HOME » NEWS » Sports » CRICKET ICC CRICKET WORLD CUP 2019 INDIA VS AUSTRALIA ROHIT SHARMA BREAKS SACHIN TENDULKARS WORLD RECORD

ಕ್ರಿಕೆಟ್ ದೇವರ ವಿಶ್ವ ದಾಖಲೆ ಮುರಿದ ಹಿಟ್​ಮ್ಯಾನ್​​; ರೋಹಿತ್ ಮತ್ತೊಂದು ಸಾಧನೆ

70 ಎಸೆತಗಳಲ್ಲಿ 57 ರನ್ ಸಿಡಿಸಿದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ 2000ಕ್ಕೂ ಅಧಿಕ ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ.

Vinay Bhat | news18
Updated:June 9, 2019, 5:50 PM IST
ಕ್ರಿಕೆಟ್ ದೇವರ ವಿಶ್ವ ದಾಖಲೆ ಮುರಿದ ಹಿಟ್​ಮ್ಯಾನ್​​; ರೋಹಿತ್ ಮತ್ತೊಂದು ಸಾಧನೆ
ರೋಹಿತ್ ಶರ್ಮಾ
  • News18
  • Last Updated: June 9, 2019, 5:50 PM IST
  • Share this:
ಬೆಂಗಳೂರು (ಜೂ. 09): ಸದ್ಯ ಸಾಗುತ್ತಿರುವ ವಿಶ್ವಕಪ್​ನ 14ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಆಟ ಪ್ರದರ್ಶಿಸುತ್ತಿದೆ. ಓಪನರ್​ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅಮೋಘ ಶತಕದ ಜೊತೆಯಾಟದಿಂದ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.

ಈ ಮಧ್ಯೆ 70 ಎಸೆತಗಳಲ್ಲಿ 57 ರನ್ ಸಿಡಿಸಿದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ 2000ಕ್ಕೂ ಅಧಿಕ ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ.

ಪಂದ್ಯ ಆರಂಭಕ್ಕೂ ಮುನ್ನ ಆಸೀಸ್ ವಿರುದ್ಧ ಈ ದಾಖಲೆ ಮಾಡಲು ರೋಹಿತ್​ಗೆ 20 ರನ್​ಗಳ ಅವಶ್ಯಕತೆಯಿತ್ತು. 12ನೇ ಓವರ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್​ ಓವರ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ರೋಹಿತ್​​ ಆಸೀಸ್ ವಿರುದ್ಧ 37 ಪಂದ್ಯಗಳಲ್ಲಿ 2 ಸಾವಿರ ರನ್ ಬಾರಿಸಿದ ಸಾಧನೆ ಮಾಡಿದರು.

Cricket World Cup 2019, IND vs AUS: ಧವನ್ ಅಮೋಘ ಶತಕ; ಬೃಹತ್ ಮೊತ್ತದತ್ತ ಭಾರತ

ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಹಿಟ್​ಮ್ಯಾನ್ ಮುರಿದಿದ್ದಾರೆ. ಸಚಿನ್ ಅವರು 40 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 2000 ರನ್ ಕಲೆಹಾಕಿದ್ದರು. ಆದರೆ, ಸದ್ಯ ರೋಹಿತ್ ಅವರು 37 ಇನ್ನಿಂಗ್ಸ್​​ಗಳಲ್ಲೇ ಈ ಸಾಧನೆ ಮಾಡಿದ್ದಾರೆ.

 ಇನ್ನು ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ಶತಕ ಸಿಡಿಸಿದ ಟೀಂ ಇಂಡಿಯಾ ಆಟಗಾರರ ಪೈಕಿ ರೋಹಿತ್ ಶರ್ಮಾ (7 ಶತಕ) ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ (9 ಶತಕ) ಹಾಗೂ 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (8 ಶತಕ) ಇದ್ದಾರೆ.

Youtube Video
First published: June 9, 2019, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories