Bhuvneshwar Kumar: ತಮ್ಮ ವೃತ್ತಿ ಜೀವನದಲ್ಲಿ ಭುವನೇಶ್ವರ್ ಪಡೆದ ಮೊದಲ ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ!

ಭುವನೇಶ್ವರ್​ ತಮ್ಮ ಟ್ವಿಟರ್​ ಖಾತೆಯಲ್ಲಿ #AskBhuvi ಎಂಬ ಹ್ಯಾಶ್​​ಟ್ಯಾಗ್​ ಹಾಕಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸಂವಾದ ನಡೆಸಿದ್ದರು. ಇದರಲ್ಲಿ ಅಭಿಮಾನಿಯೊಬ್ಬರು ನೀವು ಮೊದಲು ಪಡೆದ ಚೆಕ್​ ಮೊತ್ತ ಎಷ್ಟಾಗಿತ್ತು ಮತ್ತು ಅದನ್ನು ಹೇಗೆ ಬಳಸಿಕೊಂಡಿದ್ದಿರಿ ಎಂದು ಪ್ರಶ್ನೆ ಕೇಳಿದ್ದರು.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

 • Share this:
  ಭಾರತ ಕ್ರಿಕೆಟ್‌ ತಂಡದ ವೇಗಿ ಭುವನೇಶ್ವರ್ ಕುಮಾರ್ ಸದ್ಯ ಬಹುಬೇಡಿಕೆಯ ಆಟಗಾರ. ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಟೀಂ ಇಂಡಿಯಾ ಸ್ವಿಂಗ್‌ ಮಸ್ಟರ್‌ ಭುವಿ 'ಎ' ಶ್ರೇಣಿ ಪಡೆದಿದ್ದಾರೆ. ಭುವನೇಶ್ವರ್ ಕುಮಾರ್ ವಾರ್ಷಿಕ 5 ಕೋಟಿ ರೂ. ಗಳನ್ನು ಪಡೆದುಕೊಳ್ಳುತ್ತಾರೆ. ಆದರೆ, ಅವರ ವೃತ್ತಿ ಜೀವನದ ಆರಂಭ ಅಷ್ಟೊಂದು ಸುಲಭವಾಗಿರಲಿಲ್ಲ. ತುಂಬಾನೇ ಕಠಿಣವಾಗಿತ್ತು. ಭುವಿ ವೃತ್ತಿ ಜೀವನದಲ್ಲಿ ಪಡೆದ ಮೊದಲ ಸಂಬಳ ಎಷ್ಟೆಂದೂ ಕೇಳಿದರೆ ನೀವೂ ಅಚ್ಚರಿ ಪಡುತ್ತೀರಿ.

  ಭುವನೇಶ್ವರ್​ ಕುಮಾರ್​ ಇಂದು ವಿಶ್ವದ ಶ್ರೇಷ್ಠ ವೇಗದ ಬೌಲರ್​ ಎಂಬುವುದರಲ್ಲಿ ಎರಡು ಮಾತಿಲ್ಲ. ಐಪಿಎಲ್​ ಒಪ್ಪಂದ ಹಾಗೂ ಬಿಸಿಸಿಐ ಗುತ್ತಿಗೆಯಿಂದ ಕೋಟ್ಯಂತರ ರೂಪಾಯಿ ಗಳಿಸುತ್ತಿರಬಹುದು. ಆದರೆ, ವೃತ್ತಿ ಜೀವನದ ಆರಂಭದಲ್ಲಿ ತೆಗೆದುಕೊಂಡ ಮೊದಲ ಸಂಪಾದನೆ ಹೆಚ್ಚು ಮಹತ್ವದ್ದಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

  ಇಂಗ್ಲೆಂಡ್ ವಿಶ್ವಕಪ್ ಗೆಲುವಿನ ಹಿಂದಿತ್ತು ಒಂದು ಸಿಗರೇಟ್​..!

  ಭುವನೇಶ್ವರ್​ ತಮ್ಮ ಟ್ವಿಟರ್​ ಖಾತೆಯಲ್ಲಿ #AskBhuvi ಎಂಬ ಹ್ಯಾಶ್​​ಟ್ಯಾಗ್​ ಹಾಕಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸಂವಾದ ನಡೆಸಿದ್ದರು. ಇದರಲ್ಲಿ ಅಭಿಮಾನಿಯೊಬ್ಬರು ನೀವು ಮೊದಲು ಪಡೆದ ಚೆಕ್​ ಮೊತ್ತ ಎಷ್ಟಾಗಿತ್ತು ಮತ್ತು ಅದನ್ನು ಹೇಗೆ ಬಳಸಿಕೊಂಡಿದ್ದಿರಿ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕುತ್ತರಿಸುವ ಭುವನೇಶ್ವರ್​ ಕುಮಾರ್​, ತಾವು ಪಡೆದ ಮೊದಲ ಚೆಕ್​ ಮೌಲ್ಯ 3000 ರೂಪಾಯಿ. ಹಾಗೂ ಅದರಲ್ಲಿ ಶಾಂಪಿಂಗ್​ ಮಾಡಿ ಸ್ವಲ್ಪ ಮೊತ್ತವನ್ನು ಉಳಿಕೆ ಮಾಡಿದ್ದೆ ಎಂದಿದ್ದಾರೆ.

  ಇನ್ನೂ ಕ್ರಿಕೆಟ್​ ಹೊರತುಪಡಿಸಿದರೆ ನೆಚ್ಚಿನ ಆಟ ಯಾವುದು ಎಂಬ ಪ್ರಶ್ನೆಗೆ ಫುಟ್​ಬಾಲ್​ ಮತ್ತು ಬ್ಯಾಡ್ಮಿಂಟನ್​ ಎಂದು ಉತ್ತರಿಸಿದ್ದಾರೆ. ಫುಟ್​ಬಾಲ್​ನಲ್ಲಿ ಲಿಯೋನೆಲ್​ ಮೆಸ್ಸಿ ಅಥವಾ ಕ್ರಿಶ್ವಿಯಾನೋ ರೊನಾಲ್ಡೋರಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಎಂಬ ಪ್ರಶ್ನೆಗೆ ಭುವಿ ಮೆಸ್ಸಿ ನನ್ನ ಮೆಚ್ಚಿನ ಆಟಗಾರ ಎಂದು ಹೇಳಿದರು.

  ಟೀಂ ಇಂಡಿಯಾದ ಕ್ರಿಕೆಟಿಗ ಮನೀಶ್​ ಪಾಂಡೆ ಹಾಗೂ ಹೆಂಡತಿ ಆಶ್ರಿತಾರ ಮುದ್ದಾದ ಫೋಟೋಗಳು

  2012ರಲ್ಲಿ ಭುವನೇಶ್ವರ್‌ ಕುಮಾರ್ ಪಾಕಿಸ್ತಾನದ ವಿರುದ್ಧ ಟಿ-20 ಪಂದ್ಯ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಡಿದ ಮೊದಲ ಪಂದ್ಯದಲ್ಲಿಯೇ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು.

  ಇದಕ್ಕೂ ಮೊದಲು ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ ಅವರನ್ನು ರಣಜಿ ಟ್ರೋಫಿಯಲ್ಲಿ ಶೂನ್ಯಕ್ಕೆ ಔಟ್‌ ಮಾಡಿದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೂ ಭಾಜನವಾಗಿದ್ದರು. ಅಲ್ಲದೆ, ಭಾರತ ಪ್ರಶಸ್ತಿ ಗೆದ್ದಿದ್ದ 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ ಆಗಿದ್ದರು.
  Published by:Vinay Bhat
  First published: