Virat Kohli: ಎಂಟು ವರ್ಷಗಳ ಹಿಂದೆ ಕುಡಿತ, ಸಿಗರೇಟಿನ ದಾಸನಾಗಿದ್ದ ಕೊಹ್ಲಿ ಬದಲಾಗಿದ್ದು ಹೇಗೆ?

virat kohli: ಕೊಹ್ಲಿ ಬದುಕಿನ 8 ವರ್ಷಗಳ ಹಿಂದೆ ಸರಿದರೆ, ಈಗ ಇದ್ದಂತೆ ಕೊಹ್ಲಿ ಆಗಿರಲಿಲ್ಲ. ಪಾರ್ಟಿ ಪ್ರೀಯರಾಗಿದ್ದರು!. ಬೆಳಗ್ಗಿನಿಂದ ಸಂಜೆ ತನಕ ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡರೆ, ರಾತ್ರಿಯಾದಂತೆ ಪಾರ್ಟಿಯನ್ನು ಇಷ್ಟ ಪಡುತ್ತಿದ್ದರು. ಪ್ರತಿ ದಿನವು ಕುಡಿಯುತ್ತಿದ್ದರು. ಇಷ್ಟೇ ಅಲ್ಲ ಕೊಹ್ಲಿ ಚೈನ್​ ಸ್ಮೋಕರ್​ ಕೂಡ​ ಆಗಿದ್ದರು.

news18-kannada
Updated:May 23, 2020, 7:24 PM IST
Virat Kohli: ಎಂಟು ವರ್ಷಗಳ ಹಿಂದೆ ಕುಡಿತ, ಸಿಗರೇಟಿನ ದಾಸನಾಗಿದ್ದ ಕೊಹ್ಲಿ ಬದಲಾಗಿದ್ದು ಹೇಗೆ?
ವಿರಾಟ್​​ ಕೊಹ್ಲಿ
  • Share this:
ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು. ಈಗಾಗಲೇ ಅವರು ಸಾಕಷ್ಟು ದಾಖಲೆಗಳನ್ನು ಮುರಿಯುವ ಮೂಲಕ ಕ್ರಿಕೆಟ್ ಲೋಕದಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಕ್ರಿಕೆಟ್​​ ದಂತಕತೆ ಸಚಿನ್​ ಅವರ ದಾಖಲೆಗಳನ್ನು ಮುರಿಯುತ್ತ ಹೆಜ್ಜೆ ಹಾಕಿದ್ದಾರೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದ ಕೊಹ್ಲಿ 8 ವರ್ಷಗಳ ಹಿಂದೆ ಹೇಗಿದ್ದರು ಗೊತ್ತಾ?.

ಕೊಹ್ಲಿ ಬದುಕಿನ 8 ವರ್ಷಗಳ ಹಿಂದೆ ಸರಿದರೆ, ಈಗ ಇದ್ದಂತೆ ಕೊಹ್ಲಿ ಆಗಿರಲಿಲ್ಲ. ಪಾರ್ಟಿ ಪ್ರೀಯರಾಗಿದ್ದರು!. ಬೆಳಗ್ಗಿನಿಂದ ಸಂಜೆ ತನಕ ಕ್ರಿಕೆಟ್​ನಲ್ಲಿ ತೊಡಗಿಸಿಕೊಂಡರೆ, ರಾತ್ರಿಯಾದಂತೆ ಪಾರ್ಟಿಯನ್ನು ಇಷ್ಟ ಪಡುತ್ತಿದ್ದರು. ಪ್ರತಿ ದಿನವು ಕುಡಿಯುತ್ತಿದ್ದರು. ಇಷ್ಟೇ ಅಲ್ಲ, ಕೊಹ್ಲಿ ಚೈನ್​ ಸ್ಮೋಕರ್​ ಕೂಡ​ ಆಗಿದ್ದರು.

ಪ್ರತಿ ದಿನವು ಪಾರ್ಟಿ ಮೋಜು ಮಸ್ತಿ ಮಾಡುತ್ತಿದ್ದ ಕೊಹ್ಲಿ ಇದ್ದಕ್ಕಿಂದಂತೆಯೇ ಫಿಟ್​​ನೆಸ್​ನತ್ತ ಹೆಚ್ಚು ಗಮನ ಹರಿಸಲು ಮುಂದಾದರು. 2012ರ ಐಪಿಎಲ್​​ ವೇಳೆ ಕೊಹ್ಲಿ ಈ ನಿರ್ಧಾರ ಮಾಡಿಕೊಂಡರು. ನಂತರ ಕೊಹ್ಲಿ ಮುಟ್ಟಿದೆಲ್ಲ ಚಿನ್ನ ಎಂಬ ಮಾತಿನಂತೆ ಕ್ರಿಕೆಟ್​ನಲ್ಲಿ ಇತಿಹಾಸವನ್ನೇ ನಿರ್ಮಿಸಿದರು. ತಂಡವನ್ನು ಯಶಸ್ವಿಯತ್ತ ಕೊಂಡೊಯ್ದರು.

ಕೊಹ್ಲಿ ವೈಯ್ಯಕ್ತಿಕವಾಗಿ ಹೆಚ್ಚು ಸಾಧನೆಯನ್ನು ಮಾಡಿದ್ದರು ಸಹ ಇಂದು ವಿಶ್ವವೇ ಅವರನ್ನು ಕೊಂಡಾಡುತ್ತಿದೆ. ಸಾಕಷ್ಟು ಜನರಿಗೆ, ಕ್ರಿಕೆಟಿಗರಿಗೆ ರೋಲ್​ ಮಾಡೆಲ್​ ಆಗಿದ್ದಾರೆ. ಅವರ ನಾಯಕತ್ವ ಹಾಗೂ ತಂಡವನ್ನು ಮುನ್ನೆಡಸು ರೀತಿ ಇವೆಲ್ಲದಕ್ಕೆ ಕಾರಣವಾಗಿದೆ.

6 ಎಸೆತಗಳಲ್ಲಿ 23 ರನ್ ಬಾರಿಸಿದ ಧೋನಿ; ಹೆಲಿಕಾಫ್ಟರ್ ಶಾಟ್ ಮೂಲಕ ಪಂದ್ಯ ಗೆಲ್ಲಿಸಿದ ಮಾಹಿ ವಿಡಿಯೋ ಇಲ್ಲಿದೆ
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading