ಈ ಪವಾಡ ನಡೆದರೆ ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ..!

ICC Cricket World cup 2019: ಇದರ ಹೊರತಾಗಿ ಲಾರ್ಡ್ಸ್​ ಮೈದಾನದಲ್ಲಿ ಪವಾಡವೊಂದು ನಡೆದರೆ ಪಾಕಿಸ್ತಾನ ಮುಂದಿನ ಹಂತಕ್ಕೆ ತಲುಪಲಿದೆ. ಹಾಗೆಯೇ ಟೀಂ ಇಂಡಿಯಾ ವಿರುದ್ಧ ಮತ್ತೊಮ್ಮೆ ಕಣಕ್ಕಿಳಿಯುವ ಅವಕಾಶ ಪಾಕ್​ಗೆ ಸಿಗಲಿದೆ.

zahir | news18
Updated:July 4, 2019, 6:00 PM IST
ಈ ಪವಾಡ ನಡೆದರೆ ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ..!
ಪಾಕಿಸ್ತಾನ
  • News18
  • Last Updated: July 4, 2019, 6:00 PM IST
  • Share this:
ಐಸಿಸಿ ವಿಶ್ವಕಪ್ ಕ್ರಿಕೆಟ್​ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಆಸ್ಟ್ರೇಲಿಯಾ, ಭಾರತ ಮತ್ತು ಇಂಗ್ಲೆಂಡ್ ಸೆಮಿ ಫೈನಲ್​ಗೇರಿದೆ. ಇನ್ನು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ನ್ಯೂಜಿಲೆಂಡ್​ ತಂಡ ಅಲಂಕರಿಸಿದೆ. ಇದರ ನಡುವೆ ಐದನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕೆ ಸೆಮಿ ಫೈನಲ್​ಗೇರುವ ಅವಕಾಶವಿದೆಯೇ ಎಂಬ ಲೆಕ್ಕಾಚಾರಗಳು ಪ್ರಾರಂಭವಾಗಿದೆ.

ಬುಧವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಗೆದ್ದಿದ್ದರೆ​ ಪಾಕ್ ತಂಡ ಸುಲಭವಾಗಿ ಸೆಮಿಗೇರುವ ಅವಕಾಶವಿತ್ತು. ಆದರೆ ಪಾಕ್ ಅಭಿಮಾನಿಗಳ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸಿತು. ನಿನ್ನೆಯವರೆಗೆ ಮೂರು ಅವಕಾಶಗಳ ಮೂಲಕ ಸೆಮಿ ಫೈನಲ್​ ಪಂದ್ಯವಾಡುವ ಚಾನ್ಸ್​ವೊಂದು ಪಾಕ್ ಮುಂದಿತ್ತು.

ಆದರೆ ಆಂಗ್ಲರ ಗೆಲುವು ಇದೀಗ ಪಾಕ್ ಮುಂದೆ ಒಂದು ಭರ್ಜರಿ ಗೆಲುವಿನ ಬಾಗಿಲನ್ನು ಮಾತ್ರ ತೆರೆದಿಟ್ಟಿದೆ. 9 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಸರ್ಫರಾಜ್ ಪಡೆ ಜಯಗಳಿಸಿದರೆ 11 ಅಂಕಗಳಿಸಲಿದೆ.

ಅತ್ತ ಇಷ್ಟೇ ಅಂಕಗಳೊಂದಿಗೆ ನ್ಯೂಜಿಲೆಂಡ್ ತಂಡವು ನಾಲ್ಕನೇ ಸ್ಥಾನವನ್ನು ಅಲಕಂರಿಸಿದೆ. ಈ ವೇಳೆ ರನ್​ರೇಟ್​ ಲೆಕ್ಕಾಚಾರದ ಮೂಲಕ ಸೆಮಿ ಫೈನಲ್​ಗೆ ಪ್ರವೇಶಿಸುವ ಅವಕಾಶವೊಂದು ಪಾಕ್ ಬಳಗಕ್ಕೆ ದೊರೆಯಲಿದೆ. ಆದರೆ ಪ್ರಸ್ತುತ ನ್ಯೂಜಿಲೆಂಡ್ ರನ್​ರೇಟ್ +0.175 ಇದ್ದು, ಪಾಕಿಸ್ತಾನದ ರನ್​ರೇಟ್ -0.792 ಇದೆ. ಇದುವೇ ಪಾಕ್ ತಂಡಕ್ಕೆ ಮುಳುವಾಗಲಿದೆ. ಇದರ ಹೊರತಾಗಿಯು ಪವಾಡವೊಂದು ನಡೆದರೆ ಸರ್ಫರಾಜ್ ಟೀಂ ಸೆಮಿ ಫೈನಲ್ ಪ್ರವೇಶಿಸುವುದು ಬಹುತೇಕ ಖಚಿತ.

ಸೆಮಿ ಫೈನಲ್​ಗೇರಲು ಪಾಕ್​ಗೆ ಇರುವ ಕೊನೆಯ ಅವಕಾಶ:
ಶುಕ್ರವಾರ ಲಾರ್ಡ್ಸ್​ನಲ್ಲಿ ನಡೆಯಲಿರುವ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪಾಕ್ ಭರ್ಜರಿ ಜಯ ಸಾಧಿಸಿದರೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲಿದೆ. ಆದರೆ ಗೆಲುವಿನ ಅಂತರ ಕೂಡ ಇಲ್ಲಿ ಪರಿಗಣನೆ ಬರಲಿದೆ.

* ಪಾಕಿಸ್ತಾನ 350 ರನ್​ ಸಿಡಿಸಿ, ಬಾಂಗ್ಲಾವನ್ನು 39 ರನ್​ಗಳಿಗೆ ಆಲೌಟ್ ಮಾಡಬೇಕು. ಅಂದರೆ 311 ರನ್​ಗಳಿಂದ ಜಯಗಳಿಸಿದರೆ ಸೆಮಿ ಫೈನಲ್​ಗೆ ಏರಬಹುದು.* ಇನ್ನು 400 ರನ್ ಬಾರಿಸಿ, ಬಾಂಗ್ಲಾದೇಶವನ್ನು 84 ರನ್​ಗಳಿಗೆ ಕಟ್ಟಿ ಹಾಕಬೇಕು. ಈ ಮೂಲಕ 316 ರನ್‌ ಅಂತರ ಗೆಲುವು ಸಾಧಿಸಿ ರನ್​ರೇಟ್ ಏರಿಸಿಕೊಳ್ಳಬಹುದು.

*  ಹಾಗೆಯೇ 450 ರನ್​ ಗಳಿಸಿ ಬಾಂಗ್ಲಾದೇಶವನ್ನು 129 ರನ್​ಗಳಿಗೆ ನಿಯಂತ್ರಿಸಿದರೂ ಸಹ ಸೆಮಿ ಫೈನಲ್​ಗೇರಬಹುದು. ಅಂದರೆ 321 ರನ್​ಗಳ ಭರ್ಜರಿ ಜಯ ಸಾಧಿಸಬೇಕು.

ಇಲ್ಲಿ ಬೃಹತ್ ಅಂತರದ ಗೆಲುವು ಪಾಕ್ ರನ್​ರೇಟನ್ನು ಏರಿಸಲಿದೆ. ಇದರಿಂದ ನ್ಯೂಜಿಲೆಂಡ್​ ಅನ್ನು ಹಿಂದಿಕ್ಕಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸುವ ಅವಕಾಶ ಪಾಕ್​ಗೆ ಒದಗಲಿದೆ. ಆದರೆ ಇಂತಹದೊಂದು ಅಂತರದ ಗೆಲುವು ವಿಶ್ವ ಕ್ರಿಕೆಟ್​ನಲ್ಲೇ ಹೊಸ ಇತಿಹಾಸ ಬರೆಯಲಿದೆ.

ಪ್ರಸ್ತುತ ಬಾಂಗ್ಲಾದೇಶ ತಂಡವು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇದರಿಂದ ಪಾಕ್ ಸೆಮಿ ಫೈನಲ್ ಆಸೆ ಕನಸು ಎನ್ನಬಹುದು. ಇದರ ಹೊರತಾಗಿ ಲಾರ್ಡ್ಸ್​ ಮೈದಾನದಲ್ಲಿ ಪವಾಡವೊಂದು ನಡೆದರೆ ಪಾಕಿಸ್ತಾನ ಮುಂದಿನ ಹಂತಕ್ಕೆ ತಲುಪಲಿದೆ. ಹಾಗೆಯೇ ಟೀಂ ಇಂಡಿಯಾ ವಿರುದ್ಧ ಮತ್ತೊಮ್ಮೆ ಕಣಕ್ಕಿಳಿಯುವ ಅವಕಾಶ ಪಾಕ್​ಗೆ ಸಿಗಲಿದೆ.

ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಶ್ರೀಲಂಕಾ ವಿರುದ್ದ ಜಯ ಸಾಧಿಸಿದರೆ ಅಗ್ರಸ್ಥಾನಕ್ಕೇರಲಿದೆ. ಹಾಗೆಯೇ ಪ್ರಸ್ತುತ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ದ ಸೋಲನುಭವಿಸಬೇಕು.

ಏಕೆಂದರೆ ಸೆಮಿ ಫೈನಲ್ ಹಂತದಲ್ಲಿ ನಂಬರ್ 1 ತಂಡ ಹಾಗೂ ನಂಬರ್ 4 ತಂಡವನ್ನು ಎದುರಿಸಲಿದೆ. ಅಂದರೆ ಮೇಲೆ ತಿಳಿಸಲಾದ ಲೆಕ್ಕಾಚಾರಗಳು ನಡೆದರೆ ಭಾರತ ಮತ್ತು ಪಾಕಿಸ್ತಾನ ನಡುವಣ ರೋಚಕ ಹೋರಾಟಕ್ಕೆ ವಿಶ್ವವೇ ಸಾಕ್ಷಿಯಾಗಲಿದೆ.

First published: July 4, 2019, 5:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading