ICC Cricket World Cup 2019: ಮೊಬೈಲ್​ನಲ್ಲಿ ವಿಶ್ವಕಪ್ ಲೈವ್​​ ಪಂದ್ಯ ವೀಕ್ಷಿಸಲು ಹೀಗೆ ಮಾಡಿ

ICC Cricket World Cup 2019: ವಿಶ್ವಕಪ್​ ಪಂದ್ಯ ವೀಕ್ಷಣೆಗೆ ಕಾತುರಾಗಿರುವ ಅಭಿಮಾನಿಗಳು ತಮ್ಮ ಮೊಬೈಲ್​ ಮೂಲಕ ಲೈವ್​ ಪಂದ್ಯವನ್ನು ವೀಕ್ಷಣೆ ಮಾಡಬಹುದು. ಟೀಂ ಇಂಡಿಯಾ ಪಂದ್ಯ ಮಾತ್ರವಲ್ಲದೆ ಎಲ್ಲಾ ಪಂದ್ಯಗಳನ್ನು ನಿಮ್ಮ ಮೊಬೈಲ್​ ಮೂಲಕ ವೀಕ್ಷಿಸಬಹುದಾಗಿದೆ.

news18
Updated:June 2, 2019, 4:47 PM IST
ICC Cricket World Cup 2019: ಮೊಬೈಲ್​ನಲ್ಲಿ ವಿಶ್ವಕಪ್ ಲೈವ್​​ ಪಂದ್ಯ ವೀಕ್ಷಿಸಲು ಹೀಗೆ ಮಾಡಿ
ವಿಶ್ವಕಪ್
  • News18
  • Last Updated: June 2, 2019, 4:47 PM IST
  • Share this:
ವಿಶ್ವಕಪ್​ 12ನೇ ಆವೃತ್ತಿಗೆ ಈಗಾಗಲೇ ಚಾಲನೆ ದೊರೆತಿದೆ. ಅಭಿಮಾನಿಗಳಂತೂ ಈ ಮಹಾ ಟೂರ್ನಿಯಲ್ಲಿ ಟೀಂ ಇಂಡಿಯಾದ ಹಣಾಹಣಿಯನ್ನು ನೋಡಲು ಕಾತುರರಾಗಿದ್ದಾರೆ. ಅದರಂತೆ ಜೂನ್​ 5 ರಂದು ಭಾರತ ತಂಡ ದಕ್ಷಿಣ​ ಆಫ್ರಿಕಾ ವಿರುದ್ಧ ಅಭಿಯಾನ ಆರಂಭಿಸಲಿದೆ.

ಇನ್ನು ವಿಶ್ವಕಪ್​ ಪಂದ್ಯಾವಳಿಯನ್ನು ನಿಮ್ಮ ಮೊಬೈಲ್​ ಮೂಲಕ ಲೈವ್​ ಆಗಿಯೇ ವೀಕ್ಷಣೆ ಮಾಡಬಹುದು. ಕೇವಲ ಟೀಂ ಇಂಡಿಯಾದ ಪಂದ್ಯ ಮಾತ್ರವಲ್ಲದೆ ಎಲ್ಲಾ ಪಂದ್ಯಗಳನ್ನು ನಿಮ್ಮ ಮೊಬೈಲ್​ನಲ್ಲಿಯೆ ವೀಕ್ಷಿಸಬಹುದಾಗಿದೆ.

ಹಾಗಿದ್ದರೆ, ಈ ಬಾರಿಯ ವಿಶ್ವಕಪ್​ ಪಂದ್ಯವನ್ನು ಮೊಬೈಲ್​ನಲ್ಲಿ ವೀಕ್ಷಿಸುವುದು ಹೇಗೆ? ತಾಂತ್ರಿಕ ಅಡಚಣೆಯಿಲ್ಲದೆ ವಿಶ್ವಕಪ್​​ ವೀಕ್ಷಣೆಗೆ ಯಾವ ಆ್ಯಪ್​​ ಸೂಕ್ತ.? ಇಲ್ಲಿದೆ ಮಾಹಿದೆ.

ಹಾಟ್​ ಸ್ಟಾರ್​

ಮೊಬೈಲ್​ ಮೂಲಕ ವಿಶ್ವಕಪ್​ ಪಂದ್ಯವನ್ನು ವೀಕ್ಷಣೆ ಮಾಡಲು ಪರದಾಡುತ್ತಿರುವ ಅಭಿಮಾನಿಗಳು ಮೊಬೈಲ್​ನಲ್ಲಿ  ಸುಲಭವಾಗಿ ಲೈವ್​​​​​ ಪಂದ್ಯ ವೀಕ್ಷಿಸಬಹುದು. ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಲಭ್ಯವಿರುವ ‘ಹಾಟ್​​ಸ್ಟಾರ್‘ ಆ್ಯಪ್​ ಡೌನ್​ಲೋಡ್​​​ ಮಾಡುವ ಮೂಲಕ ಪಂದ್ಯ ವೀಕ್ಷಿಸಬಹುದು. ಅಂತೆಯೇ, ‘ಹಾಟ್​​​ ಸ್ಟಾರ್‘​​ ಬಳಕೆದಾರರು ತಿಂಗಳಿಗೆ ರೂ.299 ಮತ್ತು ವರ್ಷಕ್ಕೆ ರೂ.999 ನೀಡಿ ಈ ಸೌಲಭ್ಯ ಪಡೆಯಬಹುದು.

ಪಿಟಿವಿ ಸ್ಪೋಟ್ಸ್​​​ ಮತ್ತು ಸೋನಿಲೈವ್​​​

ಪಾಕಿಸ್ತಾನದಲ್ಲಿ ನೆಲೆಸಿರುವ ಭಾರತೀಯರು ಪಿಟಿವಿ ಸ್ಟೋಟ್ಸ್​ ಮತ್ತು ಸೋನಿಲೈವ್​ ಆ್ಯಪ್​ಗಳನ್ನು ಡೌನ್​ಲೋಡ್​​ ಮಾಡುವ ಮೂಲಕ ಈ ಬಾರಿಯ ವಿಶ್ವಕಪ್​ ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದೆ.Rabbithole Prime

ಬಾಂಗ್ಲದೇಶದ ವಲಸಿಗರು Rabbithole Prime ವೆಬ್​​​​​ಸೈಟ್​ ಮೂಲಕ ನಿಮ್ಮ ಸ್ಮಾರ್ಟ್​ಪೋನ್​ನಲ್ಲಿ ವಿಶ್ವಕಪ್​ ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದೆ.

ರೂಪವಾಹಿನಿ

ಶ್ರೀಲಂಕಾದಲ್ಲಿ ವಾಸಿಸುವ ಭಾರತೀಯರು ರೂಪವಾಹಿನಿ ವೆಬ್​ಸೈಟ್​ ಮೂಲಕ  ಪಂದ್ಯ ವೀಕ್ಷಣೆ ಮಾಡಬಹುದಾಗಿದೆ.

ವಿಲ್ಲೋ ಟಿವಿ

ಅಮೆರಿಕಾ ಮತ್ತು ಕೆನಡಾದಲ್ಲಿ ವಾಸಿಸುವ ಭಾರತೀಯರು ವಿಲ್ಲೋ ಟಿವಿ ವೆಬ್​ಸೈಟ್​ ಮೂಲಕ 2019ರ ವಿಶ್ವಕಪ್​ ಪಂದ್ಯವನ್ನು ವೀಕ್ಷಣೆ ಮಾಡಬಹುದಾಗಿದೆ.First published:June 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ