HOME » NEWS » Sports » CRICKET HOW ENGLAND WON THE WORLD CUP 2019 EVEN AFTER SUPER OVER TIE ZP

ವಿಶ್ವಕಪ್ ಫೈನಲ್: ಎರಡು ಬಾರಿ ಟೈ ಆದರೂ ಇಂಗ್ಲೆಂಡ್ ಗೆದ್ದಿದ್ದು ಹೇಗೆ?

#WeAreEngland : ಈ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಮುಂದಿದ್ದರಿಂದ ವಿಶ್ವ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ಹಾಗೆಯೇ ವಿರೋಚಿತ ಹೋರಾಟ ನಡೆಸಿದ ನ್ಯೂಜಿಲೆಂಡ್ ಅತ್ತ ಗೆಲ್ಲದೇ-ಇತ್ತ ಸೋಲದೇ ರನ್ನರ್​ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.

zahir | news18
Updated:July 15, 2019, 3:25 PM IST
ವಿಶ್ವಕಪ್ ಫೈನಲ್: ಎರಡು ಬಾರಿ ಟೈ ಆದರೂ ಇಂಗ್ಲೆಂಡ್ ಗೆದ್ದಿದ್ದು ಹೇಗೆ?
ಒಟ್ಟಾರೆ ನ್ಯೂಜಿಲೆಂಡ್ ಟಿ20 ಕ್ರಿಕೆಟ್​ನಲ್ಲಿ 8 ಬಾರಿ ಸೂಪರ್​ ಓವರ್​ನಲ್ಲಿ ಕಣಕ್ಕಿಳಿದಿದೆ. ಇದರಲ್ಲಿ 7 ಬಾರಿ ಸೋಲುಂಡಿದೆ. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸೂಪರ್ ಓವರ್ ಆಡಿದ ತಂಡವೆಂಬ ದಾಖಲೆ ನ್ಯೂಜಿಲೆಂಡ್ ಹೆಸರಿನಲ್ಲಿದೆ. ಅದರೊಂದಿಗೆ ದಕ್ಷಿಣ ಆಫ್ರಿಕಾ ಹೆಸರಿನಲ್ಲಿದ್ದ ಚೋಕರ್ಸ್ ಎಂಬ ಹಣೆಪಟ್ಟಿ ಇದೀಗ ಕಿವೀಸ್ ಪಾಲಾಗಿದೆ.
  • News18
  • Last Updated: July 15, 2019, 3:25 PM IST
  • Share this:
ಭಾನುವಾರ ಕ್ರಿಕೆಟ್​ ಕಾಶಿ ಲಾರ್ಡ್ಸ್​ ಮೈದಾನ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ರೋಚಕ ಫೈನಲ್​ಗೆ ಸಾಕ್ಷಿಯಾಯಿತು. ನ್ಯೂಜಿಲೆಂಡ್ ನೀಡಿದ 241 ರನ್​ಗಳನ್ನು ಚೇಸ್ ಮಾಡಿದ ಇಂಗ್ಲೆಂಡ್ ತಂಡ ಸಮಬಲ ಸಾಧಿಸಿತು. ಈ ಹಿನ್ನೆಲೆಯಲ್ಲಿ ವರ್ಲ್ಡ್​ಕಪ್​ ಫೈನಲ್ ಪಂದ್ಯದಲ್ಲಿ  ಸೂಪರ್ ಓವರ್ ಆಡಿಸಲಾಯಿತು​ . ಇಲ್ಲೂ 15 ರನ್​ಗಳು ಟೈ ಆಗಿದ್ದರಿಂದ ಇಂಗ್ಲೆಂಡ್ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತು. ಅತ್ತ ಸೋಲದೇ ಇತ್ತ ಗೆಲ್ಲದೇ ಇದ್ದ ನ್ಯೂಜಿಲೆಂಡ್ ವಿರುದ್ಧ ಆಂಗ್ಲರು ಗೆದ್ದಿದ್ದಾರು ಹೇಗೆ? ಎಂಬ ಪ್ರಶ್ನೆಗಳು ಕ್ರಿಕೆಟ್​ ಪ್ರೇಮಿಗಳಲ್ಲಿ ಹುಟ್ಟಿಕೊಂಡವು.

ನಾಟಕೀಯತೆಯಿಂದ ಕೂಡಿದ್ದ ಫೈನಲ್​ ಪಂದ್ಯವು ಎರಡು ಬಾರಿ ಟೈ ಆಗಿದ್ದರಿಂದ ಐಸಿಸಿ ನಿಯಮದ ಪ್ರಕಾರ ಗೆಲುವನ್ನು ಬೌಂಡರಿಗಳ ಲೆಕ್ಕಾಚಾರದಲ್ಲಿ ನಿರ್ಣಯಿಸಲಾಗುತ್ತದೆ. ಅಂದರೆ ಇನಿಂಗ್ಸ್​ವೊಂದರಲ್ಲಿ ಯಾವ ತಂಡ ಹೆಚ್ಚು ಬೌಂಡರಿ(ಫೋರ್+ಸಿಕ್ಸ್) ಬಾರಿಸಿದೆಯೋ ಆ ತಂಡವನ್ನು ವಿಜಯಿ ಎನ್ನಲಾಗುತ್ತದೆ. ಅದರಂತೆ ಭಾನುವಾರ ನಡೆದ ಫೈನಲ್​ನಲ್ಲಿ ಅದೃಷ್ಟ ಲಕ್ಷ್ಮಿ ಇಂಗ್ಲೆಂಡ್ ಪರವಾಗಿತ್ತು.

ಎರಡನೇ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಒಟ್ಟು 26ಗಳನ್ನು ಬಾರಿಸಿದ್ದರು. ಅದರೊಂದಿಗೆ ಸೂಪರ್ ಓವರ್​ನಲ್ಲಿ ಆಂಗ್ಲರು ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದರು. ಇನ್ನು ನ್ಯೂಜಿಲೆಂಡ್ ಸೂಪರ್ ಓವರ್​ನಲ್ಲಿ ಒಂದು ಸಿಕ್ಸ್ ಸಿಡಿಸಿದರೆ, ಮೊದಲ ಇನಿಂಗ್ಸ್​ನಲ್ಲಿ 16 ಬೌಂಡರಿ ಬಾರಿಸಿತ್ತು. ಇಲ್ಲಿ ಇಂಗ್ಲೆಂಡ್ 28 ಬೌಂಡರಿ ಬಾರಿಸಿದ್ದರೆ, ನ್ಯೂಜಿಲೆಂಡ್ ಒಟ್ಟು 17 ಬೌಂಡರಿಗಳಿಸಿದ್ದರು. ಈ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಮುಂದಿದ್ದರಿಂದ ವಿಶ್ವ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ಹಾಗೆಯೇ ವಿರೋಚಿತ ಹೋರಾಟ ನಡೆಸಿದ ನ್ಯೂಜಿಲೆಂಡ್ ಅತ್ತ ಗೆಲ್ಲದೇ-ಇತ್ತ ಸೋಲದೇ ರನ್ನರ್​ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.

Youtube Video
First published: July 15, 2019, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories