Hardik Pandya| ಕ್ರಿಕೆಟರ್​ ಆಗದಿದ್ದರೆ ನಾನು ಪೆಟ್ರೋಲ್​ ಪಂಪ್​ನಲ್ಲಿ ಕೆಲಸ ಮಾಡುತ್ತಿದ್ದೆ; ಬಾಲ್ಯದ ಕಷ್ಟಗಳನ್ನು ನೆನೆದ ಹಾರ್ದಿಕ್ ಪಾಂಡ್ಯ!

ಕೈಯಲ್ಲಿ ಸಾಕಷ್ಟು ಹಣ ಇರುವ ಆಟಗಾರ ತಂಡಕ್ಕೆ ಯಾವುದೇ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲು ಹಣ ಪ್ರೇರೇಪಿಸುತ್ತದೆ. ಒಂದು ವೇಳೆ ಕ್ರಿಕೆಟ್​ನಲ್ಲಿ ಹಣ ಇಲ್ಲದೆ ಇದ್ದರೆ ನಾನು ಈಗ ಪೆಟ್ರೋಲ್ ಪಂಪ್​ನಲ್ಲಿ ಕೆಲಸ ಮಾಡುತ್ತಿರುತ್ತಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ.

ಹಾರ್ದಿಕ್ ಪಾಂಡ್ಯ.

  • Share this:
    ಹಾರ್ದಿಕ್ ಪಾಂಡ್ಯ (Hardik Pandya) ಇಂದು ಭಾರತ ಕ್ರಿಕೆಟ್​ (Indian Cricketer) ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಆಲ್​ರೌಂಡರ್ (All Rounder) ಆಗಿರುವ ಹಾರ್ದಿಕ್ ಪಾಂಡ್ಯ ಭಾರತಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅಲ್ಲದೆ, ಕ್ರಿಕೆಟ್​ ಮೂಲಕ ಸಾಕಷ್ಟು ಹಣ ಮತ್ತು ಖ್ಯಾತಿ ಗಳಿಸಿದ್ದಾರೆ. ಆದರೆ, ಇದು ಕೇವಲ ಒಂದು ದಿನದಲ್ಲಿ ಬಂದದ್ದಲ್ಲ. ಅಸಲಿಗೆ ಹಾರ್ದಿಕ್ ಪಾಂಡ್ಯ ದೊಡ್ಡ ಕ್ರಿಕೆಟರ್ ಆಗುವ ಮುನ್ನ ಬಡತನದ ಕಾರಣಕ್ಕೆ ಇಡೀ ಕುಟುಂಬ ಸಣ್ಣ ಮನೆಯಲ್ಲಿ ವಾಸಿಸಿತ್ತು. ಹಣ ಇಲ್ಲದ ಬದುಕಿಂದ ಬಸವಳಿದಿದ್ದರು. ಆದರೆ, ಕೃಣಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ಭಾರತ ಕ್ರಿಕೆಟ್ ತಂಡದ ಕದ ತಟ್ಟಿದ ನಂತರ ಇಬ್ಬರ ಬದುಕು ಬದಲಾಗಿದೆ. ಅಲ್ಲದೆ, ತನ್ನ ಬದುಕಿನ ಏರಿಳಿತದ ಬಗ್ಗೆ ಪಾಂಡ್ಯ ಇತ್ತೀಚೆಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

    ಕ್ರಿಕೆಟರ್ ಆಗುವ ಮುನ್ನ ಪೆಟ್ರೋಲ್ ಪಂಪ್​ನಲ್ಲಿ ಕೆಲಸ:

    ಇತ್ತೀಚೆಗೆ ತಮ್ಮ ಬಾಲ್ಯ ಮತ್ತು ಜೀವನದಲ್ಲಿ ಹಣದ ಪ್ರಾಮುಖ್ಯತೆಯನ್ನು ತೆರೆದಿಟ್ಟಿರುವ ಹಾರ್ದಿಕ್ ಪಾಂಡ್ಯ, "ಬದುಕಿನಲ್ಲಿ ಹಣ ತುಂಬಾ ಮುಖ್ಯವಾದ ವಿಚಾರ. ಆದರೆ, ನೀವು ಬಾಲ್ಯದಲ್ಲೆ ನಿಜಕ್ಕೂ ನಿಮ್ಮ ಸುತ್ತ ಏನು ನಡೆಯುತ್ತಿದೆ ಎಂದು ಗ್ರಹಿಸಬೇಕು. ಆ ಮಟ್ಟಿಗಿನ ಅರಿವು ನಮಗಿರಬೇಕು. ನಾನು ಮತ್ತು ಕೃಣಾಲ್ ಈ ಬಗ್ಗೆ ಖಚಿತವಾಗಿ ತಿಳಿದುಕೊಂಡಿದ್ದೆವು. ಈ ಸಮಾಜದಲ್ಲಿ ಹಣವಿದೆ ಅದನ್ನು ನಾವೂ ಗಳಿಸಬೇಕು ಎಂದು ತೀರ್ಮಾನಿಸಿದ್ದೆವು.

    ಜೀವನ ಇಡೀ ಕಷ್ಟ ಪಟ್ಟೆವು. ಇಂದು ಅದರ ಫಲ ಅನುಭವಿಸುತ್ತಿದ್ದೇವೆ. ಆದರೆ, ಈ ಬಗ್ಗೆ ನಮ್ಮಲ್ಲಿ ಯಾವುದೇ ಅಹಂ ಇಲ್ಲ. ಅಸಲಿಗೆ ನಾನು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಹಣಕ್ಕಾಗಿ ಪೆಟ್ರೋಲ್​ ಪಂಪ್​ಗಳಲ್ಲಿ ಕೆಲಸ ಮಾಡಿದ್ದೇನೆ. ನಿಜಕ್ಕೂ ಹಣ ಹಲವರ ಬದುಕನ್ನು ಬದಲಿಸುತ್ತದೆ. ಇಂದು ನನ್ನ ಬದುಕು ಬದಲಾಗಿದೆ. ಇಂದು ನನ್ನ ಕುಟುಂಬ ಉತ್ತಮ ಜೀವನ ನಡೆಸುತ್ತಿದೆ ಎಂಬ ಖಚಿತತೆ ನನಗಿದೆ" ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: On This Day in 2020 IPL| ಐಪಿಎಲ್​ ಇತಿಹಾಸದಲ್ಲಿ ಎರಡೆರಡು Super Over ನಲ್ಲಿ Punjab Kings ಗೆದ್ದ ದಿನ ಇಂದು!

    ಹಣ ಜನರಿಗೆ ಪ್ರೇರಣೆ ನೀಡುತ್ತದೆ; ಪಾಂಡ್ಯ

    "ಕೈಯಲ್ಲಿ ಸಾಕಷ್ಟು ಹಣ ಇರುವ ಆಟಗಾರ ತಂಡಕ್ಕೆ ಯಾವುದೇ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಲು ಹಣ ಪ್ರೇರೇಪಿಸುತ್ತದೆ. ಒಂದು ವೇಳೆ ಕ್ರಿಕೆಟ್​ನಲ್ಲಿ ಹಣ ಇಲ್ಲದೆ ಇದ್ದರೆ ನಾನು ಪೆಟ್ರೋಲ್ ಪಂಪ್​ನಲ್ಲಿ ಕೆಲಸ ಮಾಡುತ್ತಿರುತ್ತಿದ್ದೆ. 2019 ರಲ್ಲಿ ನಾನು ಹಣದ ಪ್ರಾಮುಖ್ಯತೆ ಬಗ್ಗೆ ಯಾರೊಂದಿಗೋ ಸಂಭಾಷಣೆ ನಡೆಸುತ್ತಿದ್ದೆ. ಈ ವೇಳೆ ಅವರು ಯುವಕರ ಕೈಯಲ್ಲಿ ಹಣ ಇರಬಾರದು ಅವರು ತಪ್ಪು ದಾರಿ ಹಿಡಿಯುತ್ತಾರೆ ಎಂದು ವಾದಿಸುತ್ತಿದ್ದರು. ಆದರೆ, ನಾನು ಅದನ್ನು ಒಪ್ಪಲಿಲ್ಲ. ಒಂದು ಹಳ್ಳಿ ಅಥವಾ ಸಣ್ಣ ಪಟ್ಟಣದ ವ್ಯಕ್ತಿಗೆ ದೊಡ್ಡ ಮಟ್ಟದ ಹಣ ಸಿಕ್ಕಾಗ ಆತ ಅದನ್ನು ತನಗಾಗಿ ಮಾತ್ರ ಬಳಸಿಕೊಳ್ಳುವುದಿಲ್ಲ.

    ಇದನ್ನೂ ಓದಿ: T20 World Cup 2021| ಶಾರ್ಜಾ ದಿಂದ ಶೇಖ್ ಜಾಯೆದ್​ ವರೆಗೆ ವಿಶ್ವಕಪ್ ಪಂದ್ಯ ನಡೆಯಲಿರುವ ಎಲ್ಲಾ ಅಂಗಳದ ಮಾಹಿತಿ ಇಲ್ಲಿದೆ!

    ಬದಲಾಗಿ ತನ್ನ ಸಂಬಂಧಿಕರನ್ನು ಹೆತ್ತವರನ್ನೂ ಆತ ನೋಡಿಕೊಳ್ಳುತ್ತಾನೆ. ಹಣವು ಬದುಕಿನಲ್ಲಿ ಸಾಕಷ್ಟು ವ್ಯತ್ಯಾಸವನ್ನುಂಟು ಮಾಡುತ್ತದೆ ಮತ್ತು ಪ್ರೇರಣೆಯನ್ನು ನೀಡುತ್ತದೆ. ಜನರು ಹಣದ ಬಗ್ಗೆ ಮಾತನಾಡಬಾರದು ಎಂಬುದು ತಪ್ಪು ಕಲ್ಪನೆ ಇದೆ. ನಾನು ಅದನ್ನು ನಂಬುವುದಿಲ್ಲ, ಏಕೆಂದರೆ ನೀವು ಕ್ರೀಡೆ ಮತ್ತು ಹಣದ ವಿಷಯಗಳ ಬಗ್ಗೆ ಉತ್ಸುಕರಾಗಿದ್ದೀರಿ. ಆದರೆ, ಹಣವಿಲ್ಲದಿದ್ದರೆ ಎಷ್ಟು ಜನರು ಕ್ರಿಕೆಟ್ ಆಡುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ" ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ
    Published by:MAshok Kumar
    First published: