HOME » NEWS » Sports » CRICKET HOW MANY TIMES VIRAT KOHLI RUN OUT IN TEST CRICKET ZP

Virat Kohli: ಹಾಗೆ...ವಿರಾಟ್ ಕೊಹ್ಲಿ ಹೀಗೂ ಔಟಾದರು..!

69 ಬಾರಿ ಕ್ಯಾಚ್ ನೀಡಿ ಇನಿಂಗ್ಸ್ ಅಂತ್ಯಗೊಳಿಸಿದ್ದರು. ಸ್ಲಿಪ್ ಕ್ಯಾಚ್ ಹಾಗೂ ಕೀಪರ್​ ಕ್ಯಾಚ್​ಗಳ ಮೂಲಕ ಔಟಾಗಿದ್ದು 27 ಬಾರಿ. ಹಾಗೆಯೇ ಬೌಲರುಗಳು 30 ಬಾರಿ ಕೊಹ್ಲಿಯನ್ನು ಎಲ್​ಬಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

news18-kannada
Updated:December 17, 2020, 5:49 PM IST
Virat Kohli: ಹಾಗೆ...ವಿರಾಟ್ ಕೊಹ್ಲಿ ಹೀಗೂ ಔಟಾದರು..!
Virat Kohli
  • Share this:
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿ ಅಡಿಲೇಡ್​ನಲ್ಲಿ ಶುರುವಾಗಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಾಯಕನ ನಿರೀಕ್ಷೆಗೆ ತಕ್ಕಂತಹ ಬ್ಯಾಟಿಂಗ್ ಪ್ರದರ್ಶನ ಟೀಮ್ ಇಂಡಿಯಾ ಆಟಗಾರರಿಂದ ಮೂಡಿ ಬಂದಿರಲಿಲ್ಲ. ಪರಿಣಾಮ ಮೊದಲ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿದೆ.

ಇದಕ್ಕೂ ಮುನ್ನ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಮೊದಲ ಓವರ್​ನ 2ನೇ ಎಸೆತದಲ್ಲೇ ಗೋಲ್ಡನ್ ಡಕ್​ನೊಂದಿಗೆ ಮರಳಿದ್ದರು. ಇದರ ಬೆನ್ನಲ್ಲೇ 17 ರನ್​ಗಳಿಸಿ ಮಯಾಂಕ್ ಅಗರ್ವಾಲ್ ಕೂಡ ಪೆವಿಲಿಯನ್ ಕಡೆ ಮುಖ ಮಾಡಿದರು. ಈ ಹಂತದಲ್ಲಿ ಜೊತೆಗೂಡಿದ ಚೇತೇಶ್ವರ್ ಪೂಜಾರ ಹಾಗೂ ನಾಯಕ ಕೊಹ್ಲಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ತಂಡದ ಮೊತ್ತ 100 ಆಗಿದ್ದ ವೇಳೆ ಪೂಜಾರ(43) ಲಿಯಾನ್​ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಕ್ರೀಸ್​ಗೆ ಇಳಿದ ಉಪನಾಯಕ ಅಜಿಂಕ್ಯ ರಹಾನೆ ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಅಲ್ಲದೆ 4ನೇ ವಿಕೆಟ್​ಗೆ 88 ರನ್​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಅಜಿಂಕ್ಯ ರಹಾನೆ ಮಾಡಿದ ತಪ್ಪಿನಿಂದಾಗಿ ವಿರಾಟ್ ಕೊಹ್ಲಿ ರನೌಟ್ ಆದರು. ಇದರೊಂದಿಗೆ ಕೊಹ್ಲಿ ಚೊಚ್ಚಲ ಬಾರಿ ಟೆಸ್ಟ್​ ಕ್ರಿಕೆಟ್​ನಲ್ಲಿ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.ಈ ವೇಳೆಗೆ ಕೊಹ್ಲಿ 180 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 74 ರನ್ ಬಾರಿಸಿದ್ದರು. ಇನ್ನೇನು 26 ರನ್​ಗಳೊಂದಿಗೆ ಮತ್ತೊಂದು ಶತಕದ ದಾಖಲೆ ಬರೆಯಲಿದ್ದಾರೆ ಅನ್ನುವಾಗಲೇ ರನೌಟ್​ಗೆ ಬಲಿಯಾದರು. 145ನೇ ಟೆಸ್ಟ್ ಇನಿಂಗ್ಸ್​ ಆಡಿರುವ ವಿರಾಟ್ ಕೊಹ್ಲಿ 10 ಬಾರಿ ಅಜೇಯರಾಗಿ ಉಳಿದಿದ್ದಾರೆ. ಅಲ್ಲದೆ 7 ಬಾರಿ ಕ್ಲೀನ್ ಬೌಲ್ಡ್ ಆಗಿದ್ದರು.

ಇನ್ನು 69 ಬಾರಿ ಕ್ಯಾಚ್ ನೀಡಿ ಇನಿಂಗ್ಸ್ ಅಂತ್ಯಗೊಳಿಸಿದ್ದರು. ಸ್ಲಿಪ್ ಕ್ಯಾಚ್ ಹಾಗೂ ಕೀಪರ್​ ಕ್ಯಾಚ್​ಗಳ ಮೂಲಕ ಔಟಾಗಿದ್ದು 27 ಬಾರಿ. ಹಾಗೆಯೇ ಬೌಲರುಗಳು 30 ಬಾರಿ ಕೊಹ್ಲಿಯನ್ನು ಎಲ್​ಬಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಒಂದು ಬಾರಿ ಹಿಟ್ ವಿಕೆಟ್ ಆಗಿ ಕೂಡ ನಿರ್ಗಮಿಸಿದ್ದರು. ಆದರೆ ಇದುವರೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿ ರನೌಟ್ ಆಗಿರಲಿಲ್ಲ.

ಆದರೆ ಗುರುವಾರ ನಡೆದ ಪಿಂಕ್ ಬಾಲ್ ಟೆಸ್ಟ್​ನಲ್ಲಿ 22ನೇ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ ಅನಾವಶ್ಯಕ ರನೌಟ್​ಗೆ ಬಲಿಯಾದರು. ಈ ಮೂಲಕ ಟೆಸ್ಟ್​ನಲ್ಲೂ ರನೌಟ್ ಆದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಸ್ಥಾನ ಪಡೆದರು.
Published by: zahir
First published: December 17, 2020, 5:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories