ಬೇಸರದಲ್ಲಿದ್ದ ನನಗೆ-ಧೋನಿಗೆ ದ್ರಾವಿಡ್ ಸಿನಿಮಾ ತೋರಿಸಿದ್ದರು; ಇರ್ಫಾನ್​ ಪಠಾಣ್​

2007 ರಲ್ಲಿ ಬಾಂಗ್ಲಾ ವಿರುದ್ಧ ನಡೆದ ವಿಶ್ವಕಪ್​ನಲ್ಲಿ ಸೋಲುಂಡು ಕೂತಿದ್ದೆವು. ಎಲ್ಲವನ್ನು ಕಳೆದುಕೊಂಡವರಂತೆ ಇದ್ದೆವು. ಆ ಸಂದರ್ಭದಲ್ಲಿ ದ್ರಾವಿಡ್​​​ ಅವರು ನಮ್ಮನ್ನು ಸಿನಿಮಾ ನೋಡಲು ಕರೆದರು.

ಇರ್ಫಾನ್​ ಪಠಾಣ್​-ದ್ರಾವಿಡ್- ಧೋನಿ

ಇರ್ಫಾನ್​ ಪಠಾಣ್​-ದ್ರಾವಿಡ್- ಧೋನಿ

 • Share this:
  ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್​​ ಅವರು ರಾಹುಲ್​​ ದ್ರಾವಿಡ್​ ಅವರ ಜೊತೆ ಕಳೆದ ಸಮಯವನ್ನು ನೆನಪಸಿಕೊಂಡಿದ್ದಾರೆ. 2007ರ ವಿಶ್ವಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಸೋತು ಟೂರ್ನಿಯಿಂದ ಹೊರನಡೆದಿತ್ತು. ಇದು ತಂಡಕ್ಕೆ ದೊಡ್ಡ ಆಘಾತವನ್ನು ತಂದೊಂಡಿತ್ತು. ಆ ಕರಾಳ ನೆನಪಿನಿಂದ ತಂಡದ ಸದ್ಯಸ್ಯರನ್ನು ರಾಹುಲ್​ ದ್ರಾವಿಡ್ ಹೇಗೆ ಹೊರತಂದರು ಎಂದು ಇರ್ಫಾನ್​​ ಪಠಾಣ್ ಹೇಳಿದ್ದಾರೆ.

  ಹೆಚ್ಚಿನ ಕ್ರಿಕೆಟಿಗರು ಗಂಗೂಲಿ, ಅನಿಲ್ ಕುಂಬ್ಳೆ, ಧೋನಿ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ನನ್ನ ಪ್ರಕಾರ ದ್ರಾವಿಡ್ ಶ್ರೇಷ್ಠ ನಾಯಕರಾಗಿದ್ದರು ಎಂದು ಇರ್ಫಾನ್​ ಹೇಳಿದ್ದಾರೆ.

  ರಾಹುಲ್​ ಬಗ್ಗೆ ಯಾರು ಹೊಗಳಿ ಮಾತಾನಾಡಿಲ್ಲ. ಆದರೆ ನಮ್ಮ ಕಾಲದಲ್ಲಿ ಆಟಗಾರರ ನಡುವೆ ಸಂವಹನ ಚೆನ್ನಾಗಿತ್ತು. ಎಷ್ಟೋ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದೆವು ಎಂದರು.

  ಆದರೆ 2007 ರಲ್ಲಿ ಬಾಂಗ್ಲಾ ವಿರುದ್ಧ ನಡೆದ ವಿಶ್ವಕಪ್​ನಲ್ಲಿ ಸೋಲುಂಡು ಕೂತಿದ್ದೆವು. ಎಲ್ಲವನ್ನು ಕಳೆದುಕೊಂಡವರಂತೆ ಇದ್ದೆವು. ಆ ಸಂದರ್ಭದಲ್ಲಿ ದ್ರಾವಿಡ್​​​ ಅವರು ನಮ್ಮನ್ನು ಸಿನಿಮಾ ನೋಡಲು ಕರೆದರು. ಬೇಸರವನ್ನು ಕಳೆಯಲು ‘300‘ ಸಿನಿಮಾ ತೋರಿಸಿದರು.

  ನಂತರ ನನ್ನ ಮತ್ತು ಧೋನಿ ಜೊತೆಗೆ ರಾಹುಲ್​​ ಮಾತನಾಡಿದರು. ಇದುವೇ ಜಗತ್ತಿನ ಕೊನೆಯಲ್ಲ. ನೀವಿಬ್ಬರೂ ಸಾಕಷ್ಟು ಪಂದ್ಯಗಳನ್ನು ಆಡಿದ್ದೀರಿ. ಇನ್ನು ಮುಂದೆಯೂ ಆಡಲಿದ್ದೀರಿ. ಆದರೆ ಇಂದು ಮಾತ್ರ ನಮಗೆ ಕೆಟ್ಟದಿನವಾಗಿತ್ತು. ಮುಂದೆ ನೀವಿಬ್ಬರು ಅನೇಕ ಪಂದ್ಯಗಳನ್ನು ಆಡುವ ಮೂಲಕ ಟೀಂ ಇಂಡಿಯಾಗೆ ಜಯ ತಂದುಕೊಡಲಿದ್ದೀರಿ ಎಂದು ಹೇಳುತ್ತಾ ನಮ್ಮಲ್ಲಿ ಉತ್ಸುಕತೆ ತುಂಬಿದರು ಎಂದು ಇರ್ಫಾನ್ ಪಠಾಣ್​ ಹೇಳಿದ್ದಾರೆ.

  Rishab Shetty: ಅಂಡರ್​​ವರ್ಲ್ಡ್​ಗೆ​ ಕಾಲಿಟ್ಟ ಶೆಟ್ರು; ಭೂಗತ ದೊರೆ ಅಮರ್​ ಆಳ್ವ ಪಾತ್ರದಲ್ಲಿ ​​​ರಿಷಬ್
  First published: