Little Brazil: ಬೆಂಗಳೂರಿನಲ್ಲಿದೆ ಲಿಟಲ್ ಬ್ರೆಜಿಲ್; ಇದಕ್ಕಿರುವ ಇತಿಹಾಸದ ಬಗ್ಗೆ ನಿಮಗೆ ಗೊತ್ತೇ?

ಬ್ರಿಟಿಷರು ಹೇಳಿಕೊಟ್ಟ ಫುಟ್ಬಾಲ್​​ ಆಟದಿಂದಾಗಿ ಸಾಕಷ್ಟು ಫುಟ್ಬಾಲ್​ ತಾರೆಯರು ಗೌತಮಪುರ​​​ ಕಾಲನಿಯಲ್ಲಿ ಹುಟ್ಟಿ, ಸಾಧನೆಯನ್ನು ಮಾಡಿದ್ದಾರೆ. ಖ್ಯಾತ ಫುಟ್ಬಾಲ್​​ ಆಟಗಾರ ಸತ್ತಾರ್​ ಬಷೀರ್ ಕೂಡ ಗೌತಮ​ ಪುರದವರು. 1948ರಲ್ಲಿ ಬಷೀರ್​​ ಒಲಂಪಿಕ್​ ಫುಟ್ಬಾಲ್​ ಟೀಂ ನಲ್ಲಿ ಆಡಿದ್ದರು. ಅಂತೆಯೇ ಮತ್ತೋರ್ವ ಫುಟ್ಬಾಲ್ ಆಟಗಾರ ಕಣ್ಣನ್​ ಕೂಡ ಈ ಏರಿಯಾದವರು. ಇವರು ಏಷ್ಯಾನ್​ ಪೀಲೆ ಎಂದು ಖ್ಯಾತಿ ಗಳಿಸಿದ್ದಾರೆ.

news18-kannada
Updated:October 17, 2020, 9:59 PM IST
Little Brazil: ಬೆಂಗಳೂರಿನಲ್ಲಿದೆ ಲಿಟಲ್ ಬ್ರೆಜಿಲ್; ಇದಕ್ಕಿರುವ ಇತಿಹಾಸದ ಬಗ್ಗೆ ನಿಮಗೆ ಗೊತ್ತೇ?
ಗೌತಮಪುರ
  • Share this:
ಮಹಾನಗರ ಬೆಂಗಳೂರಿನಲ್ಲಿ ಸಾಕಷ್ಟು ಏರಿಯಾಗಳಿಗೆ ಮತ್ತು ಅವುಗಳ ಹೆಸರುಗಳಿಗೆ ಒಂದೊಂದು ಇತಿಹಾಸವಿದೆ. ಸಾಕಷ್ಟು ಏರಿಯಾಗಳಿಗೆ ಖ್ಯಾತ ಕವಿಗಳ, ಸಾಹಿತಿಗಳು, ನಟರ ಹೆಸರನ್ನು ಇಟ್ಟಿದ್ದಾರೆ. ಅವರ ಸಾಧನೆಗೆ ಗೌರವ ಸೂಚಕವಾಗಿ  ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ. ಆದರೆ ಬೆಂಗಳೂರಿನಲ್ಲೊಂದು ಲಿಟಲ್​​ ಬ್ರೆಜಿಲ್​ ಎಂದು ಕರೆಯುವ ಏರಿಯಾ ಇದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು! ಅದಕ್ಕೂ ಒಂದು ಇತಿಹಾಸವಿದೆ.

ಬೆಂಗಳೂರಿನ ಹಲ್ಸೂರು ಬಲಿ ಗೌತಮಪುರ ಎಂಬ ಏರಿಯಾವಿದೆ. ಬ್ರಿಟಿಷರ ಈ ಏರಿಯಾವನ್ನು ಗಂಟ್​ರೂಪ್ಸ್​ ಎಂದು ಕರೆಯುತ್ತಿದ್ದರು. 1800ರಲ್ಲಿ ಶ್ರೀರಂಗ ಪಟ್ಟಣದಿಂದ ಬಂದ ಬ್ರಿಟಿಷರು ಗಂಟ್​ರೂಪ್ಸ್​ ಕಾಲನಿಯಲ್ಲಿ ನೆಲೆಸುತ್ತಾರೆ. ಅವರ ನಿವೃತ್ತಿ ಕಾಲದಲ್ಲಿ ಫುಟ್ಬಾಲ್​​​ ಆಡುತ್ತಾ ಸಮಯ ಕಳೆಯುತ್ತಾರೆ. ಅವರ ಜೊತೆಗಿದ್ದ ಸೇನಾಧಿಕಾರಿಗಳು, ಸಹಾಯಕರು ಕೂಡ ಇಲ್ಲಿನ ಸುತ್ತಮುತ್ತಲಿನ ಏರಿಯಾದಲ್ಲಿ ಉಳಿದುಕೊಳ್ಳುತ್ತಾರೆ. ನಂತರ ಬ್ರಿಟಿಷರೊಂದಿಗೆ ಫುಟ್ಬಾಲ್​​ ಆಡುತ್ತಾ ಫುಟ್ಬಾಲ್​​ ಕಲಿಯುತ್ತಾರೆ.

ಮತ್ತೊಂದು ವಿಶೇಷವೆಂದರೆ ಈ ಏರಿಯಾದಲ್ಲಿ ಬ್ರೆಜಿಲ್​ನ ಅಂತರಾಷ್ಟ್ರೀಯ ಪುಟ್ಬಾಲ್​ ದಂತ ಕಥೆ ಪೀಲೆ ಅವರ ಪ್ರತಿಮೆ ಕೂಡ ಇದೆ. ಹಾಗಾಗಿ ಈ ಏರಿಯಾವನ್ನು ಲಿಟಲ್​ ಬ್ರೆಜಿಲ್​ ಎಂದು ಕರೆಯುತ್ತಾರೆ. ಬ್ರಿಟಿಷರು ಭಾರತವನ್ನು ಬಿಟ್ಟು ಹೋದ ನಂತರ ಈ ಪ್ರದೇಶ ಗೌತಮಪುರ ಎಂದು ಬದಲಾಗುತ್ತದೆ.



ಇನ್ನು ಬ್ರಿಟಿಷರು ಹೇಳಿಕೊಟ್ಟ ಫುಟ್ಬಾಲ್​​ ಆಟದಿಂದಾಗಿ ಸಾಕಷ್ಟು ಫುಟ್ಬಾಲ್​ ತಾರೆಯರು ಗೌತಮಪುರ​​​ ಕಾಲನಿಯಲ್ಲಿ ಹುಟ್ಟಿ, ಸಾಧನೆಯನ್ನು ಮಾಡಿದ್ದಾರೆ. ಖ್ಯಾತ ಫುಟ್ಬಾಲ್​​ ಆಟಗಾರ ಸತ್ತಾರ್​ ಬಷೀರ್ ಕೂಡ ಗೌತಮ​ ಪುರದವರು. 1948ರಲ್ಲಿ ಬಷೀರ್​​ ಒಲಂಪಿಕ್​ ಫುಟ್ಬಾಲ್​ ಟೀಂ ನಲ್ಲಿ ಆಡಿದ್ದರು. ಅಂತೆಯೇ ಮತ್ತೋರ್ವ ಫುಟ್ಬಾಲ್ ಆಟಗಾರ ಕಣ್ಣನ್​ ಕೂಡ ಈ ಏರಿಯಾದವರು. ಇವರು ಏಷ್ಯಾನ್​ ಪೀಲೆ ಎಂದು ಖ್ಯಾತಿ ಗಳಿಸಿದ್ದಾರೆ.

ಫುಟ್ಬಾಲ್​ ದಂತೆಕಥೆ ಪೀಲೆ:

ಪೀಲೆ ಅವರು 23 ಅಕ್ಟೋಬರ್​ 1940ರಂದು ಬ್ರೆಜಿಲ್​​ನ ಮಿನಾಸ್​​ ಗೆರೈಸ್​ನಲ್ಲಿ  ಹುಟ್ಟುತ್ತಾರೆ. ಇವರ  ಮೂಲ ಹೆಸರು ಎಡ್ಸನ್ ಅರಾಂಟೆಸ್ ಡು ನಾಸ್ಸಿಮೆಂಟೊ. ಫುಟ್ಬಾಲ್​​ನಲ್ಲಿ ಇವರು ಮಾಡಿದ ಸಾಧನೆಯಿಂದಾಗಿ ದಂತಕಥೆಯಾಗಿದ್ದಾರೆ. ಫಾರ್ವರ್ಡ್​ ಆಟಗಾರರಾಗಿದ್ದ ಪೀಲೆ ಫುಟ್ಬಾಲ್​ ಇತಿಹಾಸದಲ್ಲಿ 694 ಲೀಗ್​ ಪಂದ್ಯವನ್ನು ಆಡಿದ್ದಾರೆ.  ಅದರಲ್ಲಿ 650 ಗೋಲ್​ ಹೊಡೆದಿದ್ದಾರೆ. ಮಾತ್ರವಲ್ಲದೆ. 1363 ಪದ್ಯಗಳಲ್ಲಿ ಪಿಲೇ ಮತ್ತು ತಂಡದವರು 1282 ಗೋಲು ಬಾರಿಸಿ ಗಿನ್ನೆಸ್​ ದಾಖಲೆಯನ್ನು ಸಾಧನೆ ಮಾಡಿದ್ದರು. 1958, 1962 ಮತ್ತು 1970ರಲ್ಲಿ ನಡೆದ ಫಿಫಾ ಫುಟ್ಬಾಲ್​ನಲ್ಲಿ ಪೀಲೆ ಮತ್ತು ತಂಡ ಜಯಗಳಿಸಿದ್ದರು.iPhone SE: ಅತಿ ಕಡಿಮೆ ಬೆಲೆಗೆ ಸಿಗಲಿಗೆ ಐಫೋನ್​ ಎಸ್​ಇ; ಹೇಗೆ ಖರೀದಿಸಬಹುದು ಗೊತ್ತಾ?
Published by: Harshith AS
First published: October 17, 2020, 9:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading