‘ತಂಡದಿಂದ ಕಿತ್ತೆಸೆಯುವ ಮುನ್ನ ಧೋನಿಯೇ ನಿವೃತ್ತಿ ನೀಡಲಿ’ ಎಂದ ಭಾರತೀಯ ಮಾಜಿ ಆಟಗಾರ

ಸುನೀಲ್ ಗವಾಸ್ಕರ್ ನೀಡಿರುವ ಹೇಳಿಕೆ ಸದ್ಯ ಧೋನಿ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇತ್ತ ಧೋನಿ ಅನುಪಸ್ಥಿತಿಯಲ್ಲಿ ಅವರ ಸ್ಥಾನ ತುಂಬಿರುವ ರಿಷಭ್ ಪಂತ್‌ ಅವಕಾಶ ಕೊಟ್ಟಷ್ಟು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

Vinay Bhat | news18-kannada
Updated:September 21, 2019, 9:15 AM IST
‘ತಂಡದಿಂದ ಕಿತ್ತೆಸೆಯುವ ಮುನ್ನ ಧೋನಿಯೇ ನಿವೃತ್ತಿ ನೀಡಲಿ’ ಎಂದ ಭಾರತೀಯ ಮಾಜಿ ಆಟಗಾರ
ಎಂ ಎಸ್ ಧೋನಿ
Vinay Bhat | news18-kannada
Updated: September 21, 2019, 9:15 AM IST
ಬೆಂಗಳೂರು (ಸೆ. 21): ಕಳೆದ ಕೆಲ ವಾರಗಳಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ ಭಾರತದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ತಂಡದಿಂದ ಅವರನ್ನು ಹೊರಹಾಕುವ ಮುನ್ನ ಧೋನಿಯೇ ನಿವೃತ್ತಿ ಘೋಷಿಸುವುದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.

'ಧೋನಿ ಸಮಯ ಮುಗಿದಿದೆ. ಟೀಂ ಇಂಡಿಯಾ ಇನ್ನು ಧೋನಿಯನ್ನು ಕೈಬಿಟ್ಟು ಅವರ ಜಾಗಕ್ಕೆ ಸೂಕ್ತ ಆಟಗಾರನನ್ನು ಹುಡುಕುವ ಗಳಿಗೆ ಬಂದಾಗಿದೆ. ಧೋನಿ ಏನು ಯೋಚಿಸುತ್ತಿದ್ದಾರೆ, ಅವರ ಮನಸ್ಸಲ್ಲಿ ಏನಿದೆ ಎಂಬುದು ಯಾರಿಗೂ ತಿಳಿದಿಲ್ಲ. ಭಾರತೀಯ ಕ್ರಿಕೆಟ್‌ನೊಂದಿಗಿನ ತನ್ನ ಭವಿಷ್ಯ ಏನೆಂಬುದನ್ನು ಅವರೇ ಸ್ಪಷ್ಟಪಡಿಸಬೇಕು' ಎಂದು ಗವಾಸ್ಕರ್ ಹೇಳಿದ್ದಾರೆ.

ಇನ್ನು 'ಧೋನಿಗೆ ಈಗಾಗಲೇ 38 ವರ್ಷ ಪ್ರಾಯ ಆಗಿದೆ. ಟಿ-20 ವಿಶ್ವಕಪ್​ನಲ್ಲಿ ಆಡುವ ಆಸೆ ಹೊಂದಿದ್ದರೆ ಆಗ ಅವರಿಗೆ 39 ವರ್ಷ ಆಗಿರುತ್ತದೆ. ಅಲ್ಲದೆ ಬಿಸಿಸಿಐ ಸದ್ಯ ಯುವ ಆಟಗಾರರತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಇದನ್ನು ಧೋನಿ ಅರಿಯಬೇಕಿದೆ'

ಮೌನ ಮುರಿದ ಆಯ್ಕೆ ಸಮಿತಿ ಅಧ್ಯಕ್ಷ; ಪಂತ್ ಜಾಗದಲ್ಲಿ ಯಾರಿಗೆ ಸಿಗುತ್ತೆ ಸ್ಥಾನ?

'ಧೋನಿ ಒಬ್ಬ ಅತ್ಯುತ್ತಮ ನಾಯಕ, ಉತ್ತಮ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಎಲ್ಲದಕ್ಕೂ ಕೊನೆ ಎಂಬುದು ಇರುತ್ತದೆ. ಕುಟುಂಬದ ಜೊತೆ ಸಮಯ ಕಳೆಯಲಿ. ಆದಷ್ಟು ಬೇಗ ಧೋನಿ ನಿವೃತ್ತಿ ಘೊಷಣೆ ಮಾಡುವುದು ಒಳ್ಳೆಯ ನಿರ್ಧಾರ ಆಗಲಿದೆ' ಎಂದು ಗವಾಸ್ಕರ್ ಹೇಳಿದ್ದಾರೆ.

ಇತ್ತೀಚೆಗಷ್ಟೆ ಆಯ್ಕೆ ಸಮಿತಿ ಹಾಗೂ ನಾಯಕ ವಿರಾಟ್ ಕೊಹ್ಲಿ, ಧೋನಿ ನಿವೃತ್ತಿ ವದಂತಿಗಳನ್ನು ತಳ್ಳಿ ಹಾಕಿದ್ದರು. ಈ ಬಗ್ಗೆ ನಾವು ಯಾವುದೇ ಒತ್ತಡ ಹೇರುವುದಿಲ್ಲ. ನಿವೃತ್ತಿ ಧೋನಿಗೆ ಬಿಟ್ಟ ವಿಚಾರ ಎಂದಿದ್ದರು.

ಆದರೆ, ಸುನೀಲ್ ಗವಾಸ್ಕರ್ ನೀಡಿರುವ ಹೇಳಿಕೆ ಸದ್ಯ ಧೋನಿ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇತ್ತ ಧೋನಿ ಅನುಪಸ್ಥಿತಿಯಲ್ಲಿ ಅವರ ಸ್ಥಾನ ತುಂಬಿರುವ ರಿಷಭ್ ಪಂತ್‌ ಅವಕಾಶ ಕೊಟ್ಟಷ್ಟು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
Loading...

First published:September 21, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...