ಹಾರ್ದಿಕ್ ಪಾಂಡ್ಯ ಸ್ಥಾನ ಕಿತ್ತುಕೊಳ್ಳುವುದು ನನ್ನ ಗುರಿಯಲ್ಲ; ಟೀಂ ಇಂಡಿಯಾ ಯುವ ಆಲ್ರೌಂಡರ್

ಟಿ-20 ಕ್ರಿಕೆಟ್​ನಲ್ಲಿ ನನ್ನ ಬೌಲಿಂಗ್ ಬಗ್ಗೆ ನನಗೆ ನಂಬಿಕೆಯಿದೆ. ಪ್ರತಿಯೊಬ್ಬ ಬೌಲರ್​ಗೂ ಒಂದು ಪಂದ್ಯ ಕೆಟ್ಟದಾಗಿದ್ದರೆ ಮತ್ತೊಂದು ಪಂದ್ಯ ಉತ್ತಮವಾಗಿರುತ್ತದೆ- ಶಿವಂ ದುಬೆ

Vinay Bhat | news18-kannada
Updated:December 5, 2019, 10:37 AM IST
ಹಾರ್ದಿಕ್ ಪಾಂಡ್ಯ ಸ್ಥಾನ ಕಿತ್ತುಕೊಳ್ಳುವುದು ನನ್ನ ಗುರಿಯಲ್ಲ; ಟೀಂ ಇಂಡಿಯಾ ಯುವ ಆಲ್ರೌಂಡರ್
ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ
  • Share this:
ಬೆಂಗಳೂರು (ಡಿ. 05): ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಭರವಸೆ ಮೂಡಿಸಿರುವ ಯುವ ಆಲ್ರೌಂಡರ್ ಆಟಗಾರ ಶಿವಂ ದುಬೆ, ನಾನು ಹಾರ್ದಿಕ್ ಪಾಂಡ್ಯ ಸ್ಥಾನವನ್ನು ರಿಪ್ಲೇಸ್ ಮಾಡಲು ಅಥವಾ ಅವರ ಸ್ಥಾವನ್ನು ಕಿತ್ತುಕೊಳ್ಳಲು ಬಂದಿಲ್ಲ. ದೇಶಕ್ಕಾಗಿ ಆಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾದ ಖಾಯಂ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಇವರ ಬದಲು ಶಿವಂ ದುಬೆ ಟಿ-20 ಟೂರ್ನಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ನಾಳೆಯಿಂದ ವೆಸ್ಟ್​ ಇಂಡೀಸ್ ವಿರುದ್ಧ ಆರಂಭವಾಗಲಿರುವ ಟಿ-20 ಸರಣಿಗೂ ದುಬೆ ಆಯ್ಕೆಯಾಗಿದ್ದಾರೆ.

Chance for Dube to make a point
ಶಿವಂ ದುಬೆ, ಟೀಂ ಇಂಡಿಯಾ ಆಲ್ರೌಂಡರ್ ಆಟಗಾರ


ಬುಮ್ರಾ ಓರ್ವ ಬೇಬಿ ಬೌಲರ್, ಅವನಿನ್ನೂ ಬಚ್ಚಾ ಎಂದ ಸ್ಟಾರ್ ಕ್ರಿಕೆಟಿಗ

ಸದ್ಯ ಈ ವಿಚಾರವಾಗಿ ಮಾತನಾಡಿದ ದುಬೆ, "ಇದು ಹಾರ್ದಿಕ್ ಅವರನ್ನ ರೀಪ್ಲೇಸ್​ ಮಾಡುವ ಅವಕಾಶ ಎಂದು ತಿಳಿದುಕೊಂಡಿಲ್ಲ. ನನಗೆ ಸಿಕ್ಕ ಉತ್ತಮ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಿದ್ದೇನೆ. ದೇಶಕ್ಕಾಗಿ ಆಡುವ ಅವಕಾಶ ಸಿಕ್ಕಿದೆ. ನನ್ನ ಕೈಯಿಂದ ಎಷ್ಟು ಸಾಧ್ಯವೊ ಅಷ್ಟು ಪ್ರದರ್ಶನ ನೀಡುತ್ತೇನೆ" ಎಂದಿದ್ದಾರೆ.

"ಟಿ-20 ಕ್ರಿಕೆಟ್​ನಲ್ಲಿ ನನ್ನ ಬೌಲಿಂಗ್ ಬಗ್ಗೆ ನನಗೆ ನಂಬಿಕೆಯಿದೆ. ಪ್ರತಿಯೊಬ್ಬ ಬೌಲರ್​ಗೂ ಒಂದು ಪಂದ್ಯ ಕೆಟ್ಟದಾಗಿದ್ದರೆ ಮತ್ತೊಂದು ಪಂದ್ಯ ಉತ್ತಮವಾಗಿರುತ್ತದೆ. ಸಂದರ್ಭಕ್ಕೆ ತಕ್ಕಂತೆ ಬೌಲಿಂಗ್ ಮಾಡಲು ನಾನು ಸಿದ್ಧನಿರುತ್ತೇನೆ"

"ನಾಯಕ ವಿರಾಟ್ ಕೊಹ್ಲಿ​ ಮತ್ತು ಆಡಳಿತ ಮಂಡಳಿ ನನಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ಒಬ್ಬ ಆಲ್​ರೌಂಡರ್​ ಬ್ಯಾಟಿಂಗ್ ಮತ್ತು ಬೌಲಿಂಗ್​ ಎರಡನ್ನೂ ನಿಭಾಹಿಸಬೇಕಿದೆ. ವೆಸ್ಟ್​ ಇಂಡೀಸ್ ಟಿ-20 ತಂಡ ಅತ್ಯುತ್ತಮವಾಗಿದೆ. ನಾವು ಅವರನ್ನು ಎದುರಿಸಲು ತಯಾರಾಗಿದ್ದೇವೆ. ಭಾರತ ವಿಶ್ವ ಕ್ರಿಕೆಟ್​ನಲ್ಲಿ ಬಲಿಷ್ಠ ತಂಡ, ವಿಂಡೀಸ್ ವಿರುದ್ಧದ ಸರಣಿಯನ್ನು ನಾವು ವಶಪಡಿಸಿಕೊಳ್ಳುತ್ತೇವೆ" ಎಂಬುದು ದುಬೆ ಮಾತು.IND vs WI: ನಾಳೆ ಮೊದಲ ಟಿ-20 ಫೈಟ್; ಭಾರತ- ವಿಂಡೀಸ್ ಆಟಗಾರರ ಅಭ್ಯಾಸ ಹೇಗಿದೆ ಗೊತ್ತಾ?

ಭಾರತ ವೆಸ್ಟ್​ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿ ಆಡಲಿದೆ. ಈ ಪೈಕಿ ನಾಳೆ (ಡಿ.6) ಹೈದರಾಬಾದ್​ನಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ.

First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading