ಐಪಿಎಲ್​​ನಲ್ಲಿ ಡಿವಿಲಿಯರ್ಸ್​​ ವಿಕೆಟ್ ಪಡೆಯುವುದೆ ನನ್ನ ಗುರಿ ಎಂದ ಬೆಂಗಳೂರಿನ ಆಟಗಾರ

ಐಪಿಎಲ್ 2019: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​​ಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಆರ್​ಸಿಬಿ ತಂಡ ಮೊದಲ ಪಂದ್ಯದಲ್ಲಿ ಸೆಣೆಸಾಟ ನಡೆಸಲಿದೆ. ಹೀಗಿರುವಾಗ ಕರ್ನಾಟಕದ ಬೌಲರ್ ಐಪಿಎಲ್​​ನಲ್ಲಿ ಎಬಿ ಡಿವಿಲಿಯರ್ಸ್​​ ವಿಕೆಟ್ ಪಡೆಯುವುದು ನನ್ನ ಗುರಿ ಎಂದು ಹೇಳಿದ್ದಾರೆ.

Vinay Bhat | news18
Updated:March 22, 2019, 6:46 PM IST
ಐಪಿಎಲ್​​ನಲ್ಲಿ ಡಿವಿಲಿಯರ್ಸ್​​ ವಿಕೆಟ್ ಪಡೆಯುವುದೆ ನನ್ನ ಗುರಿ ಎಂದ ಬೆಂಗಳೂರಿನ ಆಟಗಾರ
ಎಬಿ ಡಿವಿಲಿಯರ್ಸ್​​
  • News18
  • Last Updated: March 22, 2019, 6:46 PM IST
  • Share this:
ಬೆಂಗಳೂರು: ಐಪಿಎಲ್ 12ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​​ ತಂಡದ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯದ ವೀಕ್ಷಣೆಗೆ ಇಡೀ ದೇಶವೆ ಕಾತುರದಿಂದ ಕಾದು ಕುಳಿತಿದೆ. ಹೀಗಿರುವಾಗ ಕರ್ನಾಟಕದ ಬೌಲರ್ ಐಪಿಎಲ್​​ನಲ್ಲಿ ಎಬಿ ಡಿವಿಲಿಯರ್ಸ್​​ ವಿಕೆಟ್ ಪಡೆಯುವುದು ನನಗಿಷ್ಟ ಎಂದು ಹೇಳಿದ್ದಾರೆ.

ಬೆಂಗಳೂರು ಮೂಲದ ಕೃಷ್ಣಪ್ಪ ಗೌತಮ್ ಐಪಿಎಲ್​​ನಲ್ಲಿ ರಾಜಸ್ತಾನ್ ರಾಯಲ್ಸ್​ ತಂಡದ ಪರವಾಗಿ ಆಡುತ್ತಿದ್ದು, 'ಎಬಿ ಡಿವಿಲಿಯರ್ಸ್​ ವಿಕೆಟ್ ಪಡೆಯುವುದು ನನ್ನ ಗುರಿ, ಅವರು 360 ಡಿಗ್ರಿಯಲ್ಲಿ ಬ್ಯಾಟ್ ಬೀಸುವ ಆಟಗಾರ. ಇಂತಹ ಆಟಗಾರನಿಗೆ ಬಾಲ್ ಮಾಡಲು ನಾನು ಕಾತುರನಾಗಿದ್ದೇನೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: VIVO IPL 2019: ಐಪಿಎಲ್​​ನಲ್ಲಿ ಈವರೆಗೆ ದಾಖಲಾದ ದಾಖಲೆಗಳು ಏನೆಲ್ಲಾ ಗೊತ್ತಾ..?

ಇನ್ನು 'ನನಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕೆಂದು ಆಸೆ. ಆದರೆ, ಅದು ನಾಯಕನಿಗೆ ಬಿಟ್ಟ ವಿಚಾರ. ಕೊನೆಯ ಸೀಸನ್​​ನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಕ್ಕಿತ್ತು. ಆದರೆ, ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಲ್ಲಿ ವಿಫಲನಾದೆ. ನನಗೆ ಮತ್ತೊಮ್ಮೆ ಅವಕಾಶ ನೀಡಿದರೆ ಬ್ಯಾಟಿಂಗ್​ನಲ್ಲಿ ಖಂಡಿತವಾಗಿಯು ಅತ್ಯುತ್ತಮ ಪ್ರದರ್ಶನ ನೀಡುವೆ' ಎಂದು ಆಲ್ರೌಂಡರ್ ಆಟಗಾರ ಗೌತಮ್ ಹೇಳಿದ್ದಾರೆ.

'ಒಬ್ಬ ಸ್ಪಿನ್ನರ್​​ಗೆ ಪವರ್ ಪ್ಲೇ ನಲ್ಲಿ ಬೌಲಿಂಗ್ ಮಾಡುವುದು ತುಂಬಾನೆ ಕಷ್ಟ. ಈ ಸಂದರ್ಭ ಕೇವಲ ಇಬ್ಬರು ಫೀಲ್ಡರ್ಸ್​​ಗಳು ಮಾತ್ರ ಔಟ್ ಸೈಡ್​​ನಲ್ಲಿ ಇರುತ್ತಾರೆ. ಅದರಲ್ಲು ಬ್ಯಾಟ್ಸ್​ಮನ್​ಗೆ ಪವರ್​ ಪ್ಲೇನಲ್ಲಿ ಸ್ಪಿನ್ ಬಾಲ್​ಗೆ ಬ್ಯಾಟ್ ಬೀಸಲು ತುಂಬಾನೆ ಸುಲಭ. ನಾನು ಇಂತಹ ಸಂದರ್ಭವನ್ನು ತುಂಬಾ ಇಷ್ಟ ಪಡುತ್ತೇನೆ. ವಿಕೆಟ್ ಸಿಕ್ಕಾಗ ಅಥವಾ ಡಾಟ್ ಬಾಲ್ ಆದಗ ಆ ಕ್ಷಣ ಫನ್ ಆಗಿರುತ್ತದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿವೋ ಐಪಿಎಲ್: ಮೊದಲ ಪಂದ್ಯದಲ್ಲೇ ನೂತನ ದಾಖಲೆ ನಿರ್ಮಿಸುತ್ತಾರ ವಿರಾಟ್ ಕೊಹ್ಲಿ?

ಕರ್ನಾಟಕದ ಕೃಷ್ಣಪ್ಪ ಗೌತಮ್ ಅವರು ಆಲ್ರೌಂಡರ್ ಆಟಗಾರನಾಗಿದ್ದು ಐಪಿಎಲ್​​ನಲ್ಲಿ ರಾಜಸ್ತಾನ್ ರಾಯಲ್ಸ್​ ತಂಡದ ಪರ ಆಡುತ್ತಿದ್ದಾರೆ. ಈಗಾಗಲೇ ಆಡಿರುವ 42 ಟಿ-20 ಪಂದ್ಯಗಳಲ್ಲಿ ಗೌತಮ್ 31 ವಿಕೆಟ್ ಕಿತ್ತಿದ್ದಾರೆ.
First published:March 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading