2015 Cricket World Cup: ಭಾರತ 3ನೇ ವಿಶ್ವಕಪ್​ ಗೆಲ್ಲುವ ಕನಸು ನುಚ್ಚುನೂರು; ಚಾಂಪಿಯನ್ ಆಫ್​ ಚಾಂಪಿಯನ್ ಪಟ್ಟಕ್ಕೇರಿದ ಆಸ್ಟ್ರೇಲಿಯಾ!

ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ಭರ್ಜರಿ ಆಟವನ್ನ ಪ್ರದರ್ಶಿಸಿತು. ಗ್ರೂಪ್ ಹಂತದಲ್ಲಿ ಆಡಿದ 6ಕ್ಕೆ 6 ಪಂದ್ಯವನ್ನ ಧೋನಿ ಪಡೆ ಗೆದ್ದು ಬೀಗಿತು.

Vinay Bhat | news18
Updated:June 1, 2019, 9:55 PM IST
2015 Cricket World Cup: ಭಾರತ 3ನೇ ವಿಶ್ವಕಪ್​ ಗೆಲ್ಲುವ ಕನಸು ನುಚ್ಚುನೂರು; ಚಾಂಪಿಯನ್ ಆಫ್​ ಚಾಂಪಿಯನ್ ಪಟ್ಟಕ್ಕೇರಿದ ಆಸ್ಟ್ರೇಲಿಯಾ!
ಆಸ್ಟ್ರೇಲಿಯಾ 2015 ವಿಶ್ವಕಪ್ ಗೆದ್ದ ಕ್ಷಣ
Vinay Bhat | news18
Updated: June 1, 2019, 9:55 PM IST
2011ರ ವಿಶ್ವಕಪ್ ಚಾಂಪಿಯನ್ ಟೀಂ ಇಂಡಿಯಾ 2015ರ ವಿಶ್ವಕಪ್​​ಗೆ ಬಹು ವಿಶ್ವಾಸದೊಂದಿಗೆ ಕಾಂಗರೂನಾಡಿಗೆ ಕಾಲಿಟ್ಟಿತ್ತು. ಆತಿಥ್ಯ ವಹಿಸಿದ್ದ ಆಸ್ಟ್ರೇಲಿಯಾ ಜೊತೆಗೆ ಭಾರತವೂ ಫೇವರಿಟ್​ ಆಗಿತ್ತು. ಆದರೆ ಧೋನಿ ಪಡೆಗೆ 3ನೇ ವಿಶ್ವಕಪ್​ ಗೆಲ್ಲುವ ಕನಸು ಕನಸಾಗೇ ಉಳಿಯಿತು. ತವರಿನಂಗಳದಲ್ಲಿ ಪಟ್ಟು ಬಿಟ್ಟುಕೊಡದ ಆಸ್ಟ್ರೇಲಿಯಾ ಚಾಂಪಿಯನ್ ಆಫ್​ ಚಾಂಪಿಯನ್ ಪಟ್ಟಕ್ಕೇರಿತು.

ಆಸೀಸ್ ಜೊತೆಗೆ ನ್ಯೂಜಿಲೆಂಡ್ ಕೂಡ ವಿಶ್ವಕಪ್​​ನ ಪಂದ್ಯಗಳಲ್ಲಿ ವೇದಿಕೆಯಾಗಿತ್ತು. ಹೀಗಾಗೆ ಹಾಲಿ ಚಾಂಪಿಯನ್ ಭಾರತ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ ಫೇವರಿಟ್ ತಂಡಗಳಾಗಿ ಕಣಕ್ಕಿಳಿದಿದವು. ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಟೀಂ ಇಂಡಿಯಾ ಭರ್ಜರಿ ಆಟವನ್ನ ಪ್ರದರ್ಶಿಸಿತು. ಗ್ರೂಪ್ ಹಂತದಲ್ಲಿ ಆಡಿದ 6ಕ್ಕೆ 6 ಪಂದ್ಯವನ್ನ ಧೋನಿ ಪಡೆ ಗೆದ್ದು ಬೀಗಿತು.

ನಾಕೌಟ್​​ನಲ್ಲಿ ಬಾಂಗ್ಲಾ ಮುಖಾಮುಖಿ

ಮೆಲ್ಬರ್ನ್​ ಅಂಗಳದಲ್ಲಿ ನಡೆದ 2ನೇ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಭಾರತ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 302 ರನ್ ಕಲೆಹಾಕಿತು. ಆದರೆ ಈ ಗುರಿ ಬೆನ್ನತ್ತಿದ ಬಾಂಗ್ಲಾ ಭಾರತದ ಪ್ರಬಲ ದಾಳಿಗೆ ತತ್ತರಿಸಿ 193ರನ್​ಗೆ ಆಲೌಟ್ ಆಯಿತು. ಈ ಮೂಲಕ 109 ರನ್​ಗಳ ಜಯಭೇರಿ ಬಾರಿಸಿದ ಭಾರತ ಸೆಮಿಫೈನಲ್​ಗೆ ಲಗ್ಗೆಯಿಟ್ಟಿತು.

ಇದನ್ನೂ ಓದಿ: ವಿಶ್ವಕಪ್ ಎತ್ತಿ ಹಿಡಿದ ಈ 5 ಆಟಗಾರರು ಒಮ್ಮೆಯೂ ಐಪಿಎಲ್ ಟ್ರೋಫಿ ಗೆದ್ದಿಲ್ಲ!

ಸೆಮಿಫೈನಲ್​ನಲ್ಲಿ ಇಂಡೋ-ಆಸಿಸ್​ ಫೈಟ್

ಸೆಮಿಫೈನಲ್​​​ನಲ್ಲಿ ಭಾರತ 3ನೇ ಪ್ರಶಸ್ತಿಗೆ ಕಣ್ಣಿಟ್ಟು ಆಸೀಸ್ ತಂಡವನ್ನ ಎದುರಿಸಿತು. ಸಿಡ್ನಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 328ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಭಾರತ 108ರನ್​ಗೆ 5 ವಿಕೆಟ್ ಕಳೆದುಕೊಂಡಿತು. ಕೆಳಕ್ರಮಾಂಕದಲ್ಲಿ ಧೋನಿ ಕೆಚ್ಚೆದೆಯ ಆಟ ಪ್ರದರ್ಶಿಸಿದರೂ, ತಂಡವನ್ನ ಗೆಲುವಿನ ದಡ ತಲುಪಿಸಲಾಗಲಿಲ್ಲ. ಪರಿಣಾಮ ಭಾರತ 233ರನ್​ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತವರಿನ ಅಂಗಳದಲ್ಲೇ ಫೈನಲ್​ ಪ್ರವೇಶಿಸಿತು.

ಇನ್ನು ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ಡಕ್ವರ್ತ್​ ಲೂಹಿಸ್ ನಿಯಮದಡಿಯಲ್ಲಿ ನ್ಯೂಜಿಲೆಂಡ್, ​ದಕ್ಷಿಣ ಆಫ್ರಿಕಾವನ್ನ ಮಣಿಸಿ ಫೈನಲ್​​ ಪ್ರವೇಶಿಸಿತು. ಹೀಗಾಗಿ ವಿಶ್ವಕಪ್​ ಆತಿಥ್ಯವಹಿಸಿದ್ದ 2 ರಾಷ್ಟ್ರಗಳೇ ಫೈನಲ್​ನಲ್ಲಿ ಮುಖಾಮುಖಿಯಾದವು.

ಇದನ್ನೂ ಓದಿ: 'ಕೊಹ್ಲಿ ಎದುರಾಳಿಗರನ್ನು ನಿಂದಿಸುತ್ತಾರೆ, ಅದನ್ನೆ ನಾವು ಮಾಡಿದರೆ ಸಹಿಸುವುದಿಲ್ಲ': ರಬಾಡ

5ನೇ ವಿಶ್ವಕಪ್ ಎತ್ತಿ ಹಿಡಿದ ಆಸಿಸ್​

ಚೊಚ್ಚಲ ಬಾರಿಗೆ ವಿಶ್ವಕಪ್ ಗೆಲ್ಲಬೇಕೆಂದು ಕಣಕ್ಕಿಳಿದಿದ್ದ ನ್ಯೂಜಿಲೆಂಡ್ ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ 183ರನ್​ಗೆ ಆಲೌಟ್​ ಆಯಿತು. 184ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.

First published:June 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...