AB de Villiers: ಸತತ ಎರಡು ಸೋಲು; ನಿವೃತ್ತ ಆಟಗಾರನನ್ನು ಮತ್ತೆ ಕರೆಸಲಿದೆ ದಕ್ಷಿಣ ಆಫ್ರಿಕಾ?

South Africa, AB de Villiers: 2015ರ ವಿಶ್ವಕಪ್​ನಲ್ಲಿ ದ. ಆಫ್ರಿಕಾ ಸೆಮಿ ಫೈನಲ್ ಹಂತಕ್ಕೆ ತಲುಪಿತ್ತು ಎಂದರೆ ಅದಕ್ಕೆ ಪ್ರಮುಖ ಕಾರಣ ಎಬಿ ಡಿವಿಲಿಯರ್ಸ್ ಅವರ ಚಾಣಕ್ಯ ನಾಯಕತ್ವ ಹಾಗೂ ಬ್ಯಾಟಿಂಗ್ ಬಲ.

ಎಬಿ ಡಿವಿಲಿಯರ್ಸ್​​

ಎಬಿ ಡಿವಿಲಿಯರ್ಸ್​​

  • News18
  • Last Updated :
  • Share this:
ಬೆಂಗಳೂರು (ಜೂ. 03): ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ವಿರುದ್ಧ ಸೋಲುಂಡ ದಕ್ಷಿಣ ಆಫ್ರಿಕಾ, ನಿನ್ನೆ ನಡೆದ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ ಮತ್ತೆ ಕಳಪೆ ಆಟವಾಡಿ ಸೋಲಿನ ಹಾದಿ ಮುಂದುವರಿಸಿದೆ.

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಗೆಲುವಿನ ಒತ್ತಡದಲ್ಲಿ ಕಣಕ್ಕಿಳಿದಿತ್ತು, ಆದರೆ ಬಾಂಗ್ಲಾ ನೀಡಿದ್ದ ಬರೋಬ್ಬರಿ 331 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿತು.

ಪ್ರಮುಖ ಬ್ಯಾಟ್ಸ್​ಮನ್​ಗಳನ್ನು ಆರಂಭದಲ್ಲೇ ಕಳೆದುಕೊಂಡ ಹರಿಣಗಳಿಗೆ ನಾಯಕ ಡುಪ್ಲೆಸಿಸ್ ಆಸರೆಯಾದರಾದರು ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡು  309 ರನ್​ಗಳಿಗೆ ಶಕ್ತವಾಯಿತು.

ಇದನ್ನೂ ಓದಿ: 8 ವಿಕೆಟ್​ ಪಡೆದ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದನ್ನು ನಿಲ್ಲಿಸಲು ಕಾರಣವಾಗಿತ್ತು ಆ ಘಟನೆ!

ಬ್ಯಾಟಿಂಗ್- ಬೌಲಿಂಗ್ ಎರಡರಲ್ಲೂ ಕಳಪೆ ಪ್ರದರ್ಶನ ತೋರಿದ ಆಫ್ರಿಕಾ 2019 ವಿಶ್ವಕಪ್ ಅನ್ನು ಕೆಟ್ಟದಾಗಿ ಆರಂಭಿಸಿದೆ. ಅಲ್ಲದೆ ವಿಶ್ವಕಪ್ ಗೆಲ್ಲುವ ಕನಸು ಬಹುದೂರದ ಮಾತು ಎಂಬಂತಾಗಿದೆ. ಇದನ್ನೆಲ್ಲಾ ಮನಗಂಡು ದಕ್ಷಿಣ ಆಫ್ರಿಕಾ ನಿವೃತ್ತ ಆಟಗಾರ ಮಿ. 360 ಖ್ಯಾತಿಯ ಎಬಿ ಡಿವಿಲಿಯರ್ಸ್​​ ಮೊರೆಹೋಗಲಿದೆಯಾ ಎಂಬ ಪ್ರಶ್ನೆ ಸದ್ಯ ಕ್ರಿಕೆಟ್ ವಲಯದಲ್ಲಿ ಹುಟ್ಟುಕೊಂಡಿದೆ.

2015ರ ವಿಶ್ವಕಪ್​ನಲ್ಲಿ ದ. ಆಫ್ರಿಕಾ ಸೆಮಿ ಫೈನಲ್ ಹಂತಕ್ಕೆ ತಲುಪಿತ್ತು ಎಂದರೆ ಅದಕ್ಕೆ ಪ್ರಮುಖ ಕಾರಣ ಎಬಿ ಡಿವಿಲಿಯರ್ಸ್​. ತನ್ನ ಚಾಣಕ್ಯ ನಾಯಕತ್ವ ಹಾಗೂ ಬ್ಯಾಟಿಂಗ್ ಬಲದಿಂದ ಕಳೆದ ವಿಶ್ವಕಪ್​ನಲ್ಲಿ ಆಫ್ರಿಕಾ ತಂಡವನ್ನು ಎಬಿಡಿ ಸೆಮೀಸ್ ಹಂತದ ವರೆಗೆ ಕೊಂಡೊಯ್ಯಿದರು. ಆದರೆ, ಸೆಮೀಸ್​ನಲ್ಲಿ ಡಕ್ವರ್ತ್​ ಲೂಹಿಸ್ ನಿಯಮದಡಿಯಲ್ಲಿ ನ್ಯೂಜಿಲೆಂಡ್, ​ದಕ್ಷಿಣ ಆಫ್ರಿಕಾವನ್ನ ಮಣಿಸಿ ಫೈನಲ್​​ ಪ್ರವೇಶಿಸಿತು.

2019ರ ವಿಶ್ವಕಪ್​ನಲ್ಲಿ ಗೆಲ್ಲುವ ಫೇವರಿಟ್ ತಂಡಗಳ ಪೈಕಿ ದಕ್ಷಿಣ ಆಫ್ರಿಕಾ ತಂಡ ಕೂಡ ಒಂದು ಎಂದು ಹೇಳಲಾಗಿತ್ತು. ಆದರೆ, ಆರಂಭದಲ್ಲೇ ಸತತ ಎರಡು ಪಂದ್ಯ ಸೋತಿರುವ ಆಫ್ರಿಕಾ ದುರ್ಬಲ ತಂಡವಾಗಿ ಎದುರಾಳಿಗರಿಗೆ ತುತ್ತಾಗುತ್ತಿದೆ. ಹೀಗಾಗಿಯೆ ಅಭಿಮಾನಿಗಳು ಕೂಡ ಡಿವಿಲಿಯರ್ಸ್​​ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನೀಡಿರುವ ನಿವೃತ್ತಿಯನ್ನು ಹಿಂಪಡೆದು ದ. ಆಫ್ರಿಕಾ ಪರ ಮತ್ತೆ ಕ್ರಿಕೆಟ್ ಆಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಟ್ವಿಟ್ಟರ್​​ನಲ್ಲಿ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್​ಗೆ ಅಭಿಮಾನಿಗಳು ಎಬಿ ಡಿವಿಲಿಯರ್ಸ್​ ಅವರನ್ನು ಮತ್ತೆ ತಂಡಕ್ಕೆ ಸೇರಿಕೊಳ್ಳುವಂತೆ ಮನವಿ ಮಾಡಿ ಎಂದು ಟ್ವೀಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: #CricketWorldCup: ಟಿಕ್​​ಟಾಕ್​ನಲ್ಲಿ 'ವಿಶ್ವಕಪ್​​ ಚಾಲೆಂಜ್​' ವಿಡಿಯೋ ಹಂಚಿ, ಇಂಗ್ಲೆಂಡ್​​ನಲ್ಲಿ ಪಂದ್ಯ ವೀಕ್ಷಿಸಿ!

 



























First published: