Rohit Sharma: ಕ್ಯಾಚ್​ ಬಿಟ್ಟರೆ ರೋಹಿತ್​ ಶತಕ ಬಾರಿಸೋದು ಗ್ಯಾರಂಟಿ; ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆದ ಹಿಟ್​ ಮ್ಯಾನ್​

ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮಿಮ್ ಇಕ್ಬಾಲ್ ಕ್ಯಾಚ್​ ಬಿಟ್ಟಿದ್ದರು. ರೋಹಿತ್​ ಶತಕ ಬಾರಿಸುವುದು ಗ್ಯಾರಂಟಿ ಎಂದು ಅದಾಗಲೇ ಟ್ವಿಟ್ಟರ್​ನಲ್ಲಿ ಸಂಭ್ರಮಾಚರಣೆ ಶುರುವಾಗಿತ್ತು.

Sushma Chakre | news18
Updated:July 3, 2019, 10:48 AM IST
Rohit Sharma: ಕ್ಯಾಚ್​ ಬಿಟ್ಟರೆ ರೋಹಿತ್​ ಶತಕ ಬಾರಿಸೋದು ಗ್ಯಾರಂಟಿ; ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆದ ಹಿಟ್​ ಮ್ಯಾನ್​
ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮಿಮ್ ಇಕ್ಬಾಲ್ ಕ್ಯಾಚ್​ ಬಿಟ್ಟಿದ್ದರು. ರೋಹಿತ್​ ಶತಕ ಬಾರಿಸುವುದು ಗ್ಯಾರಂಟಿ ಎಂದು ಅದಾಗಲೇ ಟ್ವಿಟ್ಟರ್​ನಲ್ಲಿ ಸಂಭ್ರಮಾಚರಣೆ ಶುರುವಾಗಿತ್ತು.
  • News18
  • Last Updated: July 3, 2019, 10:48 AM IST
  • Share this:
'ಕೈಗೆ ಸಿಕ್ಕ ತುತ್ತು ಬಾಯಿಗೆ ಬರಲಿಲ್ಲ' ಅನ್ನೋ ಮಾತು ಭಾರತ ಕ್ರಿಕೆಟ್​ ತಂಡದ ಹಿಟ್​ ಮ್ಯಾನ್​ ರೋಹಿತ್​ ಶರ್ಮಾ ವಿಷಯದಲ್ಲಂತೂ ನಿಜವಾಗುತ್ತಿದೆ. ಕೈಗೆ ಬಂದ ರೋಹಿತ್​ ಶರ್ಮ ಹೊಡೆದ ಚೆಂಡು ಕೈತಪ್ಪಿ ಹೋಯೆತೆಂದರೆ ಎದುರಾಳಿಗಳು ತಲೆಮೇಲೆ ಕೈ ಹೊತ್ತು ಕೂರುತ್ತಾರೆ. ಇತ್ತ, ಭಾರತೀಯ ಕ್ರಿಕೆಟ್​ ಪ್ರೇಮಿಗಳು ಸಂಭ್ರಮಾಚರಣೆ ಮಾಡುತ್ತಾರೆ. ಯಾಕೆ ಅಂತೀರಾ?

ರೋಹಿತ್​ ಶರ್ಮಾ ಹೊಡೆದ ಬಾಲ್​ನ ಕ್ಯಾಚ್​ ಕೈಬಿಟ್ಟರೆ ಆ ಮ್ಯಾಚ್​ನಲ್ಲಿ ಶತಕ ಬಾರಿಸುತ್ತಾರೆ ಎಂಬ ನಂಬಿಕೆ ಕ್ರಿಕೆಟ್​ಪ್ರೇಮಿಗಳದ್ದು. ವಿಶ್ವ ಕಪ್​ನಲ್ಲಿ ರೋಹಿತ್​ ನೀಡಿರುವ ಪ್ರದರ್ಶನವೇ ಆ ನಂಬಿಕೆಗೆ ಕಾರಣ. ರನ್​ ಮಷಿನ್ ಎಂದೇ ಹೆಸರಾಗಿರುವ ರೋಹಿತ್ ಶರ್ಮಾ ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಆ ನಂಬಿಕೆಯನ್ನು ಸಾಬೀತುಪಡಿಸಿದ್ದಾರೆ.

Virat Kohli: ವಿರಾಟ್ ಪ್ರದರ್ಶನ ನೀಡದಿದ್ದರೂ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆದ ಕೊಹ್ಲಿ!

ಬಲಗೈ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ಅವರ ಕ್ಯಾಚ್​ ಕೈಬಿಟ್ಟ ಮೂರು ಪಂದ್ಯಗಳಲ್ಲಿ ಶತಕ ಬಾರಿಸಿದ್ದಾರೆ, ಒಂದು ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಶರ್ಮಾ ಕ್ಯಾಚ್​ ಅನ್ನು ಡೇವಿಡ್​ ಮಿಲ್ಲರ್​ ಕೈಚೆಲ್ಲಿದ್ದರು. ಈ ಪಂದ್ಯದಲ್ಲಿ ರೋಹಿತ್​ ಶರ್ಮಾ  122 ರನ್​ ಬಾರಿಸಿದ್ದರು. ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಜೋ ರೂಟ್​ ಕ್ಯಾಚ್​ ಬಿಟ್ಟಿದ್ದರು. ಈ ಪಂದ್ಯದಲ್ಲಿ ರೋಹಿತ್​​ ಮೊತ್ತ 102.


ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮಿಮ್ ಇಕ್ಬಾಲ್ ಕ್ಯಾಚ್​ ಬಿಟ್ಟಿದ್ದರು. ರೋಹಿತ್​ ಶತಕ ಬಾರಿಸುವುದು ಗ್ಯಾರಂಟಿ ಎಂದು ಅದಾಗಲೇ ಟ್ವಿಟ್ಟರ್​ನಲ್ಲಿ ಸಂಭ್ರಮಾಚರಣೆ ಶುರುವಾಗಿತ್ತು. ಆ ನಿರೀಕ್ಷೆಯನ್ನು ಸುಳ್ಳುಮಾಡದ ರೋಹಿತ್​ ಶರ್ಮಾ  104 ರನ್​ಗಳನ್ನು ಕಲೆಹಾಕಿದರು. ಹಾಗೇ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ನತಾನ್​ ಕೌಲ್ಟರ್ ನೈಲ್ ಕ್ಯಾಚ್​ ಕೈಬಿಟ್ಟಿದ್ದರು. ಈ ಪಂದ್ಯದಲ್ಲಿ​  57 ರನ್​ ಬಾರಿಸಿದ್ದರು.ನಿನ್ನೆಯ ಪಂದ್ಯದಲ್ಲಿ ರೋಹಿತ್​ ಶರ್ಮಾ ಶತಕ ಬಾರಿಸುತ್ತಿದ್ದಂತೆ ಟ್ವಿಟ್ಟರ್​ನಲ್ಲಿ ಟ್ರೋಲ್​ಗಳ ಸುರಿಮಳೆಯೇ ಎದ್ದಿದೆ. ನೀವೇನಾದರೂ ರೋಹಿತ್​ ಶರ್ಮಾ ಕ್ಯಾಚ್​ ಕೈಬಿಟ್ಟರೆ ಟ್ರೋಫಿಯನ್ನೇ ಕೈಬಿಟ್ಟಂತೆ ಎಂದು ಟ್ವಿಟ್ಟಿಗರು ಕಾಲೆಳೆದಿದ್ದಾರೆ.

First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading