ವಿಶ್ವಕಪ್​​ನಲ್ಲೂ ಸ್ಮಿತ್-ವಾರ್ನರ್​ಗೆ ಅವಮಾನ; ಬಾಲ್ ಟೆಂಪರಿಂಗ್ ಬಗ್ಗೆ ಹೀಯಾಳಿಸಿದ ಅಭಿಮಾನಿಗಳು!

ICC Cricket World Cup 2019: 2018ರಲ್ಲಿ ಆಸ್ಟೇಲಿಯಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸಿಸ್​ನ ಮೂವರು ಆಟಗಾರರು ಬಾಲ್​ನ ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು.

Vinay Bhat | news18
Updated:June 2, 2019, 9:17 PM IST
ವಿಶ್ವಕಪ್​​ನಲ್ಲೂ ಸ್ಮಿತ್-ವಾರ್ನರ್​ಗೆ ಅವಮಾನ; ಬಾಲ್ ಟೆಂಪರಿಂಗ್ ಬಗ್ಗೆ ಹೀಯಾಳಿಸಿದ ಅಭಿಮಾನಿಗಳು!
ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್
  • News18
  • Last Updated: June 2, 2019, 9:17 PM IST
  • Share this:
ಬೆಂಗಳೂರು (ಜೂ. 01): ಮೈದಾನದಲ್ಲಿ ಎದುರಾಳಿಯನ್ನ ಕೆಣಕಿ ಮಾನಸಿಕ ದಾಳಿ ಮಾಡುತ್ತಿದ್ದ ಆಸ್ಟ್ರೇಲಿಯಾ ಆಟಗಾರರಿಗೆ ಸಂಕಷ್ಟ ಶುರುವಾಗಿದೆ. ಸದ್ಯ ಇದೇ ಅಸ್ತ್ರ ಅವರ ಮೇಲೆಯೇ ಪ್ರಯೋಗ ಆಗುತ್ತಿದೆ. ಇದು ಮಾಡುತ್ತಿರುವುದು ಯಾವುದೇ ತಂಡದ ಆಟಗಾರರಲ್ಲ. ಬದಲಾಗಿ ಇಂಗ್ಲೆಂಡ್​ ತಂಡದ ಅಭಿಮಾನಿಗಳು.

ಬಾಲ್​ ಟ್ಯಾಂಪರಿಂಗ್ ವಿವಾದದಿಂದ ಕಂಗೆಟ್ಟಿರುವ ಆಸಿಸ್​ ಆಟಗಾರರು ಈ ಬಾರಿ ವಿಶ್ವಕಪ್​ ಗೆಲ್ಲಲೇ ಬೇಕೆಂದು ಪಣ ತೊಟ್ಟಿದ್ದಾರೆ. ಆದರೆ ಕಾಂಗರೂ ಪಡೆಗೆ ಎದುರಾಳಿಯನ್ನ ಎದುರಿಸುವುದಕ್ಕಿಂತ, ಇಂಗ್ಲೆಂಡ್​ ಅಭಿಮಾನಿಗಳನ್ನು​ ಎದುರಿಸುವುದೇ ದೊಡ್ಡ ಸವಾಲಾಗಿದೆ.

ಅಭ್ಯಾಸ ಮಾಡಲು ಹೋಗುವಾಗ ಬರುವಾಗಲು ಸ್ಯಾಂಡ್ ಪೇಪರ್​ ಹಿಡಿದು ಆಟೋಗ್ರಾಫ್​ ಕೊಡಿ ಎಂದು ಪೀಡಿಸುತ್ತಿದ್ದಾರೆ. ಈ ಮೂಲಕ ಬಾಲ್ ಟ್ಯಾಂಪರಿಂಗ್ ವಿವಾದವನ್ನ ಇಂಗ್ಲೆಂಡ್​ ಫ್ಯಾನ್ಸ್​ ಕೆಣಕುತ್ತಿದ್ದಾರೆ.

2018ರಲ್ಲಿ ಆಸ್ಟೇಲಿಯಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸಿಸ್​ನ ಮೂವರು ಆಟಗಾರರು ಬಾಲ್​ನ ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಅದರಲ್ಲಿ ಪ್ರಮುಖವಾಗಿ ಸ್ಮಿತ್​ ಹಾಗೂ ವಾರ್ನರ್​ಗೆ ಒಂದು ವರ್ಷ ನಿಷೇಧ ಹೇರಲಾಗಿತ್ತು. ಈಗ ಈ ಶಿಕ್ಷೆಯನ್ನ ಮುಗಿಸಿ ವಾಪಾಸ್​ ಆಗಿರುವ ಸ್ಮಿತ್​ ಹಾಗೂ ವಾರ್ನರ್​ ಅವರನ್ನೇ ಇಂಗ್ಲೆಂಡ್​ ಅಭಿಮಾನಿಗಳು​ ಚೀಟ್​ ಎಂದು ಕೂಗಿ ಕೆಣಕುತ್ತಿದ್ದಾರೆ.ಇಷ್ಟೇ ಅಲ್ಲದೆ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಇಬ್ಬರು ಪ್ರೇಕ್ಷಕರು ಉಪ್ಪಿನಕಾಗದ ಮಾದರಿಯ ಬಟ್ಟೆಯನ್ನು ಧರಿಸಿ, ಕ್ರಿಕೆಟ್​ ಚೆಂಡಿನಂತಿರುವುದನ್ನು ಹಿಡಿದು ಅಣಕಿಸಿದ್ದಾರೆ.

 


ಈ ಘಟನೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿನ್ನೆ ನಡೆದಿದೆ. ಗ್ಯಾಲರಿಯಲ್ಲಿದ್ದ ಇಬ್ಬರು ಪ್ರೇಕ್ಷಕರು ವಾರ್ನರ್​ ಫೀಲ್ಡಿಂಗ್​ ಮಾಡುತ್ತಿದ್ದಾಗ ಅವರನ್ನು ಹೀಯಾಳಿಸಿದ್ದಲ್ಲದೆ, ಚೆಂಡು ವಿರೂಪಗೊಳಿಸಿದ್ದಕ್ಕಾಗಿ ಲೇವಡಿ ಮಾಡಿದ್ದಾರೆ.

 First published: June 2, 2019, 9:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading