• Home
  • »
  • News
  • »
  • sports
  • »
  • T20 World Cup Ind Vs Pak: ಸ್ಪೈಡರ್ ಕ್ಯಾಮ್​ನಿಂದ ಭಾರತಕ್ಕೆ ಕೈತಪ್ಪಿದ ವಿಕೆಟ್, ಇಲ್ಲಿದೆ ವಿಡಿಯೋ!

T20 World Cup Ind Vs Pak: ಸ್ಪೈಡರ್ ಕ್ಯಾಮ್​ನಿಂದ ಭಾರತಕ್ಕೆ ಕೈತಪ್ಪಿದ ವಿಕೆಟ್, ಇಲ್ಲಿದೆ ವಿಡಿಯೋ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದರ ಮಧ್ಯೆ ಸ್ಪೈಡರ್ ಕ್ಯಾಮ್ ಕೇಬಲ್ ನಿಂದಾಗಿ ಭಾರತಕ್ಕೆ ಸಿಗಬಹುದಾದಂತಹ ಒಂದು ವಿಕೆಟ್ ಅನ್ನು ತಪ್ಪಿಸಿಕೊಂಡಿತು ಅಂತ ಪಂದ್ಯ ನೋಡಿದ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಹೌದು..ಗಾಳಿಯಲ್ಲಿರುವ ಬೌಲ್ ಕೇಬಲ್ ಗೆ ತಾಕಿ ದೂರ ಹೋಗಬೇಕಿದ್ದ ಚೆಂಡು ಹತ್ತಿರವೇ ಬಿತ್ತು. ಇದನ್ನು ನೋಡಿದ ಹಾರ್ದಿಕ್ ಪಾಂಡ್ಯ ಜೋರಾಗಿ ಕಿರುಚಿದರು. ನಾಯಕ ರೋಹಿತ್ ಶರ್ಮಾ ಕೂಡ ಹತಾಶೆ ವ್ಯಕ್ತ ಪಡಿಸಿದರು

ಮುಂದೆ ಓದಿ ...
  • Trending Desk
  • Last Updated :
  • New Delhi, India
  • Share this:

    ಭಾನುವಾರ ಸಂಜೆ ಭಾರತ ಕ್ರಿಕೆಟ್(Team India) ತಂಡದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ಅವರು ಇಡೀ ಭಾರತದ ಜನರಿಗೆ ತಮ್ಮ ಅಮೋಘವಾದ ಪ್ರದರ್ಶನದಿಂದ ಕಟ್ಟಾ ಎದುರಾಳಿ ಪಾಕಿಸ್ತಾನದ ವಿರುದ್ಧ 4 ವಿಕೆಟ್ ಜಯವನ್ನು ತಂದು ಕೊಡುವುದರ ಮೂಲಕ ದೀಪಾವಳಿ (Deepavali) ಬ್ಬದ ಉಡುಗೊರೆ ನೀಡಿದರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಪ್ರತಿಯೊಂದು ಚೆಂಡನ್ನು ಸಹ ಕ್ರಿಕೆಟ್ ಅಭಿಮಾನಿಗಳು ತುಂಬಾನೇ ಗಮನವಿಟ್ಟು ನೋಡಿರುತ್ತಾರೆ ಅಂತ ಹೇಳಬಹುದು. ಒಟ್ಟಿನಲ್ಲಿ ಪಾಕಿಸ್ತಾನ (Pakistan)ಕ್ರಿಕೆಟ್ ತಂಡವು ನೀಡಿದ 159 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡದ ಆಟಗಾರರು ಕೊನೆಯ ಎಸೆತದಲ್ಲಿ ಜಯವನ್ನು ತಂದುಕೊಟ್ಟರು. ಒಟ್ಟಿನಲ್ಲಿ ಅಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅಬ್ಬರಕ್ಕೆ ಮನಸೋಲದವರು ಯಾರೂ ಇರಲಿಕ್ಕಿಲ್ಲ.


    ಭಾರತಕ್ಕೆ ಗೆಲುವು ತಂದು ಕೊಟ್ಟಿತು ವಿರಾಟ್ ಇನ್ನಿಂಗ್ಸ್


    ವಿರಾಟ್ ಅವರು 82 ರನ್ ಗಳನ್ನು ಗಳಿಸಿ 2022 ರ ಟ್ವೆಂಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಮೊದಲನೇ ಜಯ ತಂದುಕೊಟ್ಟರು. ಎರಡು ತಂಡದ ಬೌಲರ್ ಗಳು ಎಸೆದ ಪ್ರತಿಯೊಂದು ಚೆಂಡು ಮತ್ತು ಬ್ಯಾಟ್ಸ್ಮನ್ ಹೊಡೆದ ಪ್ರತಿ ಹೊಡೆತವು ಸಹ ಕ್ರೀಡಾಭಿಮಾನಿಗಳ ಗಮನ ಸೆಳೆದವು ಅಂತ ಹೇಳಬಹುದು.


    ಭಾರತವು ಬೇಗನೆ 4 ವಿಕೆಟ್ ಗಳನ್ನು ಕಳೆದುಕೊಂಡು ರನ್ ಗಳನ್ನು ಗಳಿಸಲು ಸ್ವಲ್ಪ ಹೆಣಗಾಡುತ್ತಿರುವಾಗ ಹಾರ್ದಿಕ್ ಪಾಂಡ್ಯ ಅವರೊಂದಿಗೆ ನಿರ್ಮಿಸಿದ ಮ್ಯಾಚ್ ವಿನ್ನಿಂಗ್ ಜೊತೆಯಾಟವು ಅಭಿಮಾನಿಗಳಿಗೆ ಭರವಸೆ ನೀಡಿತು ಎಂದು ಹೇಳಬಹುದು. ಪಂದ್ಯದಲ್ಲಿ ಅನೇಕ ಅವಕಾಶಗಳನ್ನು ಭಾರತದ ಆಟಗಾರರು ಕೈಚೆಲ್ಲಿದರು ಮತ್ತು ಪಾಕಿಸ್ತಾನದ ಆಟಗಾರರು ಸಹ ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಲ್ಲಿ ವಿಫಲವಾದರು ಅಂತ ಹೇಳಬಹುದು.


    ಇದನ್ನೂ ಓದಿ: ವಿರಾಟ್​ ವಿಶ್ವರೂಪಕ್ಕೆ ಫ್ಯಾನ್ಸ್​ ಫಿದಾ, ಕೊಹ್ಲಿ ಆಟಕ್ಕೆ ಮನಸೋತ ಜೂನಿಯರ್​ ಎನ್​ಟಿಆರ್!


    ಸ್ಪೈಡರ್ ಕ್ಯಾಮ್ ಕೇಬಲ್ ನಿಂದಾಗಿ ಕೈತಪ್ಪಿದ ವಿಕೆಟ್


    ಇದರ ಮಧ್ಯೆ ಸ್ಪೈಡರ್ ಕ್ಯಾಮ್ ಕೇಬಲ್ ನಿಂದಾಗಿ ಭಾರತಕ್ಕೆ ಸಿಗಬಹುದಾದಂತಹ ಒಂದು ವಿಕೆಟ್ ಅನ್ನು ತಪ್ಪಿಸಿಕೊಂಡಿತು ಅಂತ ಪಂದ್ಯ ನೋಡಿದ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಹೌದು..ಗಾಳಿಯಲ್ಲಿರುವ ಬೌಲ್ ಕೇಬಲ್ ಗೆ ತಾಕಿ ದೂರ ಹೋಗಬೇಕಿದ್ದ ಚೆಂಡು ಹತ್ತಿರವೇ ಬಿತ್ತು. ಇದನ್ನು ನೋಡಿದ ಹಾರ್ದಿಕ್ ಪಾಂಡ್ಯ ಜೋರಾಗಿ ಕಿರುಚಿದರು. ನಾಯಕ ರೋಹಿತ್ ಶರ್ಮಾ ಕೂಡ ಹತಾಶೆ ವ್ಯಕ್ತ ಪಡಿಸಿದರು ಮತ್ತು ಡೆಡ್ ಬಾಲ್ ಅಂತ ಅಂಪೈರ್ ಅವರಿಗೆ ಕೇಳಿದರು. ಹಾಗೆಯೇ ಮೈದಾನದಲ್ಲಿದ್ದ ಅನೇಕ ಭಾರತೀಯ ಆಟಗಾರರು ಸಹ ಇದನ್ನು ನೋಡಿ ಹತಾಶೆಗೊಂಡರು.


    ಸ್ಪೈಡರ್ ಕ್ಯಾಮ್ ಕೇಬಲ್ ಪಾಕಿಸ್ತಾನ್ ಕ್ರಿಕೆಟ್ ತಂಡದ ಬ್ಯಾಟ್ಸ್ಮನ್ ಶಾನ್ ಮಸೂದ್ ಅವರನ್ನು ಔಟ್ ಮಾಡುವ ಸಮರ್ಥನೀಯ ಕ್ಯಾಚ್ ಅವಕಾಶವನ್ನು ತಪ್ಪಿಸಿತು ಅಂತ ಹೇಳಬಹುದು. ಅಶ್ವಿನ್ ಅವರು ಎಸೆದ ಚೆಂಡನ್ನು ಜೋರಾಗಿ ಗಾಳಿಯಲ್ಲಿ ಬೀಸುತ್ತಾರೆ. ಆ ಚೆಂಡು ಕವರ್ಸ್ ಮೇಲೆ ಹೋಗುತ್ತಿತ್ತು, ಅದನ್ನು ನೋಡಿ ಕೊಹ್ಲಿ ಅವರು ಹಿಂದೆಯಿಂದ ಜೋರಾಗಿ ಓಡಿ ಬಂದರು. ಆದರೆ ಆ ಚೆಂಡು ಮಧ್ಯದಲ್ಲಿಯೇ ಕೇಬಲ್ ಮೇಲೆ ಬಿದ್ದು ನೇರವಾಗಿ ಕೆಳಕ್ಕೆ ಬಿತ್ತು.


    ಆ ಚೆಂಡನ್ನು ಡೆಡ್ ಬಾಲ್ ಎಂದ ಅಂಪೈರ್


    ಅಂಪೈರ್ ಇದನ್ನು ಡೆಡ್ ಬಾಲ್ ಅಂತ ಸೂಚಿಸಿದರು, ಆದರೆ ಪಾಂಡ್ಯ ಮತ್ತು ರೋಹಿತ್ ಅವರಿಗೆ ಇದರ ಬಗ್ಗೆ ತುಂಬಾನೇ ಕಳವಳವಿತ್ತು ಅಂತ ಹೇಳಬಹುದು. ರೋಹಿತ್ ಕೋಪದಿಂದ ಕೈ ಕುಲುಕಿ ಸ್ಪೈಡರ್ ಕ್ಯಾಮ್ ಅನ್ನು ಮತ್ತಷ್ಟು ದೂರ ಸರಿಸುವಂತೆ ಸೂಚಿಸಿದರು. ಪಾಂಡ್ಯ ಕೂಡ ಅದಕ್ಕೆ ಬೈದು ಮುಂದಕ್ಕೆ ಸರಿಸಲು ಹೇಳಿದರು. ನಂತರ ಅಂಪೈರ್ ತಮ್ಮೆರಡು ಕೈಗಳನ್ನು ಅದರತ್ತ ತೋರಿಸಿ ದೂರಕ್ಕೆ ಸರಿಸಲು ಹೇಳಿದರು. ಆಗ ಮಸೂದ್ 31 ರನ್ ಗಳಿಸಿದ್ದರು ಮತ್ತು ಅದು 15ನೇ ಓವರ್ ಆಗಿತ್ತು.


    ಇದನ್ನೂ ಓದಿ: ಹಾರ್ದಿಕ್ ಅಬ್ಬರಕ್ಕೆ ಪತರುಗುಟ್ಟಿದ ಪಾಕ್, ಅಪರೂಪದ ದಾಖಲೆ ಮಾಡಿದ ಏಕೈಕ ಭಾರತೀಯ ಪಾಂಡ್ಯ!


    ಪಾಕಿಸ್ತಾನದ ಪರ ಇಫ್ತಿಕಾರ್ ಅಹ್ಮದ್ ಅವರು 34 ಎಸೆತಗಳಲ್ಲಿ 51 ರನ್ ಮತ್ತು ಶಾನ್ ಮಸೂದ್ ಅವರು 52 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ಅರ್ಷ್‌ದೀಪ್ ಸಿಂಗ್ 4 ಓವರ್ ಗಳಲ್ಲಿ 32 ರನ್ ನೀಡಿ 3 ವಿಕೆಟ್ ಕಬಳಿಸಿದರು.

    Published by:Precilla Olivia Dias
    First published: