ICC Cricket World Cup 2019: ವಿಶ್ವ ಚಾಂಪಿಯನ್​ ಇಂಗ್ಲೆಂಡ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು ಗೊತ್ತಾ?

ICC Cricket World Cup 2019 : 10 ತಂಡಗಳ 45 ದಿನಗಳ ಹೋರಾಟದಲ್ಲಿ ಎಲ್ಲರೂ ಊಹಿಸಿದಂತೆ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ತಂಡಗಳೇ ಸೆಮಿಫೈನಲ್​ ಪಂದ್ಯವನ್ನಾಡಿರುವುದು ಮತ್ತೊಂದು ವಿಶೇಷ.

zahir | news18
Updated:July 15, 2019, 9:21 PM IST
ICC Cricket World Cup 2019: ವಿಶ್ವ ಚಾಂಪಿಯನ್​ ಇಂಗ್ಲೆಂಡ್ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು ಗೊತ್ತಾ?
ICC
zahir | news18
Updated: July 15, 2019, 9:21 PM IST
2019 ಐಸಿಸಿ ವಿಶ್ವಕಪ್ ಕ್ರಿಕೆಟ್​ಗೆ ಭಾನುವಾರ ತೆರೆ ಬಿದ್ದಿದೆ. ಮೇ.30 ರಿಂದ ಆರಂಭವಾಗಿದ್ದ ಕ್ರಿಕೆಟ್​ ಕದನ ಜುಲೈ 14ರ ರೋಚಕ ಹೋರಾಟದೊಂದಿಗೆ ಅಂತ್ಯವಾಯಿತು. 12ನೇ ಆವೃತ್ತಿಯ ವಿಶ್ವಕಪ್​ನಲ್ಲಿ ಅತಿಥೇಯ ಇಂಗ್ಲೆಂಡ್ ಚೊಚ್ಚಲ ಬಾರಿ ವಿಶ್ವ ಚಾಂಪಿಯನ್ ಎನಿಸಿಕೊಂಡರೆ, ಕಳೆದ ಬಾರಿಯಂತೆ ಈ ಸಲ ಕೂಡ ನ್ಯೂಜಿಲೆಂಡ್ ತಂಡ ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬ್ಯಾಟಿಂಗ್ ಸ್ನೇಹಿ ಪಿಚ್​ಗಳು ಎನ್ನಲಾಗಿದ್ದ ಇಂಗ್ಲೆಂಡ್​ನ ಮೈದಾನಗಳು ಹವಾಮಾನ ವೈಪರಿತ್ಯದಿಂದ ಬೌಲರುಗಳಿಗೂ ಸಹಕಾರಿಯಾಗಿದ್ದು ವಿಶೇಷ.

10 ತಂಡಗಳ 45 ದಿನಗಳ ಹೋರಾಟದಲ್ಲಿ ಎಲ್ಲರೂ ಊಹಿಸಿದಂತೆ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ತಂಡಗಳೇ ಸೆಮಿಫೈನಲ್​ ಪಂದ್ಯವನ್ನಾಡಿರುವುದು ಮತ್ತೊಂದು ವಿಶೇಷ. ಈ ಬಾರಿಯ ವಿಶ್ವಕಪ್​ನಲ್ಲಿ ಹಲವು ದಾಖಲೆಗಳು ಬದಿಗೆ ಸರಿದರೆ, ಮತ್ತೆ ಹೊಸ ದಾಖಲೆಗಳು ಸೃಷ್ಟಿಯಾದವು. ಅಂಪೈರಿಂಗ್ ವಿವಾದ, ಅನುಚಿತ ವರ್ತನೆ, ಆಟಗಾರರ ಸೋಲಿನ ವಿದಾಯಕ್ಕೂ ಈ ಬಾರಿಯ ವಿಶ್ವಕಪ್​ ಸಾಕ್ಷಿಯಾಯಿತು. ಒಟ್ಟಾರೆ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆದ ತಂಡವು ಟ್ರೋಫಿಯೊಂದಿಗೆ ಸುಮಾರು 28 ಕೋಟಿ ರೂ ತಮ್ಮದಾಗಿಸಿಕೊಂಡರು.

ಪ್ರಶಸ್ತಿ ಹಣ:

ಚಾಂಪಿಯನ್ಸ್ - ಇಂಗ್ಲೆಂಡ್ : 4 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 28 ಕೋಟಿ)

ರನ್ನರ್ ಅಪ್ - ನ್ಯೂಜಿಲೆಂಡ್ : 2 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 14 ಕೋಟಿ)

ಸೆಮಿ ಫೈನಲಿಷ್ಟ್​ - ಭಾರತ ಮತ್ತು ಆಸ್ಟ್ರೇಲಿಯಾ - ತಲಾ 8 ಲಕ್ಷ ಡಾಲರ್ (ಸುಮಾರು 5.6 ಕೋಟಿ)

ಪಂದ್ಯ ಶ್ರೇಷ್ಠ:
Loading...

ಮ್ಯಾನ್ ಆಫ್ ದಿ ಫೈನಲ್ - ಬೆನ್ ಸ್ಟೋಕ್ಸ್ (84 *).

ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು:

1975- ಕ್ಲೈವ್ ಲಾಯ್ಡ್ ( ವೆಸ್ಟ್ ಇಂಡೀಸ್)

1979- ವಿವ್ ರಿಚರ್ಡ್ಸ್ ( ವೆಸ್ಟ್​ ಇಂಡೀಸ್)

1983- ಮೊಹಿಂದರ್ ಅಮರನಾಥ್ (ಭಾರತ)

1987- ಡೇವಿಡ್ ಬೂನ್ (ಆಸ್ಟ್ರೇಲಿಯಾ)

1992 - ವಾಸಿಂ ಅಕ್ರಂ (ಪಾಕಿಸ್ತಾನ)

1996- ಅರವಿಂದ ಡಿ ಸಿಲ್ವಾ (ಶ್ರೀಲಂಕಾ)

1999 - ಶೇನ್ ವಾರ್ನ್ (ಆಸ್ಟ್ರೇಲಿಯಾ)

2003 - ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)

2007 - ಆ್ಯಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ)

2011 - ಎಂ.ಎಸ್.ಧೋನಿ (ಭಾರತ)

2015 - ಜೇಮ್ಸ್ ಫಾಕ್ನರ್ (ಆಸ್ಟ್ರೇಲಿಯಾ)

2019 - ಬೆನ್ ಸ್ಟೋಕ್ಸ್ (ಇಂಗ್ಲೆಂಡ್)

 

ಸರಣಿ ಶ್ರೇಷ್ಠ:
ಕೇನ್ ವಿಲಿಯಮ್ಸನ್ (578 ರನ್- 2 ಶತಕ, 2 ಅರ್ಧಶತಕ, ಪಂದ್ಯಶ್ರೇಷ್ಠ- 2 ಬಾರಿ)

ವಿಶ್ವಕಪ್‌ ಟೂರ್ನಿಯ ಸರಣಿ ಶ್ರೇಷ್ಠರು:

1992 - ಮಾರ್ಟಿನ್ ಕ್ರೋವ್ (ನ್ಯೂಜಿಲೆಂಡ್)

1996 - ಸನತ್ ಜಯಸೂರ್ಯ ( ಶ್ರೀಲಂಕಾ)

1999 - ಲ್ಯಾನ್ಸ್ ಕ್ಲುಸ್ನರ್ (ದಕ್ಷಿಣ ಆಫ್ರಿಕಾ)

2003 - ಸಚಿನ್ ತೆಂಡೂಲ್ಕರ್ (ಭಾರತ)

2007 - ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ)

2011 - ಯುವರಾಜ್ ಸಿಂಗ್ (ಭಾರತ)

2015 - ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)

2019- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)
First published:July 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...