World Cup 2019: ಲಂಕಾ-ಆಫ್ರಿಕಾ ಪಂದ್ಯದ ಮಧ್ಯೆ ಮೈದಾನಕ್ಕೆ ಜೇನು ನೊಣಗಳ ದಾಳಿ

ಇಂದಿನ ಪಂದ್ಯ ಶ್ರೀಲಂಕಾಕ್ಕೆ ಬಹುಮಖ್ಯವಾಗಿದೆ. ದ. ಆಫ್ರಿಕಾ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಶ್ರೀಲಂಕಾಕ್ಕೆ ಇಂದಿನ ಪಂದ್ಯ ಗೆದ್ದರೆ ಮುಂದಿನ ಹಾದಿ ಜೀವಂತವಾಗಲಿದೆ.

Vinay Bhat | news18
Updated:June 28, 2019, 7:20 PM IST
World Cup 2019: ಲಂಕಾ-ಆಫ್ರಿಕಾ ಪಂದ್ಯದ ಮಧ್ಯೆ ಮೈದಾನಕ್ಕೆ ಜೇನು ನೊಣಗಳ ದಾಳಿ
ಲಂಕಾ-ಆಫ್ರಿಕಾ ಪಂದ್ಯದ ವೇಳೆ ಜೇನು ನೊಣಗಳ ದಾಳಿ
  • News18
  • Last Updated: June 28, 2019, 7:20 PM IST
  • Share this:
ಬೆಂಗಳೂರು (ಜೂ. 28): ಚಸ್ಟರ್ ಲಿ ಸ್ಟ್ರೀಟ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​​ನ 35ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಹರಿಣಗಳ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಲಂಕಾ ಬ್ಯಾಟ್ಸ್​ಮನ್​ಗಳು ಕೇವಲ 203 ರನ್​ಗಳಿಗೆ ಆಲೌಟ್ ಆಗಿದೆ.

ಈ ಮಧ್ಯೆ ಶ್ರೀಲಂಕಾ ಬ್ಯಾಟಿಂಗ್ ಮಾಡುವಾಗ ಮೈದಾನಕ್ಕೆ ಎಂಟ್ರಿ ಕೊಟ್ಟ ಜೇನು ನೊಣಗಳು, ಕೆಲಹೊತ್ತು ಆಟವನ್ನು ಸ್ಥಗಿತಗೊಳಸ ಬೇಕಾಗಿ ಬಂತು. 48ನೇ ಓವರ್ ಆಗುವ ಹೊತ್ತಿಗೆ ಈ ಘಟನೆ ನಡೆದಿದ್ದು, ಆಟಗಾರರು, ಅಂಪಾಯರ್​ಗಳು ಕೆಲ ಸಮಯ ಮೈದಾನದಲ್ಲೇ ಮಕಾಡೆ ಮಲಗಿದರು.

ಇನ್ನು ಆಫ್ರಿಕಾ-ಶ್ರೀಲಂಕಾ ಪಂದ್ಯ ನಡೆಯುವಾಗ ಜೇನು ನೊಣ ಮೈದಾನಕ್ಕೆ ನುಗ್ಗಿದ್ದು ಇದು ಮೊದಲೇನಲ್ಲ. ಈ ಹಿಂದೆ 2017 ರಲ್ಲೂ ಇವರಿಬ್ಬರ ನಡುವೆ ಸೆಣೆಸಾಟ ನಡೆಯುತ್ತಿರುವಾಗ ಜೇನು ನೊಣ ದಾಳಿ ಮಾಡಿ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

Cricket World Cup 2019, SL vs SA: ಲಂಕಾನ್ನರ ಮೇಲೆ ಹರಿಣಗಳ ಸವಾರಿ; ಶ್ರೀಲಂಕಾ 203ಕ್ಕೆ ಆಲೌಟ್!

 ಈ ಫೋಟೋವನ್ನು ಐಸಿಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಆದರೆ, ಈ ಜೇನು ನೊಣ ಹೇಗೆ? ಎಲ್ಲಿಂದ ಬಂತು ಎಂಬ ಬಗ್ಗೆ ಇನ್ನು ಮಾಹಿತಿ ತಿಳಿದು ಬಂದಿಲ್ಲ.

 ಇಂದಿನ ಪಂದ್ಯ ಶ್ರೀಲಂಕಾಕ್ಕೆ ಬಹುಮಖ್ಯವಾಗಿದೆ. ದ. ಆಫ್ರಿಕಾ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಶ್ರೀಲಂಕಾಕ್ಕೆ ಇಂದಿನ ಪಂದ್ಯ ಗೆದ್ದರೆ ಮುಂದಿನ ಹಾದಿ ಜೀವಂತವಾಗಲಿದೆ. ಎಲ್ಲಾದರು ಸೋತರೆ ಲಂಕಾ ಕೂಡ ವಿಶ್ವಕಪ್​​ನಿಂದ ಔಟ್ ಆಗಲಿದೆ.

 

First published: June 28, 2019, 7:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading