ಅರ್ಧಶತಕ ಬಾರಿಸಿದ ಬೆನ್ನಲ್ಲೆ ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ!

ವೀರೇಂದ್ರ ಅವರು ಅತ್ಯುತ್ತಮ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಆದರೆ, 50 ರನ್ ಪೂರೈಸಿದ ಬಳಿಕ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಔಟ್ ಆಗಿದ್ದಾರೆ. ಔಟ್ ಆದ ಬಳಿಕ ಪೆವಿಲಿಯನ್​ಗೆ ತೆರಳಿದ್ದಾರೆ.

news18-kannada
Updated:November 18, 2019, 2:45 PM IST
ಅರ್ಧಶತಕ ಬಾರಿಸಿದ ಬೆನ್ನಲ್ಲೆ ಸಾವನ್ನಪ್ಪಿದ ಭಾರತೀಯ ಕ್ರಿಕೆಟಿಗ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ನ. 18): ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಪಂದ್ಯ ನಡೆತ್ತಿರುವಾಗ ಮೈದಾನದಲ್ಲೇ ಸಾವನ್ನಪ್ಪುತ್ತಿರುವ ಆಟಗಾರರ ಮತ್ತು ಅಂಪೈರ್​ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಸಾಲಿಗೆ ಈಗ ಮತ್ತೊಂದು ಘಟನೆ ಸೇರಿದೆ.

ಇಂಗ್ಲೆಷ್ ಪತ್ರಿಕೆಯೊಂದರ ವರದಿ ಪ್ರಕಾರ, 41 ವರ್ಷ ಪ್ರಾಯದ ವೀರೇಂದ್ರ ನಾಯಕ್ ಎಂಬವರು ಹೈದರಾಬಾದ್​ ಕ್ಲಬ್ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಏಕದಿನ ಪಂದ್ಯದಲ್ಲಿ ವೀರೇಂದ್ರ ಅವರು ಹೈದರಾಬಾದ್​ನ ಮರಡ್​ಪಲ್ಲಿ ಸ್ಪೋರ್ಟಿಂಗ್ ಕ್ಷಬ್ ಪರ ಆಡುತ್ತಿದ್ದರು.

Hyderabad cricketer Virendra Naik dies during match
ವೀರೇಂದ್ರ ನಾಯಕ್


2011 ವಿಶ್ವಕಪ್ ಫೈನಲ್​ನಲ್ಲಿ 97 ರನ್; ನಾನು ಶತಕ ವಂಚಿತನಾಗಲು ಧೋನಿ ಕಾರಣ ಎಂದ ಗಂಭೀರ್!

ಅತ್ಯುತ್ತಮ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಆದರೆ, 50 ರನ್ ಪೂರೈಸಿದ ಬಳಿಕ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಔಟ್ ಆಗಿದ್ದಾರೆ. ಔಟ್ ಆದ ಬಳಿಕ ವೀರೇಂದ್ರ ಅವರು ಪೆವಿಲಿಯನ್​ಗೆ ತೆರಳಿದ್ದಾರೆ. ಅಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೂಲಗಳ ಪ್ರಕಾರ, ವೀರೇಂದ್ರ ಅವರಿಗೆ ಮೊದಲಿನಿಂದಲೇ ಆರೋಗ್ಯದ ಸಮಸ್ಯೆ ಇತ್ತು. ಪಂದ್ಯದ ವೇಳೆ ಆರೋಗ್ಯದಲ್ಲಿ ಏರುಪೇರಾಗಿತ್ತಂತೆ. ವೀರೇಂದ್ರ ಅವರು ತಮ್ಮ ಹೆಂಡಿತಿ, 8 ವರ್ಷ ಮಗ ಹಾಗೂ 5 ವರ್ಷದ ಮಗಳನ್ನು ಅಗಲಿದ್ದಾರೆ. ಸದ್ಯ ವೀರೇಂದ್ರ ನಾಯಕ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಅಂತ್ಯಕ್ರಿಯೆ ನಡೆಯಲಿದೆ.

"ವೀರೇಂದ್ರ ನಾಯಕ್ ಒಬ್ಬ ಅತ್ಯುತ್ತಮ ಕ್ರಿಕೆಟ್ ಆಟಗಾರ. ಕಳೆದ ಏಳು ವರ್ಷದಿಂದ ನಮ್ಮ ಕ್ಲಬ್​ನಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ಹೆಚ್ಚು ಸಮಯವನ್ನು ಕ್ರಿಕೆಟ್ ಅಭ್ಯಾಸಕ್ಕಾಗಿಯೆ ತೊಡಗಿಸಿಕೊಳ್ಳುತ್ತಿದ್ದರು. ಅವರು ಹೆಚ್​ಎಸ್​​ಬಿಸಿ ಕ್ರಿಕೆಟ್ ಕ್ಲಬ್​ನ ನಾಯಕರಾಗಿದ್ದರು. ಅವರನ್ನು ಕಳೆದುಕೊಂಡಿರುವುದು ತುಂಬಾ ನೋವುಂಟು ಮಾಡಿದೆ" ಎಂದು ಇಲ್ಲಿನ ಕ್ರೀಡಾ ಕಾರ್ಯದರ್ಶಿ ಎಸ್. ವೆಂಕಟೇಶ್ವರನ್ ಹೇಳಿದರು.ಆರ್​ಸಿಬಿ ಪರ ಓಪನಿಂಗ್ ಬ್ಯಾಟ್ಸ್​ಮನ್​​ ಆಗಿ ಅಬ್ಬರಿಸಲಿದ್ದಾರೆ ಟೀಂ ಇಂಡಿಯಾದ ಈ ಬೌಲರ್?

ಮೈದಾನದಲ್ಲಿ ಜೀವತೆತ್ತ ಪ್ರಮುಖ ಕ್ರಿಕೆಟಿಗರ ಪಟ್ಟಿ:

-ಫಿಲ್ ಹ್ಯೂಸ್ (ಆಸ್ಟ್ರೇಲಿಯಾ, 25) -2014 - ಸೀನ್ ಅಬಾಟ್ ಅವರು ಎಸೆದ ಬೌನ್ಸರ್ ಹ್ಯೂಸ್ ತಲೆಗೆ ಬಡಿದು ಸಾವನ್ನಪ್ಪಿದ್ದರು.

-ಡರೇನ್ ರಾಂಡಲ್ (ದಕ್ಷಿಣ ಆಫ್ರಿಕಾ, 32)-2013 - ತಲೆಗೆ ಬಾಲ್​ ತಾಗಿ ಕ್ರೀಸ್​ನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.

-ಜುಲ್ಫಿಕರ್ ಭಟ್ಟಿ(ಪಾಕಿಸ್ತಾನ, 22) 2013- ಪಾಕಿಸ್ತಾನದ ದೇಶಿ ಕ್ರಿಕೆಟರ್ ಜುಲ್ಫಿಕರ್ ಭಟ್ಟಿ ಎದೆಗೆ ರಭಸವಾಗಿ ಚೆಂಡು ತಗುಲಿ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದರು.

-ರಿಚರ್ಡ್ ಬಿಯೂಮೌಂಟ್ (ಇಂಗ್ಲೆಂಡ್, 33) 2012- ಆಟದ ನಡುವೆ ಬಳಲಿದ ರಿಚರ್ಡ್ ಹೃದಯಾಘಾತದಿಂದ ನಿಧನರಾಗಿದ್ದರು.

-ಅಲ್ಕ್ವೀನ್ ಜೆನ್ಕಿನ್ಸ್(ಇಂಗ್ಲೆಂಡ್, 72)-2009 - ಅಂಪೈರಿಂಗ್ ಮಾಡುವಾಗ ತಲೆಗೆ ಚೆಂಡಿನಿಂದ ಪೆಟ್ಟು ತಿಂದು ದುರಂತ ಅಂತ್ಯಕಂಡರು.

-ವಾಸೀಂ ರಾಜ (ಪಾಕಿಸ್ತಾನ, 54) 2006- ಕೌಂಟಿ ಕ್ರಿಕೆಟ್​ನಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದರು.

-ರಮಣ್ ಲಂಬಾ (ಭಾರತ, 38) 1998- ಟೀಂ ಇಂಡಿಯಾ ಆಟಗಾರ ಲಂಬಾ ಶಾರ್ಟ್ ಲೆಗ್ ನಲ್ಲಿ ಹೆಲ್ಮೆಟ್ ಇಲ್ಲದೆ ಫೀಲ್ಡಿಂಗ್ ಮಾಡುತ್ತಿದ್ದರು. ಚೆಂಡು ಹಣೆಗೆ ಬಡಿದಿದ್ದರಿಂದ ಅವರು ಸಾವನ್ನಪ್ಪಿದರು.

First published: November 18, 2019, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading