Virat-Rohit ನಡುವಿನ ಮುನಿಸಿನ ಅಂತೆಕಂತೆಗೆ ಬ್ರೇಕ್ ಹಾಕಿದೆ ಈ ವಿಡಿಯೋ..

Virat-kohli: ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾಗೆ ಹೆಲ್ಪ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ವಿಡಿಯೋ ಒಂದು ಇಷ್ಟು ದಿನ ರೋಹಿತ್ ಹಾಗೂ ವಿರಾಟ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್ ಹಾಕಿದೆ

ಕೊಹ್ಲಿ ರೋಹಿತ್

ಕೊಹ್ಲಿ ರೋಹಿತ್

 • Share this:
  ವಿರಾಟ್ ಕೊಹ್ಲಿ(Virat Kohli) ಮತ್ತು ನಾಯಕ ರೋಹಿತ್ ಶರ್ಮಾ(Rohit Sharma) ಮಧ್ಯೆ ಏನೋ ಸರಿಯಿಲ್ಲ ಎಂಬ ಗಾಳಿ ಸುದ್ದಿಗಳು ಕೇಳಿಬರುತ್ತಲೇ ಇರುತ್ತದೆ. ವಿಶ್ವಕಪ್(World Cup) ಟೂರ್ನಿಯ ಬಳಿಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಡುವೆ ಸಂಬಂಧ ಹದಗೆಟ್ಟಿದೆ. ಒಬ್ಬರನೊಬ್ಬರು ಮುಖಕ್ಕೆ ಮುಖ(Face to Face) ಕೊಟ್ಟು ಮಾತನಾಡುತ್ತಿಲ್ಲ. ಕ್ಯಾಪ್ಟನ್(Captain) ವಿಚಾರವಾಗಿ ಈ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂಬಂತಹ ವರದಿಗಳು ಕೇಳಿ ಬರುತ್ತಲೇ ಇವೆ .ಆದ್ರೆ ಹಲವು ಬಾರಿ ನನ್ನ ಮತ್ತು ರೋಹಿತ್ ನಡುವೆ ಯಾವುದೇ ಮುನಿಸು ಇಲ್ಲ ಎಂದು ವಿರಾಟ್ ಕೊಹ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮಾ  ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಆದಾಗ್ಯೂ, ಇಂತಹ ವರದಿಗಳು ಗೊಂದಲವನ್ನುಂಟು ಮಾಡುವ ಸುಳ್ಳುಗಳು ಹಾಗೂ ಹಾಸ್ಯಾಸ್ಪದ ಎಂದು ಹೇಳಿದ್ದು ಸಹ ಇವರಿಬ್ಬರ ಮಧ್ಯೆ ಯಾವುದು ಸರಿ ಇಲ್ಲ ಅನ್ನೋದು ಕೆಲವು ಕ್ರೀಡಾ ಪಂಡಿತರ ವಾದವಾಗಿತ್ತು.. ಅದೇ ಇದಕ್ಕೆಲ್ಲಾ ಬ್ರೇಕ್ ಆಕುವಂತಹ ಘಟನೆ ಅಹಮದಬಾದ್ ನಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಸಾಬೀತಾಗಿದೆ

  ಮೈದಾನದಲ್ಲಿ ರೋಹಿತ್ ಗೆ ಹೆಲ್ಪ್ ಮಾಡಿದ ವಿರಾಟ್ ಕೊಹ್ಲಿ

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬೀಗಿದೆ.. ವಿಶೇಷ ಅಂದ್ರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾ ಪೂರ್ಣ ಪ್ರಮಾಣದ ನಾಯಕನಾಗಿ ಕಣಕ್ಕೆ ಇಳಿದಿದ್ದರು..ಹೀಗಾಗಿ ಇದು ರೋಹಿತ್ ಪಾಲಿಗೆ ವಿಶೇಷ ಪಂದ್ಯವಾಗಿತ್ತು. ಇದೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ರೋಹಿತ್ ಶರ್ಮಾಗೆ ಹೆಲ್ಪ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ವಿಡಿಯೋ ಒಂದು ಇಷ್ಟು ದಿನ ರೋಹಿತ್ ಹಾಗೂ ವಿರಾಟ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ
  ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್ ಹಾಕಿದೆ.

  ಇದನ್ನೂ ಓದಿ: 1000ದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಬೀಗಿದ ಭಾರತ

  ರೋಹಿತ್ DRS ತೆಗೆದುಕೊಳ್ಳುವಂತೆ ಕೊಹ್ಲಿ ಮನವೊಲಿಕೆ

  22ನೇ ಓವರ್ ಯಜ್ವೇಂದ್ರ ಚಹಲ್​ ಬೌಲಿಂಗ್​ನಲ್ಲಿ ವಿಂಡೀಸ್ ಬ್ಯಾಟರ್​ ಶಮರ್​ ಬ್ರೂಕ್ಸ್​ ಬ್ಯಾಟ್​ಗೆ ಚೆಂಡು ಸ್ವಲ್ಪ ತಗುಲಿ ಕೀಪರ್​ ರಿಷಭ್​ ಪಂತ್‌ ಕೈಗೆ ಸೇರಿತ್ತು. ಆದರೆ, ನಾಯಕ ರೋಹಿತ್ ಸೇರಿದಂತೆ ಇಡೀ ತಂಡ ಎಲ್​ಬಿಡಬ್ಲ್ಯೂಗೆ ಮನವಿ ಮಾಡಿತು. ಆದರೆ, ಆನ್​ಫೀಲ್ಡ್​ ಅಂಪೈರ್​ ನಾಟೌಟ್ ಎಂದರು. ಈ ಸಂದರ್ಭದಲ್ಲಿ ರೋಹಿತ್ ವಿಕೆಟ್ ಕೀಪರ್​ ಪಂತ್​ರನ್ನು ಚೆಂಡು ಎಡ್ಜ್​ ಆಗಿರಬಹುದಾ? ಎಂದು ಕೇಳಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕೊಹ್ಲಿ ಚೆಂಡು ಬ್ಯಾಟ್​ಗೆ ತಾಗಿದೆ ಎಂದು ರೋಹಿತ್​ರನ್ನು ಮನವೊಲಿಸಿ ಡಿಆರ್ ಎಸ್​ ತೆಗೆದುಕೊಳ್ಳುವಂತೆ ಸಲಹೆ ಮಾಡಿದ್ರು. ಕೊಹ್ಲಿ ಮಾತು ಕೇಳಿದ ರೋಹಿತ್ ಶರ್ಮ DRS ತೆಗೆದುಕೊಂಡರು.. ಸದ್ಯ ಇವರಿಬ್ಬರ ಮಧ್ಯೆ ನಡೆದಿರುವ ಸಂಭಾಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.. ಅಲ್ಲದೆ ವಿರಾಟ್ ಹಾಗೂ ರೋಹಿತ್ ನಡುವೆ ಯಾವುದೇ ಮುನಿಸು ಇಲ್ಲ ಎಂಬುದಕ್ಕೆ ಈ ವಿಡಿಯೋ ಸಾಕಷ್ಟು ಪುರಾವೆ ಒದಗಿಸಿದೆ..  ಇನ್ನು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮುಕ್ತಾಯಗೊಂಡ ಐಸಿಸಿ ವಿಶ್ವಕಪ್ ವೇಳೆಯೂ ಕೊಹ್ಲಿ-ರೋಹಿತ್ ಮಧ್ಯೆ ಬಾಂಧವ್ಯ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಅದರಲ್ಲೂ ಜುಲೈ 9-10ರಂದು ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತು ಹೊರ ಬಿದ್ದಾಗ ಇಬ್ಬರ ಬಗೆಗಿನ ಗುಸುಗುಸು ಜೋರಾಗಿದ್ದವು.

  ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹೆಸರು ನೊಂದಾಯಿಸಿ ಕೊಂಡಿರುವ ಹಿರಿಯ ಆಟಗಾರರು ಯಾರು ಗೊತ್ತಾ?

  ರೋಹಿತ್ ಶರ್ಮಾ ಅವರು ಈ ಹಿಂದೆಯೇ ವಿರಾಟ್ ಕೊಹ್ಲಿ ಅವರನ್ನು ಟ್ವಿಟರ್‌ನಿಂದ ಅನ್ ಫಾಲೋ ಮಾಡಿದ್ದರು. ಅದಕ್ಕೆ, ಕೊಹ್ಲಿ ಆ್ಯಡ್‌ ಸಂಬಂಧಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ ಎಂಬ ಕಾರಣ ನೀಡಿದ್ದರು. ಇತ್ತೀಚೆಗೆ 32ರ ಹರೆಯದ ಶರ್ಮಾ, ಕೊಹ್ಲಿ ಮತ್ತವರ ಪತ್ನಿ ಅನುಷ್ಕಾ ಶರ್ಮಾ ಇಬ್ಬರನ್ನೂ ಇನ್‌ಸ್ಟಾಗ್ರಾಮ್‌ನಿಂದ ಅನ್ ಫಾಲೋ ಮಾಡಿದ್ದಾರೆ.
  Published by:ranjumbkgowda1 ranjumbkgowda1
  First published: