Poonam Pandey: ಅಭಿನಂದನ್ ಹೆಸರಲ್ಲಿ ಟ್ರೋಲ್; ಒಳ ಉಡುಪು ಬಿಚ್ಚಿ ಪಾಕ್​ಗೆ ತಿರುಗೇಟು ನೀಡಿದ ಪೂನಂ!

Poonam Pandey Hot Reply: ಇಂಡಿಯಾ-ಪಾಕ್ ಪಂದ್ಯದ ಕುರಿತು ಹೊಸ ಜಾಹೀರಾತು ವಿಡಿಯೋ ಒಂದನ್ನು ಪಾಕಿಸ್ತಾನ ಹರಿಬಿಟ್ಟಿತ್ತು. ಈ ಬಗ್ಗೆ ವಿಡಿಯೋ ಒಂದನ್ನು ಮಾಡಿ ಪೂನಂ ಪಾಂಡೆ ತಿರುಗೇಟು ನೀಡಿದ್ದಾರೆ.

Rajesh Duggumane | news18
Updated:June 14, 2019, 3:03 PM IST
Poonam Pandey: ಅಭಿನಂದನ್ ಹೆಸರಲ್ಲಿ ಟ್ರೋಲ್; ಒಳ ಉಡುಪು ಬಿಚ್ಚಿ ಪಾಕ್​ಗೆ ತಿರುಗೇಟು ನೀಡಿದ ಪೂನಂ!
ಪೂನಂ ಪಾಂಡೆ ಇನ್​ಸ್ಟಾಗ್ರಾಂ ಫೋಟೋ
Rajesh Duggumane | news18
Updated: June 14, 2019, 3:03 PM IST
ಭಾರತ-ಪಾಕಿಸ್ತಾನ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಮೆಗಳು ಕೂಡ ಹರಿದಾಡುತ್ತಿವೆ. ಈ ಮಧ್ಯೆ ಇಂಡಿಯಾ-ಪಾಕ್ ಮ್ಯಾಚ್ ಕುರಿತು ಹೊಸ ವಿಡಿಯೋ ಒಂದನ್ನು ಹರಿಬಿಟ್ಟಿದ್ದ ಪಾಕಿಸ್ತಾನ, ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ಗೆ ಅವಮಾನ ಮಾಡಿತ್ತು. ನಟಿ ಪೂನಂ ಪಾಂಡೆ ಇದಕ್ಕೆ ಭಿನ್ನ ರೀತಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಸೇನೆ ಬಂಧಿಸಿದ್ದ ಭಾರತ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿಚಾರ ಭಾರೀ ಸದ್ದು ಮಾಡಿತ್ತು. ಪಾಕಿಸ್ತಾನ ಸೇನೆ ಅಭಿನಂದನ್​ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿತ್ತು. ‘ನಿಮ್ಮ ಉದ್ದೇಶವೇನು? ಟೀ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಪಾಕ್ ಅಧಿಕಾರಿಗಳು ಅಭಿನಂದನ್​​ ಮುಂದಿಟ್ಟಿದ್ದರು.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು. ಇದೇ ಮಾದರಿಯಲ್ಲಿ ವಿಡಿಯೋ ಒಂದನ್ನು ಪಾಕ್​ ಸಿದ್ಧಪಡಿಸಿದೆ.

ಈ ಬಗ್ಗೆ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ ಪೂನಂ. “ನಾನು ಈ ವಿಡಿಯೋವನ್ನು ನೋಡಿದ್ದೇನೆ. ನಮ್ಮ ಹೀರೋ ಮೇಲೆ ಪಾಕಿಸ್ತಾನದವರು ಜೋಕ್ ಮಾಡಿದ್ದಾರೆ. ಇದು ಒಳ್ಳೆಯದಲ್ಲ. ನಿಮಗೆ ಟೀ ಕಪ್ ಯಾಕೆ?” ಎಂದು ಹೇಳುತ್ತಲೇ ಒಳ ಉಡುಪನ್ನು ತೆಗೆದಿದ್ದಾರೆ ಪೂನಂ! "ನೀವು ಇದನ್ನು ಪಡೆಯಲು ಮಾತ್ರ ಅರ್ಹರು. ಇದರಲ್ಲೂ ಟೀ ಕುಡಿಯಬಹುದು," ಎಂದು ಪಾಕ್​ಗೆ ಚಾಟಿ ಬೀಸಿದ್ದಾರೆ.

 



 

ಪಾಕ್ ಜಾಹೀರಾತಿನಲ್ಲಿ ಅಭಿನಂದನ್ ಮಾದರಿಯಲ್ಲಿ ಕೊಹ್ಲಿಯವರನ್ನು ಸಂದರ್ಶನ ಮಾಡುತ್ತಿದ್ದಾರೆ ಎಂಬುದನ್ನು ಸೂಚ್ಯವಾಗಿ ತೋರಿಸಲಾಗಿದೆ. ‘ನೀವು ಟಾಸ್ ಗೆದ್ದರೆ ಏನು ಮಾಡುತ್ತೀರಿ?, ’11 ಜನರ ತಂಡದಲ್ಲಿ ಯಾರೆಲ್ಲ ಇರುತ್ತಾರೆ’ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಈ ವೇಳೆ ಅಭಿನಿಂದನ್ ರೀತಿ ಕಾಣುವ ವ್ಯಕ್ತಿ, ‘ನಾನು ಅದನ್ನು ಹೇಳಲು ಸಾಧ್ಯವಿಲ್ಲ’ ಎನ್ನುವ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲ ಟೀ ಚೆನ್ನಾಗಿದೆಯೇ ಎಂದು ಕೇಳುವ ಮೂಲಕ ಅಭಿನಂದನ್ ಅವರ ವಿಡಿಯೋವನ್ನು ನೆನಪಿಸಿದೆ.

First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...