Vinay BhatVinay Bhat
|
news18 Updated:June 2, 2020, 4:10 PM IST
ರವಿಶಾಸ್ತ್ರಿ (ಟೀಂ ಇಂಡಿಯಾ ಕೋಚ್)
- News18
- Last Updated:
June 2, 2020, 4:10 PM IST
ಬೆಂಗಳೂರು (ಮೇ. 14): ಒಂದೂವರೆ ತಿಂಗಳುಗಳ ಕಾಲ ನಡೆದ ಐಪಿಎಲ್ 12ನೇ ಆವೃತ್ತಿಗೆ ಈಗಾಗಲೇ ತೆರೆ ಬಿದ್ದಿದ್ದಾಗಿದೆ. ಇದರ ಬೆನ್ನಲ್ಲೇ ವಿಶ್ವಕಪ್ ಕ್ರಿಕೆಟ್ ಸಮರದ ಕಾವು ಶುರುವಾಗುತ್ತಿದೆ. ಇಲ್ಲಿಯವರೆಗೂ ವಿವಿಧ ದೇಶಗಳ ಆಟಗಾರರು ಬೇರೆಬೇರೆ ತಂಡಗಳಲ್ಲಿ ಒಟ್ಟಾಗಿ ಆಡಿದ್ದರು. ಆದರೀಗ ತಮ್ಮ ತಮ್ಮ ದೇಶದ ಜೆರ್ಸಿ ತೊಟ್ಟು ವಿಶ್ವಕಪ್ನ ಅಖಾಡಕ್ಕೆ ಧುಮುಕಲು ಸಜ್ಜಾಗುತ್ತಿದ್ದಾರೆ.
ಆಂಗ್ಲರ ನಾಡಲ್ಲಿ ಮೇ 30ರಿಂದ ಆರಂಭಗೊಳ್ಳಲಿರುವ ಐಸಿಸಿ ಪುರುಷರ ವಿಶ್ವಕಪ್ಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಈ ಮಧ್ಯೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ತಂಡದಲ್ಲಿನ ಪ್ರಮುಖ ವಿಚಾರಗಳಲ್ಲಿ ಹಂಚಿಕೊಂಡಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಆಡಲು ಭಾರತ ಕ್ರಿಕೆಟ್ ತಂಡ ಎಲ್ಲಾ ಮೂಲೆಗಳಿಂದಲೂ ಸಂಪೂರ್ಣ ಸಜ್ಜಾಗಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಭಾರತ ತಂಡ ಈಗ ಮತ್ತಷ್ಟು ಬಲಿಷ್ಠವಾಗಿದೆ. ಕಠಿಣ ಸಂದರ್ಭದಲ್ಲಿ ದಿಟ್ಟ ಆಟವಾಡುವ 15 ಆಟಗಾರರು ನಮ್ಮ ತಂಡದಲ್ಲಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: 'ನನಗೆ ಅಶ್ಲೀಲ ಕಮೆಂಟ್ಗಳು ಬರುತ್ತಿವೆ, ನೊಂದಿದ್ದೇನೆ' ಎಂದ ವೈರಲ್ ಆರ್ಸಿಬಿ ಫ್ಯಾನ್ ಗರ್ಲ್
ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆ ಮಾತನಾಡಿದ ಇವರು, ವಿಶ್ವಕಪ್ ಎಂದು ಬಂದಾಗ ಅವರ ಆಲೋಚನೆಗಳು ಭಿನ್ನವಾಗಿರುತ್ತದೆ. ಐಪಿಎಲ್ನಲ್ಲಿ ಕಳಪೆ ಆಟ ಆಡಿದರೂ ಅದು ವಿಶ್ವಕಪ್ಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಂತೆಯೆ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ಕುರಿತು ಮಾತನಾಡಿದ ಶಾಸ್ತ್ರಿ, ಭಾರತ ತಂಡದಲ್ಲಿ ನಾಲ್ಕನೇ ಸ್ಥಾನಕ್ಕಾಗಿ ಅನೇಕ ಆಯ್ಕೆಗಳಿವೆ. ವಿಜಯ್ ಶಂಕರ್ ನಾಲ್ಕನೇ ಸ್ಥಾನಕ್ಕೆ ಹೇಳಿ ಮಾಡಿಸಿದ ಆಟಗಾರ ಎಂದು ಬಿಸಿಸಿಐ ಅದಾಗಲೆ ಹೇಳಿದೆ. ಅಲ್ಲದೆ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಆಟಗಾರರು ಅನೇಕರಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: World Cup 2019: ಜಾಧವ್ ವಿಶ್ವಕಪ್ನಿಂದ ಔಟ್?; ಮನಿಶ್ ಪಾಂಡೆ ಜೊತೆ ರೇಸ್ನಲ್ಲಿದ್ದಾರೆ ಇನ್ನಿಬ್ಬರು!ಇನ್ನು ನಾಯಕ ವಿರಾಟ್ ಕೊಹ್ಲಿ ಹಾಗೂ ಎಂ ಎಸ್ ಧೋನಿ ಬಗ್ಗೆ ಮಾತನಾಡಿದ ಶಾಸ್ತ್ರಿ, ಇಬ್ಬರೂ ಆಟಗಾರರು ಪರಸ್ಪರ ಇನ್ನಿಲ್ಲದ ಗೌರವ ಹೊಂದಿದ್ದಾರೆ. ಇಬ್ಬರೂ ಸಾಧನೆ ಶಿಖರವನ್ನು ಏರಿದವರು. ಧೋನಿಯಿಂದ ಕಲಿಯುವುದು ಸಾಕಷ್ಟಿದೆ. ಬ್ಯಾಟಿಂಗ್ ಜೊತೆಗೆ ವಿಕೆಟ್ ಹಿಂದೆ ನಿಂತು ಅವರು ಮಾಡುವ ಕೆಲಸ ಅದ್ಭುತ ಎಂದಿದ್ದಾರೆ.
First published:
May 14, 2019, 6:52 PM IST