HOME » NEWS » Sports » CRICKET ICC CRICKET WORLD CUP 2019 LOOKING AHEAD TO THE HIGH VOLTAGE INDIA VS PAKISTAN ENCOUNTER

ಪಾಕ್ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೆ ಕೊಹ್ಲಿ ಪಡೆಯಲ್ಲಿ ಮಹತ್ವದ ಬದಲಾವಣೆ?

India vs Pakistan: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಕೊಹ್ಲಿ ಪಡೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ಅಂದಾಜಿದೆ.

Vinay Bhat | news18
Updated:June 15, 2019, 3:49 PM IST
ಪಾಕ್ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೆ ಕೊಹ್ಲಿ ಪಡೆಯಲ್ಲಿ ಮಹತ್ವದ ಬದಲಾವಣೆ?
ಟೀಂ ಇಂಡಿಯಾ
  • News18
  • Last Updated: June 15, 2019, 3:49 PM IST
  • Share this:
ಬೆಂಗಳೂರು (ಜೂ. 15): ಭಾರತ-ಪಾಕಿಸ್ತಾನ್ ಕ್ರಿಕೆಟ್ ಪಂದ್ಯ ಎಂದರೆ ಅದು ಕ್ರೀಡೆಯಲ್ಲ.. ಎರಡೂ ದೇಶಗಳ ಮಧ್ಯೆ ಕ್ರಿಕೆಟ್ ಪಂದ್ಯ ನಡೆಯುತ್ತಿದೆ ಎಂದರೆ ಅಲ್ಲೊಂದು ಯುದ್ಧದ ವಾತಾವರಣ ನಿರ್ಮಾಣವಾಗುತ್ತದೆ. ಗೆಲ್ಲಲೇಬೇಕೂಂತ ಎರಡೂ ತಂಡಗಳ ಆಟಗಾರರು ಜಿದ್ದಿಗೆ ಬಿದ್ದು ಆಡುತ್ತಾರೆ.

ಅಂತೆಯೆ ನಾಳೆ (ಜೂ. 16) ಭಾರತ ಹಾಗೂ ಪಾಕಿಸ್ತಾನ ಈ ಬಾರಿಯ ವಿಶ್ವಕಪ್​ನಲ್ಲಿ ಎದುರಾಗುತ್ತಿದ್ದು, ವಿಶ್ವಕಪ್​ ಫೈನಲ್​ ಪಂದ್ಯ ಎನ್ನುವಷ್ಟರ ಮಟ್ಟಿಗೆ ರೋಚಕತೆ ಹುಟ್ಟಿಸಿದೆ. ಮ್ಯಾಂಚೆಸ್ಟರ್​​ನಲ್ಲಿ ಈ ಪಂದ್ಯ ನಡೆಯಲಿದ್ದು, 26 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಭಾರತ-ಪಾಕ್ ಪಂದ್ಯದ ಟಿಕೆಟ್ ಬಿಡುಗಡೆ ಮಾಡಿದ 48 ಘಂಟೆಗಳ ಒಳಗೆ ಸೋಲ್ಡ್​ ಔಟ್ ಆಗಿದೆ.

ಈ ಹೈವೋಲ್ಟೇಜ್ ಪಂದ್ಯಕ್ಕೆ ಕೊಹ್ಲಿ ಪಡೆ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಿ ಬಲಿಷ್ಠ ತಂಡವನ್ನೇ ಕಣಕ್ಕಿಳಿಸುವ ಅಂದಾಜಿದೆ. ಈಗಾಗಲೇ ಶಿಖರ್ ಧವನ್ ಇಂಜುರಿಗೆ ತುತ್ತಾಗಿ ವಿಶ್ರಾಂತಿಯಲ್ಲಿದ್ದು, ಓಪನರ್​ ಆಗಿ ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ.

India vs Pakistan: 4 ಲಕ್ಷ ರೂ. ಕೊಟ್ಟು ಭಾರತ-ಪಾಕ್​ ಪಂದ್ಯ ವೀಕ್ಷಿಸಲು ತಯಾರಿದ್ದಾರೆ ಅಭಿಮಾನಿಗಳು!

ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಿದರೆ, 4ನೇ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಎಂಬುದೆ ಕುತೂಹಲ. ವಿಜಯ್ ಶಂಕರ್ ಅಥವಾ ದಿನೇಶ್ ಕಾರ್ತಿಕ್ ಪೈಕಿ ಅನುಭವದ ಆಧಾರದ ಮೇಲೆ ಕಾರ್ತಿಕ್​ಗೆ ಅವಕಾಶ ಸಿಗುವ ಅಂದಾಜಿದೆ. ಇದರ ಜೊತೆ ರಿಷಭ್ ಪಂತ್ ಕೂಡ ಇಂಗ್ಲೆಂಡ್​ಗೆ ಬಂದಿಳಿದಿದ್ದು, ಬಿಸಿಸಿಐ ಈ ಬಗ್ಗೆ ಟ್ವೀಟ್ ಮಾಡಿದೆ.

India vs Pakistan, World Cup 2019: Rishabh Pant arrives in Manchester
ಇಂಗ್ಲೆಂಡ್​ಗೆ ಬಂದಿಳಿದ ರಿಷಭ್ ಪಂತ್


ಭಾರತಕ್ಕಿದು ಮುಖ್ಯ ಪಂದ್ಯವಾಗಿರುವುದರಿಂದ ಮತ್ತೊಂದು ಮಹತ್ವದ ಬದಲಾವಣೆ ಮಾಡರುವ ಸಂಬವವಿದೆ. ಕೇದರ್ ಜಾಧವ್ ಬದಲು ಆಲ್ರೌಂಡರ್ ರವೀಂದ್ರ ಜಡೇಜಾ ಕಣಕ್ಕಿಳಿಯಬಹುದು. ಪಾಕಿಸ್ತಾನ ಬ್ಯಾಟ್ಸ್​ಮನ್​ಗಳು ಸ್ಪಿನ್ನರ್​​ಗಳಿಗೆ ರನ್ ಕಲೆಹಾಕಲು ಪರದಾಡುತ್ತಿದ್ದಾರೆ. ಹೀಗಾಗಿ ಜಡೇಜಾ ಸ್ಪಿನ್ ಜೊತೆ ಬ್ಯಾಟಿಂಗ್​ನಲ್ಲು ಭಾರತಕ್ಕೆ ಬಲ ನೀಡಬಲ್ಲರು.ಉಳಿದಂತೆ ಎಂ ಎಸ್ ಧೋನಿ ಸ್ಥಾನ ಖಾಯಂ ಆಗಿದ್ದು, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಪಕ್ಕಾ ಆಗಿದೆ.

 First published: June 15, 2019, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories