India vs New Zealand: ಇಂದಿನ ಪಂದ್ಯ ರದ್ದಾದರೆ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಹಾದಿ ಹೇಗಿರಲಿದೆ?

ICC Cricket World Cup 2019: ನ್ಯಾಟಿಂಗ್​ಹ್ಯಾಮ್​ನ ಟ್ರೆಂಟ್​ಬ್ರಿಡ್ಜ್​ ಮೈದಾನ ಸ್ವಿಮ್ಮಿಂಗ್ ಪೂಲ್​ನಂತಾಗಿದ್ದು, ಪಂದ್ಯ ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದೆ. 

Vinay Bhat | news18
Updated:June 13, 2019, 6:01 PM IST
India vs New Zealand: ಇಂದಿನ ಪಂದ್ಯ ರದ್ದಾದರೆ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಹಾದಿ ಹೇಗಿರಲಿದೆ?
ಸಾಂದರ್ಭಿಕ ಚಿತ್ರ
  • News18
  • Last Updated: June 13, 2019, 6:01 PM IST
  • Share this:
ವಿಶ್ವಕಪ್​ನಲ್ಲಿ ಇಂದು ನಡೆಯಬೇಕಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಬಹುತೇಕ ರದ್ದಾಗುವಂತೆ ಗೋಚರಿಸುತ್ತಿದೆ. ನ್ಯಾಟಿಂಗ್​ಹ್ಯಾಮ್​ನಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದ್ದು, ನಿಲ್ಲುವಂತೆ ಕಾಣುತ್ತಿಲ್ಲ.

ಈಗಾಗಲೇ ಮೂರು ಪಂದ್ಯಗಳು ವರುಣನ ಆರ್ಭಟಕ್ಕೆ ಆಹುತಿಯಾಗಿದೆ. ಸದ್ಯ ಇದೇ ಸಾಲಿಗೆ ಭಾರತ-ಕಿವೀಸ್ ಪಂದ್ಯ ಕೂಡ ಸೇರಿಕೊಳ್ಳುವಂತಿದೆ. ಮೊನ್ನೆಯಿಂದಲೇ ನ್ಯಾಟಿಂಗ್​ಹ್ಯಾಮ್​ನಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಭಾರತ ತನ್ನ ಅಭ್ಯಾಸವನ್ನೂ ಮೊಟಕುಗೊಳಿಸಿತ್ತು. ನಿನ್ನೆ ರಾತ್ರಿ ಕೂಡ ಜೋರಾಗಿ ವರುಣ ಆವರಿಸಿದ್ದ. ಆದರೆ ಬೆಳಗಿನ ಜಾವದ ಹೊತ್ತಿಗೆ ಹಿಂದೆ ಸರಿದಿದ್ದ ಮಳೆ, ಟಾಸ್ ಆಗುವ ಹೊತ್ತಿಗೆ ಮತ್ತೆ ಕಾಡಿದ್ದು ಈವರೆಗೆ ಸುರಿಯಿತ್ತಿದೆ.

ಮೈದಾನ ಸ್ವಿಮ್ಮಿಂಗ್ ಪೂಲ್​ನಂತಾಗಿದ್ದು, ಪಂದ್ಯ ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯ ರದ್ದಾದರೆ ಕೊಹ್ಲಿ ಪಡೆಗೆ ಮುಂದೆ ಸವಾಲು ಬಲಿಷ್ಠ ತಂಡದೆದುರಿದೆ. ಭಾರತ ಮುಂದಿನ ಪಂದ್ಯವನ್ನು ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣೆಸಾಟ ನಡೆಸಲಿದೆ. ಜೂನ್ 16 ರಂದು ಈ ಪಂದ್ಯ ನಡೆಯಲಿದೆ. ಆದರೆ ಇದಕ್ಕೂ ಮಳೆರಾಯನ ಕಾಟ ಈಗಾಗಲೇ ಆರಂಭವಾಗಿದೆ. ಮ್ಯಾಂಚೆಸ್ಟರ್​​ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಇಂಗ್ಲೆಂಡ್ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗೆ ಮುಂದಿನ ಪಂದ್ಯಕ್ಕೂ ವರುಣ ಅಡ್ಡಿ ಪಡಿಸಿ ಭಾರತ-ಪಾಕ್ ನಡುವಣ ಪಂದ್ಯ ರದ್ದಾದರೆ ಅಂಕಪಟ್ಟಿಯಲ್ಲಿ ಕೊಹ್ಲಿ ಪಡೆ ಕೆಳಕ್ಕೆ ಕುಸಿಯಲಿದೆ.

Cricket Wolrd Cup 2019, IND vs NZ: ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ

India vs New Zealand Live Score, ICC Cricket World Cup 2019 Match in Nottingham, Toss delayed due to rain
ಮೈದಾನದಿಂದ ನೀರನ್ನು ಹೊರಹಾಕುತ್ತಿರುವುದು


ಇಂಗ್ಲೆಂಡ್​​ನಲ್ಲಿ ಮೇ-ಜೂನ್ ತಿಂಗಳು ಹೆಚ್ಚು ಮಳೆ ಸುರಿಯುವ ಕಾಲ ಎಂದು ತಿಳಿದಿದ್ದರು ವಿಶ್ವಕಪ್ ಆಯೋಜಿಸಿರುವುದು ಸದ್ಯ ಅನೇಕ ಕೆಂಗಣ್ಣಿಗೆ ಕಾರಣವಾಗಿದೆ. ಅಲ್ಲೆ ವಿಶ್ವಕಪ್ ಅಂಕಪಟ್ಟಿಯಲ್ಲು ಅನೇಕರು ಟ್ರೋಲ್ ಮಾಡಿದ್ದು, ನ್ಯೂಜಿಲೆಂಡ್, ಆಸ್ಟ್ರೇಲಿಯಾಕ್ಕಿಂತ ಗರಿಷ್ಠ ಪಾಯಿಂಟ್ ಮಳೆಗೆ ನೀಡಿದ್ದು ವೈರಲ್ ಆಗುತ್ತಿದೆ.

ವಿಶ್ವಕಪ್ ಎಂಬ ಮಹಾಸಮರಕ್ಕೆ ಮಳೆಯ ಕಾಟ ಇರಬಾರದೆಂದು ಸಾಮಾನ್ಯವಾಗಿ ಫೆಬ್ರವರಿಯಿಂದ ಪ್ರಾರಂಭಿಸಿದರೆ ಏಪ್ರಿಲ್ ಅಂತ್ಯವಾಗುವ ಮುನ್ನ ಕೊನೆಗೊಳಿಸಲಾಗುತ್ತದೆ. 2003ರ ವಿಶ್ವಕಪ್ ಫೆಬ್ರವರಿಯಲ್ಲಿ ಆರಂಭವಾಗಿ ಮಾರ್ಚ್​​ನಲ್ಲಿ ಅಂತ್ಯಕಂಡಿತ್ತು. ಇನ್ನು 2007ರ ವಿಶ್ವಕಪ್ ಮಾರ್ಚ್​​ನಿಂದ ಏಪ್ರಿಲ್​ವರೆಗೆ ನಡೆದಿತ್ತು. ಅಂತೆಯೆ ಫೆಬ್ರವರಿಯಲ್ಲಿ ಆರಂಭವಾದ 2011ರ ವಿಶ್ವಕಪ್ ಮಾರ್ಚ್​ 2ನೇ ತಾರೀಕಿಗೆ ಕೊನೆಗೊಂಡಿದೆ. ಕಳೆದ 2015ರ ವಿಶ್ವಕಪ್ ಕೂಡ ಫೆಬ್ರವರಿಯಿಂದ ಮಾರ್ಚ್​​ವರೆಗೆ ನಡೆದಿತ್ತು.
Loading...

ICC Cricket World Cup 2019: 'ಜುಲೈ 14 ರಂದು ವಿಶ್ವಕಪ್ ಟ್ರೋಫಿ ನನ್ನ ಕೈಯಲ್ಲಿರಬೇಕು'; ಹಾರ್ದಿಕ್ ಪಾಂಡ್ಯ

ಆದರೆ, ಈ ಬಾರಿಯ ವಿಶ್ವಕಪ್ ಮಾತ್ರ ಆರಂಭವಾಗಿದ್ದೇ ಮೇ ಅಂತ್ಯದಲ್ಲಿ. ಇದಕ್ಕೆ ಪ್ರಮುಖ ಕಾರಣ ಐಪಿಎಲ್. ಐಪಿಎಲ್ ಮುಗಿದ ನಂತರವೆ ವಿಶ್ವಕಪ್ ಆರಂಭಿಸಬೇಕಾಗಿ ಬಂದಿದ್ದು ಐಸಿಸಿ ಹಾಗೂ ಇಂಗ್ಲೆಂಡ್​ಗೆ ದೊಡ್ಡ ಹೊಡೆತ ಬಿದ್ದಂತಾಯಿತು. ಹೀಗಾಗಿ ಬೇರೆ ದಾರಿಗಳಿಲ್ಲದೆ ಮಳೆಗಾಲದಲ್ಲೇ ಈ ಬಾರಿಯ ವಿಶ್ವಕಪ್ ಮುಂದುವರಿಯುತ್ತಿದೆ.

ಒಟ್ಟಾರೆ ಈ ಬಾರಿಯ ವಿಶ್ವಕಪ್​ನಲ್ಲಿ ಮಳೆಯಿಂದಾಗಿ ಈಗಾಗಲೇ ಕೆಲವು ಪಂದ್ಯಗಳು ರದ್ದಾಗಿದೆ. ಇದು ತಂಡಗಳ ಅಂಕದ ಮೇಲೆ ಸಾಕಷ್ಟು ಪರಿಣಾಮ ಕೂಡ ಬೀಳುತ್ತಿದೆ.

First published:June 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...