Harshal patel: ಮತ್ತೆ IPL ನಲ್ಲಿ ಬೆಂಗಳೂರು ಪರ ಆಡಬೇಕು ಎಂದ ಸ್ಟಾರ್ ಬೌಲರ್

Cricket: ರಿಟೈನ್ ಮೊತ್ತದ ನಿರ್ವಹಣೆಯಿಂದ ಬೆಂಗಳೂರು ತಂಡ ನನ್ನನ್ನು ಖರೀದಿ ಮಾಡಿಲ್ಲ.. ಆದರೆ ಐಪಿಎಲ್ ಮೆಗಾ ಹರಾಜಿನಲ್ಲಿ ಮತ್ತೆ ನನ್ನನ್ನು ಬೆಂಗಳೂರು ತಂಡ ಖರೀದಿ ಮಾಡುವ ನಿರೀಕ್ಷೆ ಇದೆ ಎಂದು ಹರ್ಷಲ್ ಪಟೇಲ್ ಭರವಸೆ ವ್ಯಕ್ತಪಡಿಸಿದ್ದಾರೆ.

ಹರ್ಷಲ್ ಪಟೇಲ್

ಹರ್ಷಲ್ ಪಟೇಲ್

  • Share this:
    ಐಪಿಎಲ್(IPL) ಸೀಸನ್ 15ರ ಮೆಗಾ ಹರಾಜಿಗೂ(Mega Action) ಮುನ್ನಾ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡದ ಆಟಗಾರರನ್ನು(Players) ರಿಟೈನ್ ಮಾಡಿಕೊಳ್ಳುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದರಲ್ಲೂ ಯುಎಯಿಯಲ್ಲಿ ನಡೆದೆ 14ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗೇಮ್ ಚೇಂಜರ್ ಆಗಿ ಕಾಣಿಸಿಕೊಂಡಿದ್ದ ಹರ್ಷಲ್ ಪಟೇಲ್(Harshal patel) ಅವರನ್ನು ಆರ್ಸಿಬಿ(RCB) ಪಕ್ಕ ರಿಟೈನ್ ಮಾಡಿಕೊಳ್ಳುತ್ತೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಆದರೆ ಆಶ್ಚರ್ಯ ಅನಿಸುವಂತೆ ಹರ್ಷಲ್ ಪಟೇಲ್ ಅವರನ್ನು ಕೈಬಿಟ್ಟು ವಿರಾಟ್ ಕೊಹ್ಲಿ ಮ್ಯಾಕ್ಸ್ವೆಲ್ ಹಾಗೂ ಮಹಮ್ಮದ್ ಸಿರಾಜ್ ಅವರನ್ನು ಬೆಂಗಳೂರು ತಂಡದ ರಿಟೈನ್ ಮಾಡಿಕೊಂಡಿತ್ತು. ಹೀಗಾಗಿ ಹರ್ಷಲ್ ಪಟೇಲ್ ಅವರನ್ನು ರಿಟೈನ್ ಯಾಕೆ ಮಾಡಿಕೊಂಡಿಲ್ಲ ಎನ್ನುವ ಪ್ರಶ್ನೆ ಇದುವರೆಗೂ ಅಭಿಮಾನಿಗಳನ್ನ ಕಾಡುತ್ತಿತ್ತು.. ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಹ ಹರ್ಷಲ್ ಪಟೇಲ್ ಅವರೇ ಉತ್ತರ ನೀಡಿದ್ದಾರೆ..

    ರಿಟೈನ್ ಮೊತ್ತದ ನಿರ್ವಹಣೆಯಿಂದ ಹೊರಗುಳಿದ ಹರ್ಷಲ್

    ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ದೇವದತ್ ಪಡಿಕಲ್ ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಮಹಮ್ಮದ್ ಸಿರಾಜ್ ರಂತಹ ಸ್ಟಾರ್ ಆಟಗಾರರು ಇದ್ದರು.. ಹೀಗಾಗಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ತಲೆನೋವಾಗಿತ್ತು.. ಆದರೆ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮೊಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಅರಸಿಕೊಂಡು ಉಳಿದ ಆಟಗಾರರನ್ನೂ ತಂಡದಿಂದ ರಿಲೀಸ್ ಮಾಡಿತ್ತು.

    ಹೀಗೆ ಐಪಿಎಲ್ ನಲ್ಲಿ ಅಧಿಕ ವಿಕೆಟ್ ಪಡೆದುಕೊಂಡು ಹಲವು ಪಂದ್ಯಗಳಲ್ಲಿ ಬೆಂಗಳೂರು ತಂಡವನ್ನು ಗೆಲ್ಲಿಸಿದ್ದರು. ಪಟೇಲ್ ಅವರನ್ನು ಕೈಬಿಟ್ಟಿದ್ದು ಯಾಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು.. ಈಗ ಇದಕ್ಕೆ ಉತ್ತರ ನೀಡಿರುವ ಹರ್ಷಲ್ ಪಟೇಲ್ ರಿಟೈನ್ ಮೊತ್ತದ ನಿರ್ವಹಣೆಯಿಂದ ಬೆಂಗಳೂರು ತಂಡ ನನ್ನನ್ನು ಖರೀದಿ ಮಾಡಿಲ್ಲ.. ಆದರೆ ಐಪಿಎಲ್ ಮೆಗಾ ಹರಾಜಿನಲ್ಲಿ ಮತ್ತೆ ನನ್ನನ್ನು ಬೆಂಗಳೂರು ತಂಡ ಖರೀದಿ ಮಾಡುವ ನಿರೀಕ್ಷೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಅಬ್ಬಾ..! ಒಂದು Instagram Postನಿಂದ ಎಷ್ಟೊಂದು ಹಣ ಸಂಪಾದನೆ ಮಾಡ್ತಾರೆ ಗೊತ್ತಾ...?

    ಐಪಿಎಲ್ ರಿಟೈನ್ ನಿಯಮದ ಪ್ರಕಾರ ಆಟಗಾರರನ್ನು ಉಳಿಸಿಕೊಳ್ಳಲು ಮೊತ್ತ ನಿಗದಿ ಮಾಡಲಾಗಿತ್ತು. ಅದರಂತೆ ಒಟ್ಟು 90 ಕೋಟಿ ಮೊತ್ತದಿಂದ ಆಟಗಾರರ ರಿಟೈನ್​ಗಾಗಿ 42 ಕೋಟಿ ನೀಡಲಾಗಿತ್ತು. ಇಲ್ಲಿ ಒಂದು ತಂಡವು ನಾಲ್ವರನ್ನು ಉಳಿಸಿಕೊಳ್ಳಲು ಬಯಸಿದರೆ 42 ಕೋಟಿ ರೂ. ವ್ಯಯಿಸಬೇಕಿತ್ತು. ಒಂದು ವೇಳೆ ಮೂವರನ್ನು ಮಾತ್ರ ಉಳಿಸುವುದಾದರೆ 33 ಕೋಟಿ ರೂ. ನೀಡಬೇಕಿತ್ತು. ಇನ್ನು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ. ರೂ ನೀಡಬೇಕು. ಒಂದು ವೇಳೆ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ. ರೂ ನೀಡಬೇಕಿತ್ತು.

    ಅದರಂತೆ 4 ಆಟಗಾರರನ್ನು ಉಳಿಸಿಕೊಂಡರೆ ಮೊದಲ ಆಟಗಾರನಿಗೆ 16 ಕೋಟಿ ರೂ., 2ನೇ ಆಟಗಾರನಿಗೆ 12 ಕೋಟಿ ರೂ., 3ನೇ ಆಟಗಾರನಿಗೆ 8 ಕೋಟಿ ರೂ., 4ನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕಿತ್ತು. ಇನ್ನು 3 ಆಟಗಾರರನ್ನು ಉಳಿಸಿಕೊಂಡರೆ ಮೊದಲ ಆಟಗಾರನಿಗೆ 15 ಕೋಟಿ ರೂ., 2ನೇ ಆಟಗಾರನಿಗೆ 11 ಕೋಟಿ ರೂ., 3ನೇ ಆಟಗಾರನಿಗೆ 7 ಕೋಟಿ ರೂ. ನೀಡಬೇಕಿತ್ತು. ಇಲ್ಲಿ ಆರ್​ಸಿಬಿ 3 ಆಟಗಾರರನ್ನು ಉಳಿಸಿ 33 ಕೋಟಿ ವ್ಯಯಿಸಿದೆ. ಇನ್ನು ನಾಲ್ವರನ್ನು ಉಳಿಸಲು ಮುಂದಾಗಿದ್ರೆ 42 ಕೋಟಿ ನೀಡಬೇಕಾಗಿತ್ತು. ಇದರಿಂದಾಗಿ ಆರ್​ಸಿಬಿ ರಿಟೈನ್ ಮಾಡಿಕೊಂಡಿಲ್ಲ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.

    ಮತ್ತೆ ಬೆಂಗಳೂರು ಪರ ಆಡಲು ಒಲವು ತೋರಿದ ಹರ್ಷಲ್

    ನನಗೆ ಈಗಲೂ ಆರ್ ಸಿಬಿ ಪರ ಆಡಬೇಕೆಂಬ ಆಸೆ ಇದೆ, ಏಕೆಂದರೆ ಕಳೆದ ವರ್ಷ ನನಗೆ ಆ ತಂಡವು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿತ್ತು ಅದರಿಂದಲೇ ಉತ್ತಮ ಪ್ರದರ್ಶನ ತೋರಲು ಸಾಧ್ಯ ವಾಯಿತು ಮತ್ತು ರಾಷ್ಟ್ರೀಯ ತಂಡಕ್ಕೆ ಮರಳಲು ಉತ್ತಮ ವೇದಿಕೆ ಆಯಿತು ಎಂದು ಹೇಳಿದರು.ಅಲ್ಲದೆ ಆ ತಂಡದಲ್ಲಿದ್ದ ಕೊಹ್ಲಿ, ಮ್ಯಾಕ್ಸ್ ವೆಲ್, ಎಬಿಡಿಯಂತಹ ಶ್ರೇಷ್ಠ ಆಟಗಾರರಿಂದ ಕೆಲವು ಟಿಪ್ಸ್ ಪಡೆದಿದ್ದು ಅದು ನನ್ನ ಕ್ರಿಕೆಟ್ ಜೀವನಕ್ಕೆ ನೆರವಾಗಲಿದೆ ಎಂದು ಹೇಳಿದರು

    ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ ತಿಂಗಳು ಐಪಿಎಲ್ ಹರಾಜು? ದಿನಾಂಕ ಮತ್ತಿತರ ಮಾಹಿತಿ

    32 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ ಹರ್ಷಲ್

    ಮಧ್ಯಮ ವೇಗದ ಬೌಲರ್‌ ಹರ್ಷಲ್ ಪಟೇಲ್ 2021ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳನ್ನಾಡಿ 32 ವಿಕೆಟ್ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಆರ್‌ಸಿಬಿ (RCB) ಹಲವು ಪಂದ್ಯಗಳ ಗೆಲುವಿನಲ್ಲಿ ಹರ್ಷಲ್ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳನ್ನಾಡಿರುವ ಹರ್ಷಲ್ ಪಟೇಲ್ 32 ವಿಕೆಟ್ ಪಡೆದುಕೊಳ್ಳುವುದರ ಮೂಲಕ ಪರ್ಪಲ್ ಕ್ಯಾಪ್ ಪ್ರಶಸ್ತಿಗೆ ಭಾಜನರಾಗಿದ್ದಲ್ಲದೆ ಗೇಮ್ ಚೇಂಜರ್ ಆಫ್ ದಿ ಸೀಸನ್ ಮತ್ತು ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಗಳನ್ನೂ ಸಹ ಹರ್ಷಲ್ ಪಟೇಲ್ ಪಡೆದುಕೊಂಡಿದ್ದಾರೆ
    Published by:ranjumbkgowda1 ranjumbkgowda1
    First published: