• Home
 • »
 • News
 • »
 • sports
 • »
 • ಐಸಿಸಿಯ ಮೊದಲ ಮಹಿಳಾ ಮ್ಯಾಚ್ ರೆಫ್ರಿಯಾಗಿ ನೇಮಕಗೊಂಡ ಭಾರತದ ಜಿಎಸ್ ಲಕ್ಷ್ಮೀ

ಐಸಿಸಿಯ ಮೊದಲ ಮಹಿಳಾ ಮ್ಯಾಚ್ ರೆಫ್ರಿಯಾಗಿ ನೇಮಕಗೊಂಡ ಭಾರತದ ಜಿಎಸ್ ಲಕ್ಷ್ಮೀ

ಜಿಎಸ್ ಲಕ್ಷ್ಮೀ (ಐಸಿಸಿಯ ಮೊದಲ ಮಹಿಳಾ ಮ್ಯಾಚ್ ರೆಫ್ರಿ)

ಜಿಎಸ್ ಲಕ್ಷ್ಮೀ (ಐಸಿಸಿಯ ಮೊದಲ ಮಹಿಳಾ ಮ್ಯಾಚ್ ರೆಫ್ರಿ)

ಲಕ್ಷ್ಮೀ ಅವರು 2008-09ರ ಸಾಲಿನಲ್ಲಿ ಮೊದಲ ಬಾರಿಗೆ ದೇಶೀಯ ಮಹಿಳಾ ಕ್ರಿಕೆಟ್‌ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮೂರು ಮಹಿಳಾ ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಮೇಲ್ವಿಚಾರಣೆಯಾಗಿ ಕೆಲಸ ಮಾಡಿದ್ದರು.

 • News18
 • Last Updated :
 • Share this:

  ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಜಿಎಸ್ ಲಕ್ಷ್ಮೀ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಇಂಟರ್ ನ್ಯಾಷನಲ್ ಪ್ಯಾನಲ್ ಆಫ್ ಮ್ಯಾಚ್ ರೆಫ್ರೀಗೆ ಭಾರತದ ಪ್ರಪ್ರಥಮ ಮಹಿಳೆಯಾಗಿ ನೇಮಕ ಮಾಡಿದೆ.


  ಲಕ್ಷ್ಮೀ ಅವರು 2008-09ರ ಸಾಲಿನಲ್ಲಿ ಮೊದಲ ಬಾರಿಗೆ ದೇಶೀಯ ಮಹಿಳಾ ಕ್ರಿಕೆಟ್‌ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮೂರು ಮಹಿಳಾ ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಮೇಲ್ವಿಚಾರಣೆಯಾಗಿ ಕೆಲಸ ಮಾಡಿದ್ದರು.


  ಐಸಿಸಿಯ ಅಂತರಾಷ್ಟ್ರೀಯ ಪ್ಯಾನಲ್‌ಗೆ ಆಯ್ಕೆಯಾಗಿರುವುದು ದೊಡ್ಡ ಗೌರವ ಎಂದಿರುವ ಲಕ್ಷ್ಮೀ, ನಾನು ಕ್ರಿಕೆಟರ್‌ ಆಗಿ ಹಾಗೂ ಮ್ಯಾಚ್‌ ರೆಫ್ರಿಯಾಗಿ ವೃತ್ತಿ ಜೀವನ ಹೊಂದಿದ್ದೇನೆ.  ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಬಳಸಿಕೊಂಡು ಉತ್ತಮವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಜೊತೆಗೆ ಕಾತುರಳಾಗಿದ್ದೇನೆ ಎಂದು ಹೇಳಿದ್ದಾರೆ.


  ಇದನ್ನೂ ಓದಿ: 'ವಿಶ್ವಕಪ್​​ಗೆ ಟೀಂ ಇಂಡಿಯಾ ಎಲ್ಲಾ ವಿಭಾಗದಿಂದ ಸಜ್ಜಾಗಿದೆ': ಕೋಚ್ ರವಿ ಶಾಸ್ತ್ರಿ


  ಇನ್ನು ಐಸಿಸಿ ಹಿರಿಯ ನಿರ್ವಾಹಕರಾದ ಏಡ್ರಿಯನ್‌ ಗ್ರಿಫಿತ್‌ ಲಕ್ಷ್ಮೀ ಅವರ ಬಗ್ಗೆ ಮಾತನಾಡಿದ್ದು, 'ಲಕ್ಷ್ಮೀ ಅವರನ್ನು ನಮ್ಮ ಪ್ಯಾನಲ್‌ಗೆ ಸ್ವಾಗತ ಮಾಡಿಕೊಂಡಿದ್ದೇವೆ. ಮಹಿಳಾ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಾವು ಮಹತ್ವದ ಹೆಜ್ಜೆಯಿಟ್ಟಿದ್ದೇವೆ. ಲಕ್ಷ್ಮೀ ಅನೇಕ ಸಾಧನೆಯನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳಾ ಅಧಿಕಾರಿಗಳು ಸೇರಲಿದ್ದಾರೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.


  ಇದನ್ನೂ ಓದಿ: 'ನನಗೆ ಅಶ್ಲೀಲ ಕಮೆಂಟ್​ಗಳು ಬರುತ್ತಿವೆ, ನೊಂದಿದ್ದೇನೆ' ಎಂದ ವೈರಲ್ ಆರ್​ಸಿಬಿ ಫ್ಯಾನ್ ಗರ್ಲ್​​


  ಇತ್ತೀಚೆಗಷ್ಟೆ ಪುರುಷರ ಅಂತರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಮಹಿಳಾ ಅಂಪೈರ್ ಆಗಿ ಕ್ಲೈರ್​ ಪೊಲೊಸಾಕ್​ ಕಾರ್ಯನಿರ್ವಹಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಈ ಮೂಲಕ ಪುರುಷರ ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ಮಹಿಳಾ ಅಂಪೈರ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಆಸ್ಟ್ರೇಲಿಯಾದ 31 ವರ್ಷದ ಕ್ಲೈರ್​ ವಿಶ್ವ ಕ್ರಿಕೆಟ್​ ಭಾಗವಾಗಿ ನಡೆದ 2ನೇ ಡಿವಿಷನ್​ನ ನಮೀಬಿಯಾ ಹಾಗೂ ಓಮನ್​ ನಡುವಿನ ಫೈನಲ್​ ಪಂದ್ಯದಲ್ಲಿ ಅಂಪೈರ್​ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಐಸಿಸಿ ಮಹಿಳಾ ವಿಶ್ವಕಪ್​ ಟೂರ್ನಿಯ 4 ಪಂದ್ಯಗಳಲ್ಲಿ ಅಂಪೈರ್​ ಜವಾಬ್ದಾರಿ ನಿಭಾಯಿಸಿದ್ದರು

  Published by:Vinay Bhat
  First published: