ಶ್ರೀಲಂಕಾದಲ್ಲಿ ನಡೆಯುತ್ತಿರುವ ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ಎಲ್ಲರ ಗಮನ ಸೆಳೆಯುತ್ತಿದೆ. ಈ ಟೂರ್ನಿಯಲ್ಲಿ ಪಾಕಿಸ್ತಾನ, ವೆಸ್ಟ್ ಇಂಡೀಸ್, ಭಾರತ, ಶ್ರೀಲಂಕಾ, ಸೇರಿದಂತೆ ಹಲವು ರಾಷ್ಟ್ರಗಳ ಆಟಗಾರರು ಕಾಣಿಸಿಕೊಂಡಿರುವುದು ವಿಶೇಷ. ಅದರಲ್ಲೂ ಟೀಮ್ ಇಂಡಿಯಾ ಪರ ಆಡಿದ್ದ ಇರ್ಫಾನ್ ಪಠಾನ್, ಲಂಕಾದ ಸ್ಟಾರ್ ಕ್ರಿಕೆಟಿಗ ಏಂಜೆಲೊ ಮ್ಯಾಥ್ಯೂಸ್, ವೆಸ್ಟ್ ಇಂಡೀಸ್ನ ಆಂಡ್ರೆ ರಸ್ಸೆಲ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್, ಪಾಕಿಸ್ತಾನ ವೇಗಿ ಮೊಹಮ್ಮದ್ ಅಮೀರ್ ಸೇರಿದಂತೆ ಖ್ಯಾತನಾಮರು ಕೊರೋನಾ ಭೀತಿ ನಡುವೆಯೂ ಮೊದಲ ಆವೃತ್ತಿಯಲ್ಲೇ ಪಾಲ್ಗೊಂಡಿದ್ದಾರೆ. ಇನ್ನು ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರರು ಕೂಡ ಟೂರ್ನಿಯ ಭಾಗವಾಗಿದ್ದಾರೆ.
ಆದರೆ ಲಂಕಾ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ನಡೆದರೂ ಆಟಗಾರರಿಗೆ ನೀಡಲಾದ ವೇತನದ ಮಾಹಿತಿ ಎಲ್ಲೂ ಬಹಿರಂಗವಾಗಿರಲಿಲ್ಲ. ಅದರಲ್ಲೂ ಐಪಿಎಲ್ ಟೂರ್ನಿ ಬೆನ್ನಲ್ಲೇ ಎಲ್ಪಿಎಲ್ಗೆ ಚಾಲನೆ ಸಿಕ್ಕಿದ್ದರಿಂದ ಆಟಗಾರರ ವೇತನ ಕೂಡ ಚರ್ಚೆಗೆ ಕಾರಣವಾಗಿತ್ತು. ಆದರೀಗ ಎಲ್‌ಪಿಎಲ್ ಆಟಗಾರ ವೇತನದ ಮಾಹಿತಿ ಹೊರಬಿದ್ದಿದೆ. ಐಪಿಎಲ್ಗೆ ಹೋಲಿಸಿದರೆ ಕಡಿಮೆ ಮೊತ್ತವಾದರೂ, ಕೊರೋನಾ ಸಮಯದಲ್ಲಿ ಉತ್ತಮ ಮೊತ್ತ ನೀಡಿ ಟೂರ್ನಿ ಆಯೋಜಿಸುವಲ್ಲಿ ಎಲ್‌ಪಿಎಲ್ ಆಡಳಿತ ಮಂಡಳಿ ಯಶಸ್ವಿಯಾಗಿದೆ. ಹಾಗಿದ್ರೆ ಸ್ಟಾರ್ ಆಟಗಾರರ ವೇತನ ಎಷ್ಟಿದೆ ಎಂದು ನೋಡೋಣ.
60,000 ಯುಎಸ್ ಡಾಲರ್ (ಸುಮಾರು 44 ಲಕ್ಷ ರೂಪಾಯಿ): ದಸುನ್ ಶನಕ, ಕುಸಲ್ ಪೆರೆರಾ, ಏಂಜಲೊ ಮ್ಯಾಥ್ಯೂಸ್, ತಿಸಾರ ಪೆರೆರಾ
50,000 ಯುಎಸ್ ಡಾಲರ್ (ಸುಮಾರು 36.7 ಲಕ್ಷ ರೂ. ): ಲೆಂಡ್ಲ್ ಸಿಮನ್ಸ್, ಶಾಹಿದ್ ಅಫ್ರಿದಿ, ಮೊಹಮ್ಮದ್ ಹಫೀಝ್, ಇರ್ಫಾನ್ ಪಠಾಣ್, ಅಂಡ್ರೆ ರಸೆಲ್, ವಾನಿದು ಹಸರಂಗ ಡಿ' ಸಿಲ್ವಾ, ಡೇಲ್ ಸ್ಟೇನ್.
40,000 ಯುಎಸ್ ಡಾಲರ್ (ಸುಮಾರು 29.4 ಲಕ್ಷ ರೂ.): ಸುದೀಪ್ ತ್ಯಾಗಿ, ಹಝರತ್ ಉಲ್ಲಾ ಝಝಾಯ್, ಮನ್‌ಪ್ರೀತ್ ಸಿಂಗ್ ಗೂನಿ, ಶೊಯೇಬ್ ಮಲಿಕ್, ನಿರೋಷನ್ ಡಿಕ್ವೆಲ್ಲಾ, ದನುಷ್ಕ ಗುಣತಿಲಾಕ, ಕುಸಲ್ ಮೆಂಡಿಸ್, ಇಸರು ಉದಾನ, ಅವಿಷ್ಕಾ ಫರ್ನಾಂಡೊ.
25,000 ಯುಎಸ್ ಡಾಲರ್ (ಸುಮಾರು 18.4 ಲಕ್ಷ ರೂ.): ಸಮಿತ್ ಪಟೇಲ್, ಮೊಹಮ್ಮದ್ ಆಮಿರ್, ಜಾನ್ಸನ್ ಚಾರ್ಲ್ಸ್, ಉಝ್ಮಾನ್ ಶಿನ್ವಾರಿ, ಲಾಹಿರು ಕುಮಾರ, ಭನುಕಾ ರಾಜಪಕ್ಸ, ನುವಾನ್ ಪ್ರದೀಪ್, ದಿನೇಶ್ ಚಾಂದಿಮಾಲ್, ಧನಂಜಯ ಡಿ'ಸಿಲ್ವಾ, ಓಷಾದಾ ಫರ್ನಾಂಡೊ, ಅಖಿಲ ಧನಂಜಯ, ಸೀಕುಗೆ ಪ್ರಸನ್ನ, ಅಮಿಲಾ ಅಪೊನ್ಸೊ, ಸುರಂಗ ಲಕ್ಷಮಲ್, ಕಸುನ್ ರಜಿತ, ಮಿಲಿಂಡ ಸಿರಿವರ್ಧನೆ, ಅಸೆಲಾ ಗುಣರತ್ನೆ, ಆಶಾನ್ ಪ್ರಿಯಾಂಜನ್, ಬಿನುರಾ ಫರ್ನಾಂಡೊ. ಇನ್ನುಳಿದ ಅಂತರಾಷ್ಟ್ರೀಯ ಆಟಗಾರರಿಗೆ ಸುಮಾರು 11.6 ಲಕ್ಷ ರೂ. ನೀಡಲಾಗಿದೆ. ಹಾಗೆಯೇ ಯುವ ಆಟಗಾರರಿಗೆ 2.2 ಲಕ್ಷ ರೂ. ನೀಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ