ಡಿವಿಲಿಯರ್ಸ್​​ ನಿವೃತ್ತಿ ಹಿಂದಕ್ಕೆ ಪಡೆಯುವೆ ಹೇಳಿದಾಗ ಕಾಲ ಮಿಂಚಿಹೋಗಿತ್ತು: ಡುಪ್ಲೆಸಿಸ್

AB de Villiers: ಡಿವಿಲಿಯರ್ಸ್​ ತಂಡಕ್ಕೆ ಆಯ್ಕೆಯಾಗದೆ ಇದ್ದಿದ್ದು ನಮ್ಮಿಬ್ಬರ ಗೆಳೆತನಕ್ಕೆ ತೊಡಕು ಉಂಟು ಮಾಡಲಿಲ್ಲ. ನಾವಿಬ್ಬರು ಈಗಲೂ ಉತ್ತಮ ಸ್ನೇಹಿತರಾಗಿದ್ದೇವೆ- ಫಾಫ್ ಡುಪ್ಲೆಸಿಸ್

Vinay Bhat | news18
Updated:June 11, 2019, 6:06 PM IST
ಡಿವಿಲಿಯರ್ಸ್​​ ನಿವೃತ್ತಿ ಹಿಂದಕ್ಕೆ ಪಡೆಯುವೆ ಹೇಳಿದಾಗ ಕಾಲ ಮಿಂಚಿಹೋಗಿತ್ತು: ಡುಪ್ಲೆಸಿಸ್
ಎಬಿ ಡಿವಿಲಿಯರ್ಸ್​ ಹಾಗೂ ಫಾಫ್ ಡುಪ್ಲೆಸಿಸ್
  • News18
  • Last Updated: June 11, 2019, 6:06 PM IST
  • Share this:
ಬೆಂಗಳೂರು (ಜೂ. 11): 12ನೇ ವಿಶ್ವಕಪ್​ನಲ್ಲಿ ಅತ್ಯಂತ ಕೆಟ್ಟ ಆರಂಭ ಪಡೆದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮುಂದಿನ ಹಾದಿ ಮತ್ತಷ್ಟಿ ಕಠಿಣವಾಗಿದೆ. ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋಲುಂಡಿದ್ದು, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಕೇವಲ ಒಂದು ಅಂಕವನ್ನಷ್ಟೆ ಸಂಪಾದಿಸಿದೆ.

ಹರಿಣಗಳ ಈ ಕಳಪೆ ಆಟ ನೋಡಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ ತಂಡ ಸೇರಬೇಕೆಂಬ ಕೂಗು ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಲೇ ಇವೆ. ಅಲ್ಲದೆ ಎಬಿಡಿ ಅವರೇ ವಿಶ್ವಕಪ್ ತಂಡದಲ್ಲಿ ಸೇರಿಕೊಳ್ಳಲು ಬಯಸಿದ್ದರೂ ದಕ್ಷಿಣ ಆಫ್ರಿಕಾ ಮ್ಯಾನೇಜ್​ಮೆಂಟ್ ಇದಕ್ಕೆ ಅವಕಾಶ ನೀಡಲಿಲ್ಲ, ತಂಡದ ನಿಯಮದ ಪ್ರಕಾರ ಎಬಿಡಿಗೆ ಸ್ಥಾನ ಸಿಗಲಿಲ್ಲ.

ಈ ಬಗ್ಗೆ ಎಬಿಡಿಯ ಆಪ್ತ ಸ್ನೇಹಿತ, ದ. ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಮಾತನಾಡಿದ್ದು, ಡಿವಿಲಿಯರ್ಸ್​ ತಂಡಕ್ಕೆ ಮರು ಸೇರ್ಪೆಡೆಗೊಳ್ಳುವ ಬಗ್ಗೆ ನನಗೆ ಕರೆ ಮಾಡಿ ಮಾತನಾಡಿದ್ದರು ಎಂದು ಹೇಳಿದ್ದಾರೆ.

‘It was way too late’: Faf du Plessis on de Villiers' offer to play in World Cup
ಎಬಿ ಡಿವಿಲಿಯರ್ಸ್​


ಧವನ್ ಇಲ್ಲದೆ ಬಲಿಷ್ಠ ತಂಡದೆದುರು ಭಾರತ ಕಣಕ್ಕೆ; ಶಿಖರ್ ಜಾಗವನ್ನು ತುಂಬುವವರಾರು?

ಸ್ವಲ್ಪ ಸಮಯ ಮಾತನಾಡಿದೆಯಷ್ಟೆ. ನಾನು ಮತ್ತೆ ತಂಡ ಸೇರಿಕೊಳ್ಳಬೇಕೆಂದು ಡಿವಿಲಿಯರ್ಸ್​​ ಹೇಳಿದರು. ನಾನು ನಿವೃತ್ತಿ ಹಿಂದಕ್ಕೆ ತೆಗೆದುಕೊಂಡು ವಿಶ್ವಕಪ್​ನಲ್ಲಿ ಆಡಲು ಸಿದ್ಧನಾಗಿದ್ದೇನೆ ಎಂದರು'.

ಈಗ ತುಂಬಾ ವಿಳಂಬವಾಗಿದೆ. ಆದರೂ ಕೋಚ್ ಹಾಗೂ ಆಯ್ಕೆದಾರರ ಬಳಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದೆ. ಕೋಚ್ ಮತ್ತು ಆಯ್ಕೆ ಸಮಿತಿ ಜೊತೆ ಈ ಬಗ್ಗೆ ಮಾತನಾಡಿದಾಗ ಶೇ, 99.99 ರಷ್ಟು ಈ ಸಂದರ್ಭದಲ್ಲಿ ತಂಡವನ್ನು ಬದಲಿಸುವುದು ಕಷ್ಟ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು ಎಂದು ಡುಪ್ಲೆಸಿಸ್ ಹೇಳಿದ್ದಾರೆ.ಇನ್ನು ಡಿವಿಲಿಯರ್ಸ್​ ತಂಡಕ್ಕೆ ಆಯ್ಕೆಯಾಗದೆ ಇದ್ದಿದ್ದು ನಮ್ಮಿಬ್ಬರ ಗೆಳೆತನಕ್ಕೆ ತೊಡಕು ಉಂಟು ಮಾಡಲಿಲ್ಲ. ನಾವಿಬ್ಬರು ಈಗಲೂ ಉತ್ತಮ ಸ್ನೇಹಿತರಾಗಿದ್ದೇವೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

Shikhar Dhawan: ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ; ವಿಶ್ವಕಪ್​ನಿಂದ ಧವನ್ ಮೂರು ವಾರ ಹೊರಕ್ಕೆ!

ಡಿವಿಲಿಯರ್ಸ್​ ಅವರನ್ನ ಯಾಕೆ ಆಯ್ಕೆ ಮಾಡಲಿಲ್ಲ ಎಂಬ ಬಗ್ಗೆ ಈಗಾಗಲೇ ದ. ಆಫ್ರಿಕಾ ಮ್ಯಾನೇಜ್​ಮೆಂಟ್ ಸ್ಪಷ್ಟ ಪಡಿಸಿದೆ. ದ. ಆಫ್ರಿಕಾ ಆಯ್ಕೆದಾರರ ನಿಯಮದ ಪ್ರಕಾರ, ವಿಶ್ವಕಪ್​​ಗೆ ಆಯ್ಕೆ ಆಗುವ ಆಟಗಾರರು ಕಳೆದ ಕೆಲ ತಿಂಗಳುಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್ ಆಡಿರಬೇಕು. ಅಥವಾ ಆಫ್ರಿಕಾದ ಕೌಂಟಿ ಕ್ರಿಕೆಟ್​ನಲ್ಲಿ ಪಾಲ್ಗೊಂಡಿರಬೇಕು. ಆದರೆ ಎಬಿಡಿ ಯಾವುದೇ ಅಂತರಾಷ್ಟ್ರೀಯ ಅಥವಾ ಕೌಂಟಿ ಕ್ರಿಕೆಟ್​​ನಲ್ಲಿ ಆಡಲಿಲ್ಲ. ಹೀಗಾಗಿ ಡಿವಿಲಿಯರ್ಸ್​ ಅವರು ವಿಶ್ವಕಪ್​​ನಲ್ಲಿ ಆಡುತ್ತೇನೆ ಎಂದರೂ, ಮಂಡಳಿ ರಿಜೆಕ್ಟ್​ ಮಾಡಿದೆ.

First published:June 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ