ಮುಂದಿನ ಒಂದು ವರ್ಷ ಭಾರತದಲ್ಲಿ ಕ್ರಿಕೆಟ್ ಹಬ್ಬ..!

ಹೊಸ ಅರ್ಹ ತಂಡಗಳಾಗಿ ಪಪುವಾ ನ್ಯೂಗಿನಿ, ನಮೀಬಿಯಾ, ನೆದರ್ಲ್ಯಾಂಡ್ಸ್, ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಸೇರಿದಂತೆ ಒಟ್ಟು 16 ಟೀಮ್​ಗಳು ಪಾಲ್ಗೊಳ್ಳಲಿವೆ.

Team India

Team India

 • Share this:
  ಭಾರತೀಯ ಕ್ರಿಕೆಟ್ ಮಂಡಳಿ ಕೊರೋನಾ ಭೀತಿ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದೀಗ ಭಾರತ ಬ್ಯಾಕ್ ಟು ಬ್ಯಾಕ್ ಸರಣಿಯಾಡಲಿದೆ. ಈಗಾಗಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದೆ. ನವೆಂಬರ್ ಅಂತ್ಯದಲ್ಲಿ ಶುರುವಾಗಲಿರುವ ಈ ಸರಣಿ ಜನವರಿಯಲ್ಲಿ ಅಂತ್ಯವಾಗಲಿದೆ. ಇದರ ಬಳಿಕ ಭಾರತ ಹಾಗೂ ಇಂಗ್ಲೆಂಡ್ ನಡುವೆ ಟೆಸ್ಟ್​ ಸರಣಿ ನಡೆಯುವ ಸಾಧ್ಯತೆಯಿದೆ. ಇದು ಮಾರ್ಚ್​ ವೇಳೆಗೆ ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೇ ಮತ್ತೆ ಐಪಿಎಲ್ ಶುರು.

  ಹೌದು, ಈಗಾಗಲೇ ಬಿಸಿಸಿಐ ಮಾರ್ಚ್-ಮೇ ನಡುವೆ ಐಪಿಎಲ್ 14ನೇ ಸೀಸನ್ ಆಯೋಜಿಸಲು ತುದಿಗಾಲಲ್ಲಿ ನಿಂತಿದೆ. ಸದ್ಯ ಯೋಜನೆಯಂತೆ ಟೂರ್ನಿ ನಡೆಸಬೇಕಾದ ಅನಿವಾರ್ಯತೆ ಕೂಡ ಬಿಸಿಸಿಐ ಮುಂದಿದೆ. ಏಕೆಂದರೆ 2021 ರ ಟಿ20 ವಿಶ್ವಕಪ್ ಕೂಡ ಭಾರತದಲ್ಲೇ ನಡೆಯಬೇಕಿದೆ. ಮುಂದಿನ ವರ್ಷಕ್ಕೆ ನಿರ್ಧಾರವಾಗಿರುವ ಟಿ20 ವಿಶ್ವಕಪ್ ಪೂರ್ವ ಯೋಜನೆಯಂತೆಯೇ ಭಾರತದಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

  ಮುಂದಿನ ವರ್ಷ ಅಕ್ಟೋಬರ್-ನವೆಂಬರ್ ನಡುವೆ ಟಿ20 ವಿಶ್ವಕಪ್ ನಿಗದಿಯಾಗಿದ್ದು, ಹೀಗಾಗಿ ಐಪಿಎಲ್ ಬೆನ್ನಲ್ಲೇ ಮತ್ತೆ ಚುಟುಕು ಕ್ರಿಕೆಟ್ ಆಸ್ವಾದಿಸುವ ಅವಕಾಶ ಕ್ರಿಕೆಟ್ ಪ್ರೇಮಿಗಳಿಗೆ ಒದಗಿ ಬರಲಿದೆ. ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೀಮ್ ಇಂಡಿಯಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಹೋರಾಟ ನಡೆಸಲಿದೆ. ಇದರ ಜೊತೆಗೆ ಹೊಸ ಅರ್ಹ ತಂಡಗಳಾಗಿ ಪಪುವಾ ನ್ಯೂಗಿನಿ, ನಮೀಬಿಯಾ, ನೆದರ್ಲ್ಯಾಂಡ್ಸ್, ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಸೇರಿದಂತೆ ಒಟ್ಟು 16 ಟೀಮ್​ಗಳು ಪಾಲ್ಗೊಳ್ಳಲಿವೆ.

  ಒಟ್ಟಿನಲ್ಲಿ ಟೀಮ್ ಇಂಡಿಯಾ ಸರಣಿ, ಇಂಡಿಯನ್ ಪ್ರೀಮಿಯರ್ ಲೀಗ್, ಟಿ20 ವಿಶ್ವಕಪ್ ಸೇರಿದಂತೆ 2021 ವರ್ಷ ಭಾರತೀಯರಿಗೆ ಸಂಪೂರ್ಣ ಕ್ರಿಕೆಟ್​ನ ರಸದೌತಣ ನೀಡಲಿರುವುದಂತು ಪಕ್ಕಾ.  ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
  Published by:zahir
  First published: