀಗ್ ಸ್ಟೇಜ್ ಪಂದ್ಯದ ವಿಜೇತ (45 ಪಂದ್ಯ) - 40,000 ಡಾಲರ್ ( ಸುಮಾರು 28 ಲಕ್ಷ ರೂ)

ಮುಂದಿನ ಹಂತ ಪ್ರವೇಶಿಸಿ ಗೆಲ್ಲುವ ತಂಡಗಳಿಗೆ - 100,000 ಡಾಲರ್ ( ಸುಮಾರು 70 ಲಕ್ಷ ರೂ)

ಒಟ್ಟು - 10,000,000 ಡಾಲರ್ ( ಸುಮಾರು 70 ಕೋಟಿ ರೂ)

First published:June 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...