T20 World Cup: ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಭವಿಷ್ಯ ಇಂದು ನಿರ್ಧಾರ
ಜಗತ್ತನ್ನೇ ವ್ಯಾಪಿಸಿರುವ ಕೋವಿಡ್ ದಿಂದಾಗಿ ಐಪಿಎಲ್ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗೆಯೇ 2020ರ ಕೊನೆಯಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯುವ ಟಿ-20 ವಿಶ್ವಕಪ್ ಕೂಡ ಅನಿಶ್ಚಿತತೆಯಲ್ಲಿದೆ.
news18-kannada Updated:June 10, 2020, 9:48 AM IST

ಟಿ-20 ವಿಶ್ವಕಪ್.
- News18 Kannada
- Last Updated: June 10, 2020, 9:48 AM IST
ಕೊರೋನಾ ವೈರಸ್ ಹಿನ್ನಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಸ್ಥಬ್ದವಾಗಿರುವ ಈ ಸಂದರ್ಭದ ಬಹುನಿರೀಕ್ಷಿತ ಟಿ-20 ವಿಶ್ವಕಪ್ ಕುರಿತು ಮಹತ್ವದ ಮಾಹಿತಿ ಇಂದು ಹೊರಬೀಳಲಿದೆ. ಟೆಲಿ-ಕಾನ್ಫರೆನ್ಸ್ ನಲ್ಲಿ ಸಭೆ ನಡೆಯಲಿದ್ದು, ಈ ಬಗ್ಗೆ ಚರ್ಚೆ ನಡೆಸಿ ಐಸಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಜೊತೆಗೆ 2020ರ ಐಪಿಎಲ್ ಕೂಟದ ಭವಿಷ್ಯ ಕೂಡ ಇಂದೇ ನಿರ್ಧಾರವಾಗಲಿದೆ. ಐಸಿಸಿ ನಡೆಸಲಿರುವ ಟೆಲಿ ಕಾನ್ಫರೆನ್ಸ್ನಲ್ಲಿ ಕ್ರಿಕೆಟ್ ಅಭಿಮಾನಿಗಳ ಕಾತರ, ನಿರೀಕ್ಷೆಗಳಿಗೆಲ್ಲ ಬಹುತೇಕ ತೆರೆ ಬೀಳಲಿದೆ. ಕೊರೋನಾ ಎಫೆಕ್ಟ್; ಐಸಿಸಿಯಿಂದ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆ
ಜಗತ್ತನ್ನೇ ವ್ಯಾಪಿಸಿರುವ ಕೋವಿಡ್ ದಿಂದಾಗಿ ಐಪಿಎಲ್ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗೆಯೇ 2020ರ ಕೊನೆಯಲ್ಲಿ ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆಯುವ ಟಿ-20 ವಿಶ್ವಕಪ್ ಕೂಡ ಅನಿಶ್ಚಿತತೆಯಲ್ಲಿದೆ.
ಈಗಿನ ಲೆಕ್ಕಾಚಾರವೊಂದರ ಪ್ರಕಾರ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯನ್ನು 2022ಕ್ಕೆ ಮುಂದೂಡಲ್ಪಡಲಿದೆ. ಮುಂದಿನ ವರ್ಷ ಭಾರತ ಟಿ-20 ವಿಶ್ವಕಪ್ಗೆ ಆತಿಥ್ಯ ವಹಿಸಲಿದೆ ಎನ್ನಲಾಗಿದೆ. ಇಲ್ಲಿ ಲಭಿಸಿದ ಅವಕಾಶದಲ್ಲಿ ಐಪಿಎಲ್ ಪಂದ್ಯಾ ವಳಿಯನ್ನು ಆಡಿಸುವುದು ಬಿಸಿಸಿಐ ಯೋಜನೆಯಾಗಿದೆ.
ಇತ್ತೀಚೆಗಷ್ಟೆ ಕ್ರಿಸ್ ಟೆಟ್ಲಿ ನೇತೃತ್ವದ ಐಸಿಸಿಯ ಈವೆಂಟ್ಸ್ ಕಮಿಟಿ ಬಹು ಆಯ್ಕೆಗಳನ್ನು ಪ್ರಸ್ತುತಪಡಿಸಬಹುದು ಎಂದು ಪಿಟಿಐ ವರದಿ ಮಾಡಿತ್ತು. ಮತ್ತು ಸದಸ್ಯರು ಗಂಭೀರವಾಗಿ ಆಲೋಚಿಸುವ ಆಯ್ಕೆಗಳಲ್ಲಿ ಒಂದು ಪಂದ್ಯಾವಳಿಯನ್ನು ಅಕ್ಟೋಬರ್-ನವೆಂಬರ್, 2022 ಕ್ಕೆ ಸ್ಥಳಾಂತರಿಸುತ್ತಿದ್ದರೆ, ಭಾರತವು ತನ್ನ ಆವೃತ್ತಿಯನ್ನು 2021 ಆಯೋಜಿಸುತ್ತದೆ ಎಂದು ವರದಿ ಮಾಡಲಾಗಿತ್ತು.
Dhoni: ಧೋನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಕನ್ನಡಿಗ ಕಾರಣ ಎಂದರೆ ನಂಬಲೇ ಬೇಕು!ಇನ್ನೂ ಇಂದಿನ ಸಭೆಯಲ್ಲಿ ಐಸಿಸಿ ನೂತನ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ, ಭವಿಷ್ಯದ ಕಾರ್ಯಕ್ರಮಗಳ ವೇಳಾಪಟ್ಟಿ, ಬಿಸಿಸಿಐ ಜೊತೆಗಿನ ಹಣಕಾಸಿನ ವ್ಯವಹಾರ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಸದ್ಯ ಐಸಿಸಿ ಅಧ್ಯಕ್ಷರಾಗಿ ಶಶಾಂಕ್ ಮನೋಹರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಜೊತೆಗೆ 2020ರ ಐಪಿಎಲ್ ಕೂಟದ ಭವಿಷ್ಯ ಕೂಡ ಇಂದೇ ನಿರ್ಧಾರವಾಗಲಿದೆ. ಐಸಿಸಿ ನಡೆಸಲಿರುವ ಟೆಲಿ ಕಾನ್ಫರೆನ್ಸ್ನಲ್ಲಿ ಕ್ರಿಕೆಟ್ ಅಭಿಮಾನಿಗಳ ಕಾತರ, ನಿರೀಕ್ಷೆಗಳಿಗೆಲ್ಲ ಬಹುತೇಕ ತೆರೆ ಬೀಳಲಿದೆ.