ಬಡತನದಲ್ಲೂ ದೇಶಕ್ಕಾಗಿ 4 ಚಿನ್ನದ ಪದಕ ತಂದುಕೊಟ್ಟ ಹಿಮಾದಾಸ್​

ಜೆಕ್​ ಗಣರಾಜ್ಯದಲ್ಲಿ ನಡೆದ ಟ್ಯಾಬರ್​ ಅಥ್ಲೀಟ್​ ಮೀಟ್​ನಲ್ಲಿ ನಡೆದ 200 ಮೀಟರ್​ ರೇಸ್​ನಲ್ಲಿ 23.25 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಹಿಮಾದಾಸ್​ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ವಿಕೆ ವಿಸ್ಮ ಕೂಡ 23.45 ಸೆಕೆಂಡುಗಳಲ್ಲಿ ಬೆಳ್ಳಿಯ ಪದಕಗಳಿಸಿಕೊಂಡಿದ್ದಾರೆ.

ಇದರ ಜೊತೆಗೆ ಏಸ್ ಇಂಡಿಯನ್ ಸ್ಪ್ರಿಂಟರ್ ಹಿಮಾ ದಾಸ್ ತನ್ನ ಒಂದು ತಿಂಗಳ ಸಂಬಳವನ್ನು ಅಸ್ಸಾಂನ ಕೋವಿಡ್-19 ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

ಇದರ ಜೊತೆಗೆ ಏಸ್ ಇಂಡಿಯನ್ ಸ್ಪ್ರಿಂಟರ್ ಹಿಮಾ ದಾಸ್ ತನ್ನ ಒಂದು ತಿಂಗಳ ಸಂಬಳವನ್ನು ಅಸ್ಸಾಂನ ಕೋವಿಡ್-19 ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

  • News18
  • Last Updated :
  • Share this:
ಒಂದೆಡೆ ತಯ್ನಾಡು ಸಂಪೂರ್ಣ ಜಲಾವೃತಗೊಂಡಿದ್ದರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ಮೂಲಕ ಅಥ್ಲೀಟ್​ ಹಿಮಾದಾಸ್​ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.

ಜೆಕ್​ ಗಣರಾಜ್ಯದಲ್ಲಿ ನಡೆದ ಟ್ಯಾಬರ್​ ಅಥ್ಲೀಟ್​ ಮೀಟ್​ನಲ್ಲಿ ನಡೆದ 200 ಮೀಟರ್​ ರೇಸ್​ನಲ್ಲಿ 23.25 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಹಿಮಾದಾಸ್​ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ವಿಕೆ ವಿಸ್ಮ ಕೂಡ 23.45 ಸೆಕೆಂಡುಗಳಲ್ಲಿ ಬೆಳ್ಳಿಯ ಪದಕಗಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮೈತ್ರಿ ಸರ್ಕಾರ ಇಂದೇ ಬಹುಮತ ಸಾಬೀತುಪಡಿಸಲಿ; ಸ್ಪೀಕರ್​ಗೆ ಆದೇಶಿಸಿದ ರಾಜ್ಯಪಾಲರು; ಕಿಡಿಕಾರಿದ ಕೈ-ತೆನೆ ನಾಯಕರು!ಈವರೆಗೂ ಹಿಮಾದಾಸ್​ 4 ಚಿನ್ನದ ಪದಕವನ್ನು ಗೆದ್ದಿದ್ದಾರೆ. ಜು. 2 ರಂದು ಪೊಲೆಂಟ್​ನಲ್ಲಿ ನಡೆದ ಪೊಜ್ನಾನ್​ ಅಥ್ಲೆಟಿಕ್ಸ್​​ ಪ್ರಿಕ್ಸ್​​ನಲ್ಲಿ ನಡೆದ 23.63 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮೊದಲ ಚಿನ್ನವನ್ನು ಗೆದ್ದಿದ್ದರು. ನಂತರ ಜು.8 ರಂದು ಕುಟ್ಮೊ ಅಥ್ಲೆಟಿಕ್ಸ್​ ರೇಸ್​​ನಲ್ಲಿ 23.97 ಸೆಕೆಂಡ್​ಗಳಲ್ಲಿ 2ನೇ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಜು.13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ರೇಸ್​ನಲ್ಲಿ 200 ಮೀ ಸ್ಪರ್ಧೆಯಲ್ಲಿ 23.43 ಸೆಕೆಂಡ್​​ಗಳಲ್ಲಿ ಪೂರ್ಣಗೊಳಿಸುವ ಮೂಲಕ 3 ನೇ ಚಿನ್ನದ ಪದಕ ಗೆದ್ದಿದ್ದಾರೆ. ​ಈ ಮೂಲಕ 15 ದಿನಗಳಲ್ಲಿ 4 ಚಿನ್ನದ ಪದಕವನ್ನು ಗೆದ್ದ ಹಿಮಾದಾಸ್​ ಕ್ರೀಡಾಭಿಮಾನಿಗಳಿಂದ ಅಭಿನಂದನೆ ಗಿಟ್ಟಿಸಿಕೊಂಡಿದ್ದಾರೆ.
First published: