Aakash Chopra: ದ್ವಿಶತಕ ಬಾರಿಸಬಲ್ಲ ಮತ್ತೊಬ್ಬ ಬ್ಯಾಟ್ಸ್​ಮನ್ ಟೀಮ್ ಇಂಡಿಯಾದಲ್ಲಿದ್ದಾರೆ..!

ಅಲ್ಲಿವರೆಗೂ ಏಕದಿನ ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಕಷ್ಟಸಾಧ್ಯ ಎನ್ನುತ್ತಿದ್ದ ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕಗಳು ಮೂಡಿಬಂದಿದ್ದವು. ಅದರ ಬೆನ್ನಲ್ಲೇ ಸೆಹ್ವಾಗ್ ದಾಖಲೆಯ ಆಯುಷ್ಯದ ಬಗ್ಗೆ ಚರ್ಚೆಗಳು ಶುರುವಾಗಿದ್ದವು.

Team India

Team India

  • Share this:
    2010ರಲ್ಲಿ ಪುರುಷರ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸ ಪುಟದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದ್ದರು. ಈ ವಿಶ್ವದಾಖಲೆಗೆ ವರುಷ ತುಂಬುತ್ತಿದ್ದಂತೆ ನಜಾಫ್ಘ​ಡದ ಸುಲ್ತಾನ್ ವೀರೇಂದ್ರ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ 219 ರನ್ ಚಚ್ಚುವ ಮೂಲಕ ಸಚಿನ್ ದಾಖಲೆಯನ್ನು ಅಳಿಸಿ ಹಾಕಿದ್ದರು.

    ಅಲ್ಲಿವರೆಗೂ ಏಕದಿನ ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಕಷ್ಟಸಾಧ್ಯ ಎನ್ನುತ್ತಿದ್ದ ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕಗಳು ಮೂಡಿಬಂದಿದ್ದವು. ಅದರ ಬೆನ್ನಲ್ಲೇ ಸೆಹ್ವಾಗ್ ದಾಖಲೆಯ ಆಯುಷ್ಯದ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಏಕೆಂದರೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 209 ರನ್ ಬಾರಿಸುವ ಮೂಲಕ ಡಬಲ್ ಸೆಂಚುರಿ ಕ್ಲಬ್​ಗೆ ರೋಹಿತ್ ಶರ್ಮಾ ಎಂಟ್ರಿ ಕೊಟ್ಟಿದ್ದರು.

    ಅಷ್ಟೇ ಅಲ್ಲದೆ 2014ರಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಬಾರಿಸುವ ಮೂಲಕ ರೋಹಿತ್ ಶರ್ಮಾ ವಿಶ್ವ ದಾಖಲೆ ಬರೆದರು. 2017 ರಲ್ಲಿ ಮತ್ತೊಮ್ಮೆ ಶ್ರೀಲಂಕಾ ವಿರುದ್ಧ ಅಬ್ಬರಿಸಿದ ಹಿಟ್​ಮ್ಯಾನ್ ಅಜೇಯ 208 ರನ್​ಗಳಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಮೂರು ಡಬಲ್ ಸೆಂಚುರಿ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    ಇದೀಗ ಈ ಡಬಲ್ ಸೆಂಚುರಿ ಕ್ಲಬ್​ಗೆ ಸೇರ್ಪಡೆಯಾಗುವ ಸಾಮರ್ಥ್ಯ ಹೊಂದಿರುವ ಮತ್ತೊಬ್ಬ ಬ್ಯಾಟ್ಸ್​ಮನ್ ಟೀಮ್ ಇಂಡಿಯಾದಲ್ಲಿದ್ದಾರೆ ಎಂದಿದ್ದಾರೆ ಮಾಜಿ ಆಟಗಾರ ಆಕಾಶ್ ಚೋಪ್ರಾ. ಹೌದು, ಕೆಎಲ್ ರಾಹುಲ್ ಅವರಿಗೆ ಉನ್ನತ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕರೆ ಏಕದಿನ ಪಂದ್ಯಗಳಲ್ಲಿ ಡಬಲ್ ಸೆಂಚುರಿ ಸಿಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಚೋಪ್ರಾ ತಿಳಿಸಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಯಾರಾಗಲಿದ್ದಾರೆ ಆರಂಭಿಕ ಆಟಗಾರ ಎಂಬ ಪ್ರಶ್ನೆಗೆ ಉತ್ತರಿಸಿದ ಆಕಾಶ್ ಚೋಪ್ರಾ, ರೋಹಿತ್ ಶರ್ಮಾ ಲಭ್ಯವಿಲ್ಲದ ಕಾರಣ ಈ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. ಆದ್ದರಿಂದ ಶಿಖರ್ ಧವನ್ ಅವರೊಂದಿಗೆ ರಾಹುಲ್ ಕಣಕ್ಕಿಳಿಯುವುದು ಉತ್ತಮ. ಆದರೆ ಅವರನ್ನು ವಿಕೆಟ್ ಕೀಪರ್ ಆಗಿ ಬಳಸಿ ಆರಂಭಿಕರಾಗಿ ಕಣಕ್ಕಿಳಿಸುವುದು ಸರಿಯಲ್ಲ. ಬದಲಾಗಿ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಿ ಕೀಪರ್ ಬ್ಯಾಟ್ಸ್​ಮನ್ ಆಗಿ ಬಳಸಿಕೊಳ್ಳಬೇಕು. ರಾಹುಲ್ ಆರಂಭಿಕರಾಗಿ ಬ್ಯಾಟ್ ಬೀಸಿದರೆ, ಸ್ಯಾಮ್ಸನ್ 5ನೇ ಕ್ರಮಾಂಕದಲ್ಲಿ ಆಡುವುದು ಉತ್ತಮ ಎಂದರು.

    ನನ್ನ ಅಭಿಲಾಷೆ ಕೂಡ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂಬುದು. ಏಕೆಂದರೆ ಅವರು ಅದ್ಭುತವಾಗಿ ಬ್ಯಾಟ್ ಬೀಸಬಲ್ಲರು. ಓಪನರ್ ಆಗಿ ಕಣಕ್ಕಿಳಿದರೆ ದ್ವಿಶತಕ ಬಾರಿಸುವ ಸಾಮರ್ಥ್ಯವನ್ನು ಕೆಎಲ್​ಆರ್ ಹೊಂದಿದ್ದಾರೆ. ಇಂತಹ ಒಬ್ಬ ಪ್ರತಿಭೆಗೆ ನ್ಯಾಯ ಒದಗಿಸಲು ಬಯಸಿದರೆ, ಅವರಿಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ನೀಡಬೇಕು ಎಂದು ಆಕಾಶ್ ಚೋಪ್ರಾ ತಿಳಿಸಿದರು.

    ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
    Published by:zahir
    First published: