HOME » NEWS » Sports » CRICKET ICC CRICKET WORLD CUP 2019 HERE IS THE FINAL LIST OF INDIAN TEAM WORLD CUP 2019 SQUAD SELECTED BY BCCI

ICC World Cup 2019: ವಿಶ್ವಕಪ್​​ಗೆ ಟೀಂ ಇಂಡಿಯಾ ಪ್ರಕಟ; 15 ಆಟಗಾರರ ಹೆಸರು ಇಲ್ಲಿದೆ ನೋಡಿ!

Team India Squad for ICC World Cup 2019: ಬಿಸಿಸಿಐ 2019 ವಿಶ್ವಕಪ್​ಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಮಾಡಿದೆ. ಎಂಎಸ್​​ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ 15 ಆಟಗಾರರ ಹೆಸರನ್ನು ಬಿಡುಗಡೆ ಮಾಡಿದ್ದು, ಯಾರಿಗೆಲ್ಲ ಸ್ಥಾನ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

Vinay Bhat | news18
Updated:May 2, 2019, 3:18 PM IST
ICC World Cup 2019: ವಿಶ್ವಕಪ್​​ಗೆ ಟೀಂ ಇಂಡಿಯಾ ಪ್ರಕಟ; 15 ಆಟಗಾರರ ಹೆಸರು ಇಲ್ಲಿದೆ ನೋಡಿ!
ವಿಶ್ವಕಪ್​ಗೆ ಟೀಂ ಇಂಡಿಯಾ
  • News18
  • Last Updated: May 2, 2019, 3:18 PM IST
  • Share this:
ಮುಂಬೈ (ಏ. 15): ಮೇ 30 ರಿಂದ ಇಂಗ್ಲೆಂಡ್​​ನಲ್ಲಿ ಆರಂಭವಾಗುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ಒಟ್ಟು 15 ಮಂದಿ ಆಟಗಾರರ ಹೆಸರನ್ನು ಆಯ್ಕೆ ಮಾಡಲಾಗಿದೆ.

ಮುಂಬೈನಲ್ಲಿಂದು ನಡೆದ ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ನಾಯಕ ವಿರಾಟ್‌ ಕೊಹ್ಲಿ, ಕೋಚ್ ರವಿಶಾಸ್ತ್ರಿ ಭಾಗಿಯಾಗಿದ್ದು, ಐದು ಆಯ್ಕೆದಾರರು ನಡೆಸಿದ ಸಭೆಯಲ್ಲಿ 15 ಆಟಗಾರರ ಹೆಸರನ್ನು ಪಕ್ರಟಮಾಡಲಾಗಿದೆ.

ಪ್ರಸ್ತುತ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಿರಿಯ ಆಟಗಾರ ಯುವರಾಜ್ ಸಿಂಗ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದು, ಕನ್ನಡಿಗ ಕೆ ಎಲ್ ರಾಹುಲ್​​ ತಂಡದಲ್ಲಿದ್ದಾರೆ. ಅಲ್ಲದೆ ಯುವ ಆಟಗಾರ ರಿಷಭ್ ಪಂತ್​​ರನ್ನು ಕೈಬಿಟ್ಟು ದಿನೇಶ್ ಕಾರ್ತಿಕ್​ರನ್ನು ಆಯ್ಕೆ ಮಾಡಲಾಗಿದೆ. ಅಂಬಟಿ ರಾಯುಡು ಹಾಗೂ ಖಲೀಲ್ ಅಹ್ಮದ್ ಕೂಡ ವಿಶ್ವಕಪ್ ತಂಡದಿಂದ ಹೊರಗುಳಿದಿದ್ದಾರೆ.

ವಿಶ್ವಕಪ್​ನಲ್ಲಿ ಆಡುವ 15 ಭಾರತೀಯ ಆಟಗಾರರು: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ವಿಜಯ್ ಶಂಕರ್, ಎಂ.ಎಸ್​​​​ ಧೋನಿ (ವಿಕೆಟ್ ಕೀಪರ್), ಕೇದಾರ್ ಜಾಧವ್, ದಿನೇಶ್ ಕಾರ್ತೀಕ್​​, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ.

 ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ...
First published: April 15, 2019, 3:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories