ನಾನು 4ನೇ ಸ್ಥಾನದಲ್ಲಿ ಬ್ಯಾಟ್ ಬೀಸಬಲ್ಲೆ, ಅನುಭವವಿದೆ; ಅವಕಾಶಕ್ಕಾಗಿ ಕಾಯುತ್ತಿರುವ ಸ್ಟಾರ್ ಆಟಗಾರ

ಸುರೇಶ್ ರೈನಾ ನಾನು 4ನೇ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಮ್ಯಾನೇಜ್​ಮೆಂಟ್ ಈ ಬಗ್ಗೆ ಯಾವಕ್ರಮ ಕೈಗೊಳ್ಳಲಿದೆ ಎಂಬುದನ್ನು ಮುಂದಿನ ದಿನಗಳ ವರೆಗೆ ಕಾದುನೋಡಬೇಕಿದೆ.

Vinay Bhat | news18-kannada
Updated:September 27, 2019, 11:14 AM IST
ನಾನು 4ನೇ ಸ್ಥಾನದಲ್ಲಿ ಬ್ಯಾಟ್ ಬೀಸಬಲ್ಲೆ, ಅನುಭವವಿದೆ; ಅವಕಾಶಕ್ಕಾಗಿ ಕಾಯುತ್ತಿರುವ ಸ್ಟಾರ್ ಆಟಗಾರ
ಸುರೇಶ್ ರೈನಾ
  • Share this:
ಬೆಂಗಳೂರು (ಸೆ. 27): ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್​ಮನ್​ ಆಗಿದ್ದ ಸುರೇಶ್ ರೈನಾ ತಂಡದಿಂದ ದೂರ ಉಳಿದು ಒಂದು ವರ್ಷಗಳೇ ಕಳೆದಿವೆ. ಇದೀಗ ಟಿ-20 ವಿಶ್ವಕಪ್ ಸಮೀಸುತ್ತಿದ್ದಂತೆ ರೈನಾ ಮತ್ತೆ ತಂಡ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

2018ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ-20 ಪಂದ್ಯವನ್ನಾಡಿದ್ದ ಸುರೇಶ್ ರೈನಾ ಬಳಿಕ ಮೈದಾನಕ್ಕಿಳಿಯಲಿಲ್ಲ. ಕಳಪೆ ಫಾರ್ಮ್​ನಿಂದ ವಿಶ್ವಕಪ್ ತಂಡದಿಂದಲೂ ಹೊರಗುಳಿದರು. ಸದ್ಯ ಟೀಂ ಇಂಡಿಯಾಕ್ಕೆ ಮತ್ತೆ ಕಮ್​ಬ್ಯಾಕ್ ಮಾಡಲು ರೈನಾ ಎದುರು ನೋಡುತ್ತಿದ್ದಾರೆ.

Suresh Raina Eyes Comeback, Says ‘Looking Forward to an Opportunity With Two T20 World Cups’
ಸುರೇಶ್ ರೈನಾ, ಟೀಂ ಇಂಡಿಯಾ ಆಟಗಾರ


'ನಾನು ಭಾರತ ಪರ 4ನೇ ಸ್ಥಾನದಲ್ಲಿ ಆಡಬಲ್ಲೆ, ಈ ಹಿಂದೆ ಆ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವ ನನಗಿದೆ. ಆದಷ್ಟು ಬೇಗ ಫಿಟ್ ಆಗಲಿದ್ದೇನೆ. ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಟಿ-20 ವಿಶ್ವಕಪ್​​ನಲ್ಲಿ ಸ್ಥಾನ ಪಡೆಯುವ ಭರವಸೆ ಹೊಂದಿದ್ದೇನೆ' ಎಂದು 32 ವರ್ಷ ಪ್ರಾಯದ ಸುರೇಶ್ ರೈನಾ ಹೇಳಿದ್ದಾರೆ.

10 ವರ್ಷಗಳ ಬಳಿಕ ಕರಾಚಿಯಲ್ಲಿ ಏಕದಿನ ಕದನ; 2 ಸಾವಿರ ಭದ್ರತಾ ಸಿಬ್ಬಂದಿ ನಡುವೆ ಪಾಕ್-ಲಂಕಾ ಪಂದ್ಯ!

ಟೀಂ ಇಂಡಿಯಾಕ್ಕೆ ಕಳೆದ ಕೆಲ ವರ್ಷಗಳಿಂದ 4ನೇ ಕ್ರಮಾಂಕದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆ ಎಲ್ ರಾಹುಲ್, ವಿಜಯ್ ಶಂಕರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಮನೀಶ್ ಪಾಂಡೆ ಹೀಗೆ ಅನೇಕ ಆಟಗಾರರನ್ನು ಈ ಜಾಗದಲ್ಲಿ ಪ್ರಯೋಗ ನಡೆಸಿತಾದರು ಯಾವೊಬ್ಬ ಆಟಗಾರ ಈ ಸ್ಥಾನ ತುಂಬಲು ಸಾಧ್ಯವಾಗಲಿಲ್ಲ.

ಹೀಗಿರುವಾಗ ಸುರೇಶ್ ರೈನಾ ನಾನು 4ನೇ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಮ್ಯಾನೇಜ್​ಮೆಂಟ್ ಈ ಬಗ್ಗೆ ಯಾವಕ್ರಮ ಕೈಗೊಳ್ಳಲಿದೆ ಎಂಬುದನ್ನು ಮುಂದಿನ ದಿನಗಳ ವರೆಗೆ ಕಾದುನೋಡಬೇಕಿದೆ.ಸುರೇಶ್ ರೈನಾ 2018ರ ಜುಲೈ 8 ರಂದು ಇಂಗ್ಲೆಂಡ್ ವಿರುದ್ಧ ಕೊನೆಯ ಟಿ-20 ಪಂದ್ಯವನ್ನಾಡಿದ್ದರು. ಇದಾದ ನಂತರ ಜುಲೈ 17 ರಂದು ಇಂಗ್ಲೆಂಡ್ ವಿರುದ್ಧವೆ ಲೀಡ್ಸ್​ನಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. ಅದಾದ ಬಳಿಕ ರೈನಾಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ.

First published:September 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading