ಯೂನಿವರ್ಸಲ್ ಬಾಸ್ ಈಗ ವಿಶ್ವಕಪ್​ನಲ್ಲೂ ಬಾಸ್; ಗೇಲ್ ಮುಡಿಗೆ ಮತ್ತೊಂದು ದಾಖಲೆ

Chris Gayle: ವಿಶ್ವಕಪ್​​ ಇತಿಹಾಸದಲ್ಲಿ 38 ಸಿಕ್ಸ್​ ಬಾರಿಸುವ ಮೂಲಕ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ಎಬಿ ಡಿವಿಲಿಯರ್ಸ್​ 37 ಸಿಕ್ಸರ್ ಬಾರಿಸಿ ವಿಶ್ವಕಪ್​ನಲ್ಲಿ ಗರಿಷ್ಠ ಸಿಕ್ಸರ್ ಸಿಕ್ಸ್​ ಸಿಡಿಸಿದ ಪ್ರಥಮ ಆಟಗಾರರಾಗಿದ್ದರು.

Vinay Bhat | news18
Updated:May 31, 2019, 10:04 PM IST
ಯೂನಿವರ್ಸಲ್ ಬಾಸ್ ಈಗ ವಿಶ್ವಕಪ್​ನಲ್ಲೂ ಬಾಸ್; ಗೇಲ್ ಮುಡಿಗೆ ಮತ್ತೊಂದು ದಾಖಲೆ
ಕ್ರಿಸ್ ಗೇಲ್
  • News18
  • Last Updated: May 31, 2019, 10:04 PM IST
  • Share this:
ಬೆಂಗಳೂರು (ಮೇ. 31): ವೆಸ್ಟ್​ ಇಂಡೀಸ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್​ಗೆ ಇದು ಕೊನೆಯ ವಿಶ್ವಕಪ್. ವಿಶ್ವಕಪ್ ಮುಗಿದ ನಂತರ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಸಿಲಿದ್ದಾರೆ. ಹೀಗಿರುವಾಗ ಯೂನಿವರ್ಸಲ್ ಬಾಸ್ 2019 ವಿಶ್ವಕಪ್​​ ಅನ್ನು ಭರ್ಜರಿ ಆಗಿಯೇ ಪ್ರಾರಂಭ ಮಾಡಿದ್ದಾರೆ.

ಈ ಬಾರಿಯ ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಕ್ರಿಸ್ ಗೇಲ್ ನೂತನ ದಾಖಲೆ ಬರೆದಿದ್ದಾರೆ. ಸದ್ಯ ಸಾಗುತ್ತಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೇಲ್ ಆರ್ಭಟಿಸುತ್ತಿದ್ದು, ವಿಶ್ವಕಪ್​ನಲ್ಲೇ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ವಿಶ್ವಕಪ್​​ ಇತಿಹಾಸದಲ್ಲಿ 39 ಸಿಕ್ಸ್​ ಬಾರಿಸುವ ಮೂಲಕ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ಎಬಿ ಡಿವಿಲಿಯರ್ಸ್​ 37 ಸಿಕ್ಸರ್ ಬಾರಿಸಿ ವಿಶ್ವಕಪ್​ನಲ್ಲಿ ಗರಿಷ್ಠ ಸಿಕ್ಸರ್ ಸಿಕ್ಸ್​ ಸಿಡಿಸಿದ ಪ್ರಥಮ ಆಟಗಾರರಾಗಿದ್ದರು. ಸದ್ಯ 39 ಸಿಕ್ಸ್​ನೊಂದಿಗೆ ಗೇಲ್ ಮೊದಲ ಸ್ಥಾನದಲ್ಲಿದ್ದರೆ, ಡಿವಿಲಿಯರ್ಸ್​​(37 ಸಿಕ್ಸ್​), ರಿಕಿ ಪಾಂಟಿಂಗ್(31 ಸಿಕ್ಸ್​), ಬ್ರೆಂಡನ್ ಮೆಕಲಮ್(29 ಸಿಕ್ಸ್​), ಹರ್ಷಲ್ ಗಿಬ್ಸ್​(28 ಸಿಕ್ಸ್) ಕ್ರಮವಾಗಿ 2, 3, 4 ಹಾಗೂ 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Cricket World Cup 2019, WI vs PAK: ಕೇವಲ 105 ರನ್​ಗಳಿಗೆ ಪಾಕಿಸ್ತಾನ ಆಲೌಟ್

ವೆಸ್ಟ್​ ಇಂಡೀಸ್​ ಕಂಡ ಉತ್ತಮ ಆಟಗಾರರ ಪೈಕಿ ಗೇಲ್​ ಮುಂಚೂಣಿಯಲ್ಲಿದ್ದಾರೆ. 288 ಏಕದಿನ ಪಂದ್ಯಗಳನ್ನು ಅವರು ಆಡಿದ್ದು, 10 ಸಾವಿರ ರನ್​​ಗಳ ಗಡಿ ದಾಟಿದ್ದಾರೆ. ಬ್ರಿಯಾನ್​ ಲಾರಾ ಅವರು 299 ಏಕದಿನ ಮ್ಯಾಚ್​ಗಳಲ್ಲಿ 10,405 ರನ್​ ಕಲೆ ಹಾಕಿದ್ದರು. ಲಾರಾ ನಂತರ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಗೇಲ್ ಪಾತ್ರರಾಗಿದ್ದರು.

 ಗೇಲ್​ ಗರಿಷ್ಠ ಮೊತ್ತ 215. ಅವರು ಕೇವಲ ಬ್ಯಾಂಟಿಂಗ್​ ಮಾತ್ರವಲ್ಲ ಬಾಲಿಂಗ್​ನಲ್ಲೂ ಚಮತ್ಕಾರ ತೋರಿದ್ದಾರೆ. ಏಕದಿನ ಪಂದ್ಯದಲ್ಲಿ ಅವರು ಬರೋಬ್ಬರಿ 165 ವಿಕೆಟ್​ ಪಡೆದಿದ್ದಾರೆ.

ನಾಟಿಂಗ್​ಹ್ಯಾಮ್​​ನ ಟ್ರೆಂಟ್​ಬ್ರಿಡ್ಜ್​​​ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್​​ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ತೋರಿದೆ. ಕೆರಿಬಿಯನ್ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಪಾಕ್ ಕೇವಲ 105 ರನ್​ಗೆ ಆಲೌಟ್ ಆಗಿದೆ. ಪಾಕ್ ಪರ ಬಾಬರ್ ಅಜಮ್ ಹಾಗೂ ಅಜಾಮ್ 22 ರನ್ ಗಳಿಸಿದ್ದೇ ಹೆಚ್ಚು. ಪರಿಣಾಮ 21.4 ಓವವರ್ನಲ್ಲಿ 105 ರನ್​ಗೆ ಆಲೌಟ್ ಆಗಿದೆ.

First published:May 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...